60 ವರ್ಷದ ವರ.. 30 ವರ್ಷದ ವಧು – ಆಂಜನೇಯನ ಸನ್ನಿಧಿಯಲ್ಲಿ ನಡೆಯಿತು ಅಪರೂಪದ ಕಲ್ಯಾಣ
ಋಣಾನುಬಂಧ ಅನ್ನೋದು ಯಾರು ಯಾರನ್ನ ಒಂದು ಮಾಡುತ್ತೆ ಅನ್ನೋದನ್ನ ಹೇಳೋಕೆ ಆಗಲ್ಲ. ಯಾಕಂದ್ರೆ ಯಾರು ಯಾರನ್ನ ಮದುವೆ ಆಗಬೇಕು ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದವರು ಗಡಿಯಾಚೆಗೂ ಬಂದು ಮದುವೆಯಾಗುತ್ತಾರೆ. ಇದೀಗ ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಮದುವೆಯೊಂದು ಭಾರೀ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಹಿಟ್ & ರನ್ ಕೇಸ್ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್ – ತಪ್ಪು ಮಾಡಿದ್ದು ನಾನೇ ಎಂದ ಗಿಚ್ಚಿ ಗಿಲಿಗಿಲಿ ನಟ ಚಂದ್ರಪ್ರಭ
ಪ್ರೀತಿಗೆ ಯಾವುದೇ ಗಡಿ ಇಲ್ಲ. ಯಾವುದರ ಹಂಗೂ ಇಲ್ಲ. ಆಸ್ತಿ ಹಣಕಾಸಿನ ಚಿಂತೆಯೂ ಇಲ್ಲ. ವಯಸ್ಸಿನ ಗಡಿಯೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಬಳ್ಳಾಪುರದಲ್ಲಿ (Chikkaballapur) 65 ವರ್ಷದ ವರ 30 ವರ್ಷದ ಯುವತಿಯನ್ನು ಮದುವೆಯಾಗಿರುವುದು (Marriage) ವರದಿಯಾಗಿದೆ. ಅಪರೂಪದ ಜೋಡಿ ಜಿಲ್ಲೆಯ ಶಿಡ್ಲಘಟ್ಟದ (Sidlaghatta) ಅಪ್ಪೇಗೌಡನಹಳ್ಳಿ ಗೇಟ್‍ನ ಬಯಲಾಂಜನೇಯ ಸ್ವಾಮಿ ದೇವಾಲಯದ ಬಳಿ ಮದುವೆಯಾಗಿದ್ದಾರೆ. ಈರಣ್ಣ ಹಾಗೂ ಅನು ಮದುವೆಯಾಗಿರುವ ನವ ದಂಪತಿಯಾಗಿದ್ದಾರೆ.
ಆರು ತಿಂಗಳ ಹಿಂದೆ ಈರಣ್ಣ ಅವರ ಪತ್ನಿ ತೀರಿಕೊಂಡಿದ್ದರು. ಇದರಿಂದ ಸಂಗಾತಿ ಇಲ್ಲದ ಕೊರತೆಯನ್ನು ತುಂಬಿಕೊಳ್ಳಲು ಅವರು ಮರು ಮದುವೆಯಾಗಿದ್ದಾರೆ. ವಿಶೇಷ ದಂಪತಿಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.