ಭಾರತೀಯ ಮೂಲದ ಸಿಖ್ ಮಹಿಳೆಗೆ ಒಲಿಯಿತು ಅಮೆರಿಕದಲ್ಲಿ ಜಡ್ಜ್ ಹುದ್ದೆ.!

ಭಾರತೀಯ ಮೂಲದ ಸಿಖ್ ಮಹಿಳೆಗೆ ಒಲಿಯಿತು ಅಮೆರಿಕದಲ್ಲಿ ಜಡ್ಜ್ ಹುದ್ದೆ.!

ಅಮೆರಿಕ: ಭಾರತೀಯ ಮೂಲದ ಸಿಖ್ ಮಹಿಳೆಯೊಬ್ಬರು ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಗೇರಿದ್ದಾರೆ. ಅಮೆರಿಕದಲ್ಲಿ ನ್ಯಾಯಾಧೀಶ ಹುದ್ದೆಗೇರಿದ ಮೊದಲ ಸಿಖ್ ಮಹಿಳಾ ನ್ಯಾಯಾಧೀಶೆ ಎಂಬ ಹಿರಿಮೆಗೆ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಪಾತ್ರರಾಗಿದ್ದಾರೆ. ಅಮೆರಿಕದ ಟೆಕ್ಸಾಸ್‌ನಲ್ಲಿನ ಹ್ಯಾರಿಸ್ ಕೌಂಟಿ ಜಡ್ಜ್ ಆಗಿ ಅವರು ನೇಮಕ ಆಗಿದ್ದಾರೆ. ಹ್ಯಾರಿಸ್ ಕೌಂಟಿಯ ಸಿವಿಲ್ ಕೋರ್ಡ್ ನ್ಯಾಯಾಧೀಶರಾಗಿ ನೇಮಕವಾಗಿದ್ದೇನೆ ಎಂದು ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನಿಜಕ್ಕೂ ಗೌರವದ ವಿಚಾರ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಒಂದು ಐತಿಹಾಸಿಕ ಕ್ಷಣ ಎಂದು ಅವರು ಹೇಳಿದ್ದು, ಅಮೆರಿಕದ ನ್ಯಾಯಾಂಗವು ಸಿಖ್ ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ಒದಗಿಸುತ್ತಿದೆ ಎಂದು ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ವಿವರಿಸಿದ್ದಾರೆ.

ಇದನ್ನೂ ಓದಿ:  ಸಮುದ್ರದ ಆಳಕ್ಕೆ ನೌಕೆ ಕಳಿಸಿಕೊಡಲು ಸಿದ್ಧತೆ ಪೂರ್ಣ – ಸದ್ಯದಲ್ಲೇ ಸಾಗರಯಾನಕ್ಕೆ ಗ್ರೀನ್ ಸಿಗ್ನಲ್

ಅಮೆರಿಕದ ಹ್ಯೂಸ್ಟನ್‌ನಲ್ಲೇ ಹುಟ್ಟಿ ಬೆಳೆದ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು, ಇದೀಗ ಅಮೆರಿಕದ ಬೆಲ್ಲಾರೆ ಎಂಬಲ್ಲಿ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದಾರೆ. ಮನ್‌ಪ್ರೀತ್ ಅವರ ತಂದೆ 1970ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದಿದ್ದರು. ಮನ್‌ಪ್ರೀತ್ ಮೋನಿಕಾ ಸಿಂಗ್ ಅಲ್ಲೇ ಹುಟ್ಟಿ ಬೆಳೆದರು. ಅಟಾರ್ನಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಹಲವರು ನಾಗರಿಕ ಹಕ್ಕುಗಳ ಸಂಘಟನೆಗಳ ಜೊತೆ ಕೆಲಸ ಮಾಡಿದ್ದಾರೆ. ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸಂಘಟನೆಗಳ ಜೊತೆಗೂ ಗುರುತಿಸಿಕೊಂಡಿದ್ದಾರೆ. ಅಮೆರಿಕ ದೇಶದಲ್ಲಿ ಈವರೆಗೂ ಸಿಖ್ ಸಮುದಾಯದ ಯಾವುದೇ ಮಹಿಳೆಯೂ ನ್ಯಾಯಾಧೀಶ ಹುದ್ದೆಗೆ ಏರಿರಲಿಲ್ಲ. ಇದೀಗ ಮನ್ಪ್ರೀತ್ ಮೋನಿಕಾ ಸಿಂಗ್ ಅವರು ಈ ಸಾಧನೆ ಮಾಡಿದ್ದಾರೆ.

suddiyaana