‘ಬ್ರಾಹ್ಮಣ ಸಮಾಜದ ಬಗೆಗಿನ ನಿಮ್ಮ ಹೇಳಿಕೆಯಿಂದ ಬೇಸರ’ – ಗೋಕರ್ಣದಲ್ಲಿ ಅರ್ಚಕರ ಪ್ರಶ್ನೆಗೆ ಹೆಚ್ ಡಿಕೆ ತಬ್ಬಿಬ್ಬು!

‘ಬ್ರಾಹ್ಮಣ ಸಮಾಜದ ಬಗೆಗಿನ ನಿಮ್ಮ ಹೇಳಿಕೆಯಿಂದ ಬೇಸರ’ – ಗೋಕರ್ಣದಲ್ಲಿ ಅರ್ಚಕರ ಪ್ರಶ್ನೆಗೆ ಹೆಚ್ ಡಿಕೆ ತಬ್ಬಿಬ್ಬು!

ಬ್ರಾಹ್ಮಣ ಸಮಾಜದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ರಾಜಕೀಯ ನಾಯಕರ ನಡುವೆ ದೊಡ್ಡ ಜಟಾಪಟಿಗೂ ಕಾರಣವಾಗಿದೆ. ಜೊತೆಗೆ ಬ್ರಾಹ್ಮಣ ಸಮಾಜದವರು ಕೂಡ ತಿರುಗಿ ಬಿದ್ದಿದ್ದು, ದೇಗುಲಕ್ಕೆ ತೆರಳಿದ್ದ ಹೆಚ್​ಡಿಕೆಗೆ ಇದರ ಎಫೆಕ್ಟ್ ತಟ್ಟಿದೆ.

ಇದನ್ನೂ ಓದಿ : ಹೊಸಪೇಟೆಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂಪಾಯಿ..! – ಸಿದ್ದುಗೆ ಅಭಿಮಾನಿಯ ಭರ್ಜರಿ ಆಫರ್

ಬ್ರಾಹ್ಮಣ ಸಮುದಾಯದ ಬಗ್ಗೆ ಮಾಜಿ ಸಿಎಂ ಹೆಚ್​ಡಿಕೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದನ್ನ ಖಂಡಿಸಿ ಬಿಜೆಪಿ ಮತ್ತು ಬ್ರಾಹ್ಮಣ ಸಮಾಜದವರು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಈ ನಡುವೆ ಇವತ್ತು ಹೆಚ್​. ಡಿ ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಈ ವೇಳೆ ದೇವಸ್ಥಾನದ ಅರ್ಚಕರು ‘ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ. ನಿಮ್ಮ ಕುಟುಂಬದ ಮೇಲೆ ನಮಗೆ ಅಭಿಮಾನವಿದೆ. ಗೋಕರ್ಣದಲ್ಲೇ ನಿಮ್ಮ ಸ್ಪಷ್ಟೀಕರಣ ತಿಳಿಸಿ’ ಎಂದು ಕುಮಾರಸ್ವಾಮಿವರಿಗೆ ಸ್ಪಷ್ಟನೆ ಕೇಳಿದ್ದಾರೆ.

ಅರ್ಚಕರ ಪ್ರಶ್ನೆಗೆ ಉತ್ತರಿಸಿದ ಹೆಚ್​ಡಿಕೆ ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಸಮುದಾಯ ಭವನಕ್ಕೆ ಜಾಗ ಕೊಟ್ಟೆ. ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾನು. ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು. ರಾಮಕೃಷ್ಣ ಹೆಗಡೆ ಅವರನ್ನ ಸಿಎಂ ಮಾಡಿದ್ದು ದೇವೇಗೌಡರು ಎಂದು ಸ್ಪಷ್ಟನೆ ನೀಡಿದರು.

ಕುಮಾರಸ್ವಾಮಿ ಇಂದು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆತ್ಮಲಿಂಗ ಸ್ಪರ್ಶಿಸಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೂ ಧರ್ಮವನ್ನು ನಾವು ರಕ್ಷಣೆ ಮಾಡುತ್ತೇವೆ. ಹಿಂದೂ ಹೆಸರಲ್ಲಿ ಅಧಿಕಾರಕ್ಕೆ ಬಂದು ಏನು ಮಾಡಿದ್ದಾರೆ ಗೊತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿ? ಎಂದು ಪ್ರಶ್ನೆ ಮಾಡಿದರು.

suddiyaana