ಆಹಾರ ಹುಡುಕುತ್ತಾ ಬಂದ ಕರಡಿಗೆ ಕಾದಿತ್ತುಒಂದು ಶಾಕ್! – ವಿಡಿಯೋ ವೈರಲ್…
ಕೆಲವೊಂದು ಪ್ರಾಣಿಗಳು ಸದಾ ಏನಾದರೂ ತುಂಟಾಟಗಳನ್ನು ಮಾಡುತ್ತಲೇ ಇರುತ್ತವೆ. ಆ ಮುಗ್ಧ ಪ್ರಾಣಿಗಳ ತುಂಟಾಟ ಹೇಗೇ ಇದ್ದರೂ ನೋಡುವುದೇ ಚಂದ. ಕೆಲ ಪ್ರಾಣಿಗಳು ಮನುಷ್ಯರ ಬಳಿ ಹೆಚ್ಚಾಗಿ ಆಹಾರಕ್ಕಾಗಿ ಬರುತ್ತವೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ವೇಳೆ ಹೆಚ್ಚಾಗಿ ಮಂಗಗಳು ಪ್ರವಾಸಿಗರ ಬಳಿ ಇದ್ದ ಚೀಲವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತದೆ. ನೀವು ಎಂದಾದರೂ ಕರಡಿ ಆಹಾರ ಕದಿಯುವುದನ್ನು ನೋಡಿದ್ದೀರಾ… ಇಲ್ಲೊಂದು ಕರಡಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರಿನಲ್ಲಿದ್ದ ತಿಂಡಿಯನ್ನು ತೆಗೆಯಲು ಪ್ರಯತ್ನಿಸುತ್ತಿದೆ. ನಂತರ ಏನಾಗುತ್ತದೆ ಅಂತ ನೀವೇ ನೋಡಿ.
ಇದನ್ನೂ ಓದಿ: Watch: ಕುಣಿಯುತಾ… ಕುಣಿಯುತಾ… ಓಡೋಣು ಬಾರಾ..
ಕರಡಿಯೊಂದು ತಿಂಡಿಯನ್ನು ಅರಸುತ್ತಾ ಕಾರು ಪಾರ್ಕಿಂಗ್ ಬಳಿ ಬಂದಿದೆ. ಪಕ್ಕದಲ್ಲೇ ಇದ್ದ ಕಾರಿನ ಬಾಗಿಲನ್ನು ಕರಡಿ ತೆರೆದಿದೆ. ಬಳಿಕ ಏನಾದ್ರೂ ತಿನ್ನಲು ಸಿಗುತ್ತಾ ಅಂತ ಕರಡಿ ಕಾಯುತ್ತಾ ಇದೆ. ಇನ್ನೇನು ಕಾರಿನ ಒಳಗೆ ಹೋಗಬೇಕು ಅನ್ನುವಷ್ಟರಲ್ಲೇ ಕರಡಿಗೆ ಕಾದಿತ್ತುಒಂದು ಶಾಕ್! ಕರಡಿಯನ್ನು ನೋಡಿ ಅಲ್ಲಿ ನಿಂತಿದ್ದ ಮಕ್ಕಳು ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾರೆ. ಮಕ್ಕಳು ಜೋರಾಗಿ ಕಿರುಚಾಡಲು ಆರಂಭಿಸಿದ್ದರಿಂದ ಕರಡಿ ಒಮ್ಮೆಲೆ ಬೆಚ್ಚಿಬಿದ್ದಿದೆ. ಬಳಿಕ ನಿಧಾನವಾಗಿ ತನ್ನ ಎರಡೇ ಕಾಲಿನಿಂದ ಹಿಂದೆ ಹಿಂದೆ ಚಲಿಸಿ, ತಪ್ಪಿಸಿಕೊಳ್ಳುತ್ತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Why the bear looked shook lol pic.twitter.com/tpYyIA9rs6
— Lance🇱🇨 (@BornAKang) December 31, 2022
ಈ ವಿಡಿಯೋವನ್ನು @BornAKang ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘ಪಾಪ ಈ ಕರಡಿಯನ್ನು ನೋಡಿದರೇ ನಗಬೇಕೊ, ಅಳಬೇಕೋ ಎಂದು ತಿಳಿಯುವುದಿಲ್ಲ’ ಎಂದು ಬರೆದು, ಕೇವಲ 18 ಸೆಕೆಂಡುಗಳ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 67 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.