ಸೊಂಟ ಮುಟ್ಟಿ ಸಸ್ಪೆಂಡ್ ಆದ ಪೊಲೀಸ್ – ಸೊಂಟದ ವಿಷ್ಯ ಬೇಡವೋ ಶಿಷ್ಯ..!

ಸೊಂಟ ಮುಟ್ಟಿ ಸಸ್ಪೆಂಡ್ ಆದ ಪೊಲೀಸ್ – ಸೊಂಟದ ವಿಷ್ಯ ಬೇಡವೋ ಶಿಷ್ಯ..!

ಪ್ರಕರಣವೊಂದರಲ್ಲಿ ಹೇಳಿಕೆ ನೀಡಲು ಬಂದಿದ್ದ ಮಹಿಳೆಯ ಸೊಂಟ ಮುಟ್ಟಿ ಪೊಲೀಸಪ್ಪ ಮನೆ ದಾರಿ ಹಿಡಿದಿದ್ದಾನೆ. ಸ್ನೇಹಿತರ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಹೇಳಿಕೆ ನೀಡಲು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ಬಂದಿದ್ದರು. ಆಗ ಅನುಚಿತವಾಗಿ ವರ್ತಿಸಿದ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಮಂಜುನಾಥ್ ಈಗ ಅಮಾನತು ಆಗಿ ಮನೆಯಲ್ಲಿ ಕುಳಿತಿದ್ದಾರೆ.

ಇದನ್ನೂ ಓದಿ: ನಾಲಗೆಗೆ ಮುತ್ತಿಡುವಂತೆ ಬಾಲಕನಿಗೆ ಹೇಳಿದ ದಲೈ ಲಾಮಾ!  – ಟೀಕೆ ಬೆನ್ನಲ್ಲೇ ಕ್ಷಮಾಪಣೆ

ಸುದ್ದಗುಂಟೆಪಾಳ್ಯ ಪಿಎಸ್ಐ ಮಂಜುನಾಥ್, ಮಹಿಳೆಯ ಸೊಂಟ ಮತ್ತು ಮೈ-ಕೈ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದನ್ನು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದರು.‘ಸ್ನೇಹಿತರ ವಿವಾಹ ವಿಚ್ಛೇದನ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಲು ಏ.8ರಂದು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ತೆರಳಿದ್ದೆ. ಈ ವೇಳೆ ಪಿಎಸ್ಐ ಮಂಜುನಾಥ ಅವರು ಹೇಳಿಕೆ ದಾಖಲಿಸುವ ನೆಪದಲ್ಲಿ ನನ್ನ ಕೈ, ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದರು. ಅಷ್ಟೇ ಅಲ್ಲದೆ, ತಡರಾತ್ರಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು ‘ಈ ಘಟನೆಯಿಂದ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ಈ ಬಗ್ಗೆ ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಈ ಸಂದರ್ಭವನ್ನು ನಾನು ಹೇಗೆ ನಿಭಾಯಿಸಬೇಕು ಎಂಬುದು ಹೊಳೆಯುತ್ತಿಲ್ಲ. ಈ ಬಗ್ಗೆ ಸಲಹೆ ನೀಡಿ’ ಆ ಮಹಿಳೆ ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದರು. ಇನ್ನು ಟ್ವಿಟರ್‌ನಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಮಹಿಳೆಯನ್ನು ಪೊಲೀಸ್ ಕಚೇರಿಯಿಂದ ಸಂಪರ್ಕ ಮಾಡಿದ್ದಾರೆ. ನಂತರ, ನೀವು ಪೊಲೀಸ್ ಠಾಣೆಗೆ ಬಂದು ಎಫ್ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕು ಎಂದು ತಿಳಿಸಲಾಗಿತ್ತು. ನಾವು ಹೇಳಿದ ನಂತರ ಮಹಿಳೆ ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ಮಹಿಳೆಯ ದೂರಿದ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಐಪಿಸಿ 354ಎ ,354ಡಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಸತ್ಯಾಂಶವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೇಳಿದ್ದಾರೆ.

suddiyaana