ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು – ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಎಡವಿದ್ದು ಎಲ್ಲಿ?
ದಕ್ಷಿಣ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್ ಮ್ಯಾಚ್ನ್ನ ಟೀಂ ಇಂಡಿಯಾ ಇಷ್ಟೊಂದು ಹೀನಾಯವಾಗಿ ಸೋಲುತ್ತೆ ಅಂತಾ ಯಾರೂ ಕೂಡ ಅಂದುಕೊಂಡಿರಲಿಲ್ಲ. ಇನ್ನಿಂಗ್ಸ್ ಡಿಫೀಟ್.. ಮ್ಯಾಚ್ ಆರಂಭಕ್ಕೂ ಮುನ್ನ ನಡೆದ ಪ್ರೆಸ್ಮೀಟ್ನಲ್ಲಿ ನಾವು ಗೆಲ್ಲೋಕೆ ಡೆಸ್ಪರೇಟ್ ಆಗಿದ್ದೀವಿ ಎಂದಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಪಡೆ ಸೌತ್ ಆಫ್ರಿಕಾ ಮುಂದೆ ಅಕ್ಷರಶ: ಮಂಡಿಯೂರಿದ್ದಾರೆ. ತಂಡದ ಪರ್ಫಾಮೆನ್ಸ್ ನೋಡಿದ್ರೆ ಇದೇನಾ ವರ್ಲ್ಡ್ಕ್ಲಾಸ್ ಟೀಂ ಇಂಡಿಯಾ. ಐಸಿಸಿ ಟೆಸ್ಟ್ ಱಂಕಿಂಗ್ನಲ್ಲಿ ನಂಬರ್-1 ಪೊಸೀಶನ್ನಲ್ಲಿರೋದು ಇವರೇನಾ ಅನ್ನೋ ಡೌಟ್ ಬರೋದಂತೂ ಸುಳ್ಳಲ್ಲ. ಕೇವಲ ಮೂರೇ ದಿನಕ್ಕೆ ಮ್ಯಾಚ್ ಮುಗಿದಿದೆ. ಯಾವ ಹಂತದಲ್ಲೂ ಕೂಡ ಫೈಟ್ ನೀಡಲೇ ಇಲ್ಲ. ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಅಂದ್ರೆ ಏನು ಅನ್ನೋದನ್ನೇ ಮರೆತಿರೋ ಹಾಗಿದೆ. ಟೀಂ ಇಂಡಿಯಾ ಸೋಲಿಗೆ ನಿಜವಾದ ಕಾರಣ ಏನು? ಸೋಲಿನ ಬಳಿಕ ರೋಹಿತ್ ಶರ್ಮಾ ಗೂಬೆ ಕೂರಿಸಿರೋದು ಯಾರ ಮೇಲೆ? ಅನ್ನೋದನ್ನು ವಿವರ ಇಲ್ಲಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು – ರೋಹಿತ್ ಶರ್ಮಾ ಲೆಕ್ಕಾಚಾರ ಫೇಲ್?
ಟೆಸ್ಟ್ ಮ್ಯಾಚ್ ಅಂದರೆ ಮೊದಲ ದಿನದಾಟದಲ್ಲೇ 90 ಓವರ್ಗಳಿರುತ್ತೆ. ಆದರೆ, ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 101 ಓವರ್ಗಳನ್ನ ಆಡಿದ್ದಾರೆ ಅಷ್ಟೇ. ಫಸ್ಟ್ ಇನ್ನಿಂಗ್ಸ್ನಲ್ಲಿ ಕೇವಲ 67 ಓವರ್ ಆಡಿ 245 ರನ್ಗೆ ಆಲೌಟ್ ಆದರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ 34 ಓವರ್ಗಳಲ್ಲಿ ಬರೀ 131 ರನ್ಗಳಿಗೆ ಅಲೌಟ್ ಆಗಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಕ್ಯಾಪ್ಟನ್ಸಿ ಎಲ್ಲಾ ವಿಭಾಗದಲ್ಲೂ ಟೀಂ ಇಂಡಿಯಾ ಕಂಪ್ಲೀಟ್ ಫೇಲ್ ಆಗಿದೆ. 3ನೇ ದಿನದಾಟದ ಆರಂಭದ ವೇಳೆ ಸೌತ್ ಆಫ್ರಿಕಾ 5 ವಿಕೆಟ್ಗಳನ್ನ ಕಳೆದುಕೊಂಡಿತ್ತು. ಆದ್ರೆ, ಆಫ್ರಿಕನ್ನರನ್ನ ಫಸ್ಟ್ ಇನ್ನಿಂಗ್ಸ್ನಲ್ಲಿ ಅಲೌಟ್ ಮಾಡೋಕೆ ಭಾರತದ ಬೌಲರ್ಸ್ ಒದ್ದಾಡಿದ್ರು. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಶಾರ್ದುಲ್ ಠಾಕೂರ್ ಇವಱರ ಬೌಲಿಂಗ್ ಕೂಡ ವರ್ಕೌಟ್ ಆಗಲೇ ಇಲ್ಲ. ಮಾರ್ಕೊ ಜಾನ್ಸನ್ ಕೂಡ 84 ರನ್ ಹೊಡೆದ್ರು. ಹೀಗಾಗಿ ಸೌತ್ ಆಫ್ರಿಕಾ ಫಸ್ಟ್ ಇನ್ನಿಂಗ್ಸ್ನಲ್ಲಿ 408 ರನ್ ಗಳಿಸ್ತು. 163 ರನ್ಗಳ ಇನ್ನಿಂಗ್ಸ್ ಲೀಡ್ ಪಡೆದುಕೊಂಡಿತ್ತು. ಆದ್ರೆ ಟೀಮ್ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಫಸ್ಟ್ ಇನ್ನಿಂಗ್ಸ್ ಗಿಂತಲೂ ಕೆಟ್ಟದಾಗಿಯೇ ಆಡಿದರು. ಲೀಸ್ಟ್ ಫಸ್ಟ್ ಇನ್ನಿಂಗ್ಸ್ಗಿಂತಾದ್ರೂ ಹೆಚ್ಚು ಸ್ಕೋರ್ ಮಾಡೋದು ಬಿಟ್ಟು ಕೇವಲ 131 ರನ್ಗೆ ಅಲೌಟ್ ಆದ್ರು.
ಸೆಕೆಂಡ್ ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ 0. ಫಸ್ಟ್ ಇನ್ನಿಂಗ್ಸ್ನಲ್ಲಿ 5 ರನ್ ಹೊಡೆದಿದ್ದ ರೋಹಿತ್, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದ್ದಾರೆ. ಔಟಾಗಿರೋದು ಮತ್ತದೇ ರಬಾಡ ಬೌಲಿಂಗ್ನಲ್ಲಿ. 14ನೇ ಬಾರಿಗೆ ರೋಹಿತ್ ಶರ್ಮಾ ಕಗಿಸೋ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ರಬಾಡ ಬೌಲಿಂಗ್ನ್ನ ರೀಡ್ ಮಾಡೋಕೆ ರೋಹಿತ್ ಶರ್ಮಾಗೆ ಸಾಧ್ಯವಾಗಿಲ್ಲ. ಹೀಗಾಗಿ ಕ್ಲೀನ್ ಬೌಲ್ಡ್ ಆದ್ರು. ಇನ್ನು ಯಶಸ್ವಿ ಜೈಸ್ವಾಲ್ 5 ರನ್ಗೆ ಔಟಾದ್ರು. ಶುಬ್ಮನ್ ಗಿಲ್ ಕೇವಲ 26 ರನ್ ಮಾಡಿ ವಿಕೆಟ್ ಒಪ್ಪಿಸಿದ್ರು. ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಪರೇಡ್ ಮಾಡಬೇಕು ಅಂತಾ ಮೊದಲೇ ನಿರ್ಧರಿಸಿದ್ರು ಅಂತಾ ಕಾಣ್ಸುತ್ತೆ. ಶ್ರೇಯಸ್ ಅಯ್ಯರ್ 6 ರನ್, ಕೆ.ಎಲ್. ರಾಹುಲ್ 4 ರನ್, ರವಿಚಂದ್ರನ್ ಅಶ್ವಿನ್ 0, ಶಾರ್ದುಲ್ ಠಾಕೂರ್ 2 ರನ್ ಹೀಗೆ ಬ್ಯಾಟ್ಸ್ಮನ್ಗಳು ಅಂದುಕೊಂಡವರೆ ಸಾಧನೆ ಸಿಂಗಲ್ ಡಿಜಿಟ್ ಅಷ್ಟೇ. ಆದ್ರೆ ಇನ್ನಿಂಗ್ಸ್ ಡಿಫೀಟ್ನಿಂದ ತಪ್ಪಿಸೋಕೆ ಕ್ರೀಸ್ನಲ್ಲಿ ನಿಂತಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್ಮನ್. ವಿರಾಟ್ ಕೊಹ್ಲಿ.. ಯಾರು ಆಡದಿದ್ರೇನು.. ವಿರಾಟ್ ಕೊಹ್ಲಿಯಂತೂ ಆಡಿಯೇ ಆಡ್ತಾರೆ. ಬೇರೆಲ್ಲಾ ಬ್ಯಾಟ್ಸ್ಮನ್ಗಳು ಹಾಗೆ ಬಂದು, ಹೀಗೆ ಹೋಗ್ತಿದ್ರೆ ವಿರಾಟ್ ಕೊಹ್ಲಿ ಮಾತ್ರ ಕ್ರೀಸ್ನಲ್ಲಿ ಸ್ಟೇಯಾಗಿದ್ರು. ಒಬ್ಬ ಕ್ವಾಲಿಟಿ, ಎಕ್ಸ್ಪೀರಿಯನ್ಸ್ ಬ್ಯಾಟ್ಸ್ಮನ್ ಹೇಗೆ ಆಡಬೇಕು ಅನ್ನೋದನ್ನ ಕೊಹ್ಲಿ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಕೊಹ್ಲಿಗೂ ಬೌಲಿಂಗ್ ಮಾಡಿರೋದು ಅದೇ ಸೌತ್ ಆಫ್ರಿಕಾ ಬೌಲರ್ಸ್ಗಳೇ ಅಲ್ವಾ. ಕೊಹ್ಲಿ ಏನು ಬೇರೆ ಬೌಲರ್ಸ್ಗಳನ್ನ ಫೇಸ್ ಮಾಡಿಲ್ಲ. ಆದ್ರೆ ಕೊಹ್ಲಿಗೆ ಮಾತ್ರ ಯಾಕೆ ಸ್ಕೋರ್ ಮಾಡೋಕೆ ಸಾಧ್ಯವಾಯ್ತು. ಅದಕ್ಕೆ ವಿರಾಟ್ ಕೊಹ್ಲಿ ಅಷ್ಟೊಂದು ಸ್ಪೆಷಲ್ ಬ್ಯಾಟ್ಸ್ಮನ್ ಆಗಿರೋದು. ಕೊಹ್ಲಿ 82 ಬಾಲ್ಗಳಲ್ಲಿ 76 ರನ್ ಹೊಡೆದ್ರು. ವಂಡೇ ಮ್ಯಾಚ್ನಂತೆಯೇ ಆಡಿದ್ರು. ಅಗ್ರೆಸ್ಸಿವ್ ಆಗಿ ಆಡದೆ ಕೊಹ್ಲಿಗೆ ಬೇರೆ ಆಪ್ಷನೇ ಇರಲಿಲ್ಲ. ಯಾಕಂದ್ರೆ ನಾನ್ಸ್ಟ್ರೈಕ್ ಎಂಡ್ನಿಂದ ಕೊಹ್ಲಿಗೆ ಯಾರಿಂದಲೂ ಸಾಥ್ ಸಿಕ್ಕಿಯೇ ಇಲ್ಲ. ಇನ್ನೊಬ್ಬರು ಯಾರಾದ್ರೂ ನಿಂತು ಆಡಿದ್ರಷ್ಟೇ ಪಾಟ್ನರ್ಶಿಪ್ ಬಿಲ್ಡ್ ಮಾಡಬಹುದು. ಆದ್ರೆ, ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಕೊಹ್ಲಿ ಜೊತೆಗೆ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತಿಲ್ಲ. ಆದ್ರೂ ಅಂಥಾ ಪ್ರೆಷರ್ ಟೈಮ್ನಲ್ಲೂ ಜವಾಬ್ದಾರಿ ಹೊತ್ತು ವಿರಾಟ್ ಕೊಹ್ಲಿ 76 ರನ್ ಹೊಡೆದಿರೋದು ನಿಜಕ್ಕೂ ಗ್ರೇಟ್ ಅಚೀವ್ಮೆಂಟ್. ಇದು ವಿರಾಟ್ ಕೊಹ್ಲಿಯ ವನ್ ಆಫ್ ದಿ ಬೆಸ್ಟ್ ಇನ್ನಿಂಗ್ಸ್ ಅಂದ್ರೆ ತಪ್ಪಾಗೋದಿಲ್ಲ. ಇದ್ರ ಜೊತೆಗೆ ವಿರಾಟ್ ಕೊಹ್ಲಿ ಕೆಲ ವರ್ಲ್ಡ್ ರೆಕಾರ್ಡ್ಗಳನ್ನ ಕೂಡ ಮಾಡಿದ್ದಾರೆ. 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 7 ಬಾರಿ 2000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟರ್ ಅಂದ್ರೆ ಅದು ಕೊಹ್ಲಿ ಮಾತ್ರ. 2012 – 2186 ರನ್, 2014-2286 ರನ್, 2016-2595 ರನ್, 2017-2818 ರನ್, 2018-2735 ರನ್, 2019-2455 ರನ್ ಹೊಡೆದಿದ್ರು. 1877ರ ಬಳಿಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ವರ್ಷವೊಂದರಲ್ಲಿ 7 ಬಾರಿ 2000 ಎಬೋವ್ ಸ್ಕೋರ್ ಮಾಡಿದ ಸಾಧನೆಯನ್ನ ಕೊಹ್ಲಿ ಮಾಡಿದ್ದಾರೆ. ಇದ್ರ ಜೊತೆಗೆ ಸೌತ್ ಆಫ್ರಿಕಾದಲ್ಲಿ ಅತೀ ಹೆಚ್ಚು ರನ್ ಮಾಡಿದ ಭಾರತೀಯ ಬ್ಯಾಟ್ಸ್ಮನ್ ರೆಕಾರ್ಡ್ ಕೂಡ ಈಗ ಕೊಹ್ಲಿ ಹೆಸರಲ್ಲೇ ಇದೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 51 ಇನ್ನಿಂಗ್ಸ್ ಗಳಲ್ಲಿ 1724 ರನ್ ಹೊಡೆದಿದ್ರು. ಆದ್ರೆ ಕೊಹ್ಲಿ 35 ಇನ್ನಿಂಗ್ಸ್ಗಳಲ್ಲೇ 1786 ರನ್ ಹೊಡೆದಿದ್ದಾರೆ. ಇಷ್ಟಾದ್ರೂ ವಿರಾಟ್ ಕೊಹ್ಲಿಯನ್ನ ಕೆಲವರು ಸೆಲ್ಫಿಶ್ ಪ್ಲೇಯರ್ ಅಂತಾರೆ.