ಬೆಂಗಳೂರಿನಲ್ಲಿ ‘ನಮೋ’ ಅಬ್ಬರ – ಪ್ರಧಾನಿ ರೋಡ್ ಶೋಗೆ ಹೂಮಳೆಯ ಸ್ವಾಗತ

ಬೆಂಗಳೂರಿನಲ್ಲಿ ‘ನಮೋ’ ಅಬ್ಬರ – ಪ್ರಧಾನಿ ರೋಡ್ ಶೋಗೆ ಹೂಮಳೆಯ ಸ್ವಾಗತ

ಬೆಂಗಳೂರಿನಲ್ಲಿ ಶನಿವಾರ ಸಂಜೆ ನರೇಂದ್ರ ಮೋದಿ ಭರ್ಜರಿಯಾಗಿಯೇ ರೋಡ್ ಶೋ ನಡೆಸಿದ್ದಾರೆ. ಸಂಜೆ 6.15ಕ್ಕೆ ಮಾಗಡಿ ರಸ್ತೆ ಜಂಕ್ಷನ್‌ನಿಂದ ಆರಂಭವಾದ ರೋಡ್‌ ಶೋ, ರಿಂಗ್‌ ರೋಡ್‌ ಮೂಲಕ ಸುಮನಹಳ್ಳಿ ಜಂಕ್ಷನ್‌ವರೆಗೂ ಸಾಗಿತು. ಪ್ರಧಾನಿ ಮೋದಿಗೆ ಬಿಜೆಪಿ ಬೆಂಬಲಿಗರು ಹೂ ಮಳೆ ಸ್ವಾಗತ ಕೋರಿದರು. ಜನರತ್ತ ಕೈ ಬೀಸಿದ ಮೋದಿಗೆ ಬಿಜೆಪಿ ಬೆಂಬಲಿಗರು ದಾರಿಯುದ್ದಕ್ಕೂ ಹೂವು ಹಾಕುವ ಮೂಲಕ ಸಂತಸ ಪಟ್ಟರು. ಕರ್ನಾಟಕದ ಪ್ರಸಿದ್ಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ಪಟ ಕುಣಿತ, ಹುಲಿ ವೇಷ, ಮದ್ದಳೆ ಸೇರಿದಂತೆ ಹಲವು ತಮಡಗಳಿಂದ ನೃತ್ಯ ವಾದ್ಯತಂಡಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಕಲ್ಲೇಟಿನಿಂದ ಚೇತರಿಸಿಕೊಂಡ ಪರಮೇಶ್ವರ್ – ‘ರಾಜಕಾರಣದಲ್ಲಿ ರಕ್ತಸಿಕ್ತ ಅಧ್ಯಾಯ’ ಎಂದು ಕೈ ನಾಯಕರ ಆಕ್ರೋಶ

ಬುಲೆಟ್‌ ಪ್ರೂಫ್‌ ವಾಹನದಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಚಲವಾದಿ ನಾರಾಯಣಸ್ವಾಮಿ ಮೋದಿ ಜೊತೆಗೆ ರೋಡ್ ಶೋನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಶಾಸಕರುಗಳಾದ ಎಸ್‌ಟಿ ಸೋಮಶೇಖರ್‌, ಮುನಿರತ್ನ ನಾಯ್ಡು, ಗೋಪಾಲಯ್ಯ ಅವರು ರೋಡ್‌ ಶೋನ ಮುಂದಾಳತ್ವ ವಹಿಸಿಕೊಂಡಿದ್ದರು. ಪ್ರಧಾನಿ ಮೋದಿ ಸಾಗುವ ರಸ್ತೆ ಉದ್ದಕ್ಕೂ ಬಿಗಿ ಭದ್ರತೆ ವಹಿಸಲಾಗಿತ್ತು. ನೈಸ್‌ ರೋಡ್‌ ಜಂಕ್ಷನ್‌ನಿಂದ ಸಮನಹಳ್ಳಿವರೆಗೆ ಮೋದಿ ರೋಡ್‌ ಶೋ ನಡೆಸಿದರು. ಸುಮಾರು 5.3 ಕಿಲೋ ಮೀಟರ್‌ ರೋಡ್‌ ಶೋ ನಡೆಸಿದ್ದು, ರಸ್ತೆ ಉದ್ದಕ್ಕೂ ಮೋದಿ ಮೋದಿ ಎಂದು ಬಿಜೆಪಿ ಬೆಂಬಲಿಗರು ಜೈಕಾರ ಕೂಗಿದರು.

suddiyaana