43 ವರ್ಷಗಳ ನಂತರ ಭಾರತದಲ್ಲಿ ದಾಖಲೆ – ದ್ವಿಶತಕದ ಜೊತೆಯಾಟವಾಡಿದ ಆಸೀಸ್ ದಾಂಡಿಗರು

43 ವರ್ಷಗಳ ನಂತರ ಭಾರತದಲ್ಲಿ ದಾಖಲೆ – ದ್ವಿಶತಕದ ಜೊತೆಯಾಟವಾಡಿದ ಆಸೀಸ್ ದಾಂಡಿಗರು

43 ವರ್ಷಗಳ ನಂತರ ಭಾರತದಲ್ಲಿ ಅತಿ ದೊಡ್ಡ ಜೊತೆಯಾಟ ನಡೆಸಿದ ದಾಖಲೆಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಪಾತ್ರರಾಗಿದ್ದಾರೆ. ಐದನೇ ವಿಕೆಟ್‌ಗೆ 208 ರನ್ ಜೊತೆಯಾಟ ಆಡುವುದರ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಮೂರು ಟೆಸ್ಟ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲುವುದೇ ಕಷ್ಟಕರವಾಗಿತ್ತು. ಆದರೆ, ನಾಲ್ಕನೇ ಟೆಸ್ಟ್‌ನಲ್ಲಿ ಆಟದ ರೀತಿಯೇ ಬದಲಾಗಿದೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಆಸೀಸ್ ದಾಂಡಿಗರು ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಸವಾರಿ ನಡೆಸಿದ್ದಾರೆ.

ಇದನ್ನೂ ಓದಿ:  ಆಸೀಸ್ ನಾಯಕನ ತಾಯಿ ವಿಧಿವಶ – ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಕ್ರಿಕೆಟ್ ತಂಡ

ಆಸ್ಟ್ರೇಲಿಯಾದ ಆರಂಭಿಕರಾದ ಉಸ್ಮಾನ್ ಖವಾಜಾ ಮತ್ತು ಕ್ಯಾಮೆರಾನ್ ಗ್ರೀನ್ ಅದ್ಭುತ ಶತಕ ಬಾರಿಸಿದ್ದಾರೆ. ಅಲ್ಲದೇ ಅದ್ಭುತ ಜೊತೆಯಾಟ ಆಡುವುದರ ಮೂಲಕ ದಾಖಲೆ ಕೂಡ ಮಾಡಿದ್ದಾರೆ. ಈ ಹಿಂದೆ 1979-80ರಲ್ಲಿ ಆಡಿದ ಚೆನ್ನೈ ಟೆಸ್ಟ್ನಲ್ಲಿ ಅಲೆನ್ ಬಾರ್ಡರ್ ಮತ್ತು ಕಿಮ್ ಹ್ಯೂಸ್ 222 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದರು. ಕಳೆದ 10 ವರ್ಷಗಳಲ್ಲಿ ಎರಡು ಜೋಡಿಗಳು ಮಾತ್ರ ದ್ವಿಶತಕದ ಜೊತೆಯಾಟ ಆಡಿವೆ. 2021 ರಲ್ಲಿ ಇಂಗ್ಲೆಂಡ್ ತಂಡದ ಡೊಮ್ ಸಿಬ್ಲಿ ಮತ್ತು ಜೋ ರೂಟ್ ದ್ವಿಶತಕದ ಜೊತೆಯಾಟವನ್ನಾಡಿದ್ದರೆ, ಈಗ ಖವಾಜಾ ಮತ್ತು ಗ್ರೀನ್ ಈ ಜೊತೆಯಾಟವನ್ನಾಡಿದ್ದಾರೆ. ಕ್ಯಾಮರೂನ್ ಗ್ರೀನ್ ಮತ್ತು ಉಸ್ಮಾನ್ ಖವಾಜಾ ಜೋಡಿ 208 ರನ್ ಸೇರಿಸಿದ್ದಲ್ಲದೆ ಬರೋಬ್ಬರಿ 358 ಎಸೆತಗಳನ್ನು ಎದುರಿಸಿದರು. ಈ ದ್ವಿಶತಕದ ಜೊತೆಯಾಟದ ದಾಖಲೆಯೊಂದಿಗೆ ವೈಯಕ್ತಿಕವಾಗಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಕ್ಯಾಮರಾನ್ ಗ್ರೀನ್, ಬೃಹತ್ ಟಾರ್ಗೆಟ್ ಸೆಟ್ ಮಾಡುವಲ್ಲಿ ತಂಡಕ್ಕೆ ನೆರವಾದರು.

suddiyaana