ರಣಜಿ ಆಡದೇ ಕೆಟ್ರಾ ಭುವನೇಶ್ವರ್ ಕುಮಾರ್ – 10 ಓವರ್ ಬೌಲಿಂಗ್, ಫೀಲ್ಡಿಂಗ್ ಕಷ್ಟನಾ?
WI ಸರಣಿಯಲ್ಲೇ ಭವಿಷ್ಯ ಫೈನಲ್!

ರಣಜಿ ಆಡದೇ ಕೆಟ್ರಾ ಭುವನೇಶ್ವರ್ ಕುಮಾರ್ – 10 ಓವರ್ ಬೌಲಿಂಗ್, ಫೀಲ್ಡಿಂಗ್ ಕಷ್ಟನಾ?WI ಸರಣಿಯಲ್ಲೇ ಭವಿಷ್ಯ ಫೈನಲ್!

2027ರ ಏಕದಿನ ವಿಶ್ವಕಪ್​ನಲ್ಲಿ ಭುವನೇಶ್ವರ್ ಕುಮಾರ್ ಆಡ್ಬೇಕು ಅನ್ನೋದು ಸಾಕಷ್ಟು ಮಾಜಿ ಕ್ರಿಕೆಟರ್​ಗಳ ಒತ್ತಾಯ. ಚಾನ್ಸ್ ಕೊಡಿ ಅಂತಾ ಬಿಸಿಸಿಐಗೂ ಓಪನ್ನಾಗೇ ಸ್ಟೇಟ್​ಮೆಂಟ್ಸ್ ಕೊಡ್ತಿದ್ದಾರೆ. ಆದ್ರೆ ಈ ಅವಕಾಶ ಅಷ್ಟು ಸುಲಭ ಇಲ್ಲ ಅನ್ನೋದನ್ನೂ ಅವ್ರೇ ಹೇಳಿದ್ದಾರೆ. ಈ ಬಗ್ಗೆ ಮಾತ್ನಾಡಿರೋ ಆಕಾಶ್ ಚೋಪ್ರಾ ಅದೊಂದು ಸತ್ಯವನ್ನೂ ಬಿಚ್ಚಿಟ್ಟಿದ್ದಾರೆ. ಭುವಿ ತಮ್ಮದೇ ತಪ್ಪಿನಿಂದ ಅವಕಾಶ ಕಳ್ಕೊಳ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : FITNESS ಇಲ್ಲದ ಟೀಂ ಇಂಡಿಯಾ – Bronco ಟೆಸ್ಟ್ ಮತ್ತಷ್ಟು ಟೈಟ್ ಆಗುತ್ತಾ?

2025 ಹಾಗೂ 2026ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆದಾಗ ಅತೀ ಹೆಚ್ಚು ಸದ್ದು ಮಾಡಿದ ಹೆಸ್ರು ಭುವನೇಶ್ವರ್ ಕುಮಾರ್. ಆರ್​ಸಿಬಿ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಭುವಿ ರಾಷ್ಟ್ರೀಯ ತಂಡಕ್ಕೂ ಕಂ ಬ್ಯಾಕ್ ಮಾಡ್ಬೇಕು ಅನ್ನೋ ಕೂಗು ದಿನೇದಿನೇ ಜೋರಾಗ್ತಾನೇ ಇದೆ. ಸೋ ಭುವನೇಶ್ವರ್ ಕುಮಾರ್ ಅವರ ಭಾರತ ತಂಡದ ಕಮ್‌ಬ್ಯಾಕ್ ಮತ್ತು 2027 ರ ಒನ್ಡೇ ವಿಶ್ವಕಪ್ ಆಯ್ಕೆಯ ಸಾಧ್ಯತೆಗಳ ಬಗ್ಗೆ ಆಕಾಶ್ ಚೋಪ್ರಾ ಹಲವು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ.

16 ಪಂದ್ಯ.. 28 ವಿಕೆಟ್.. ಭುವಿಗೆ ಚಾನ್ಸ್ ಕೊಡಿ ಎಂದ ಚೋಪ್ರಾ!

2026ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಭುವಿ 16 ಪಂದ್ಯಗಳಲ್ಲಿ 28 ವಿಕೆಟ್ಸ್ ಪಡೆದಿದ್ರು. ಅವ್ರ ಈ ಸ್ಕಿಲ್ ನೋಡಿದ ಆಕಾಶ್ ಚೋಪ್ರಾ, ಆಟಗಾರರ ಪ್ರದರ್ಶನವೇ ಆಯ್ಕೆಯ ಮಾನದಂಡ ಅನ್ನೋದಾದ್ರೆ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕು ಅನಿಸುತ್ತೆ. ಇದಕ್ಕಿಂತ ಅವರು ಇನ್ನೇನು ಮಾಡಲು ಸಾಧ್ಯ? ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಬಹುದು ಅಂತಾ ಓಪನ್ನಾಗೇ ಹೇಳಿದ್ದಾರೆ. ಇದೇ ವೇಳೆ ಇರುವಂಥ ಸವಾಲುಗಳ ಬಗ್ಗೆ ಪ್ರಶ್ನೆಗಳನ್ನ ಎತ್ತಿದ್ದಾರೆ. ಟಿ-20ಯಲ್ಲಿ ಅದ್ಭುತ ಪ್ರದರ್ಶನ ಇದ್ರೂ 50 ಓವರ್‌ಗಳ ವಿಶ್ವಕಪ್‌ಗೆ ತಯಾರಿ ನಡೆಸಬೇಕು ಅಂದ್ರೆ ಕಂಟಿನ್ಯುಯಸ್ ಆಗಿ ಆಡ್ಬೇಕಾಗುತ್ತೆ. ಕೇವಲ ಟಿ20 ಕ್ರಿಕೆಟ್ ಆಡುವುದರಿಂದ ಇದನ್ನು ಸಾಧಿಸಲಾಗುವುದಿಲ್ಲ  ಎಂದಿದ್ದಾರೆ. ಹಾಗೇ ಭುವಿ ನಿರ್ಧಾರಗಳ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನೂ ಎತ್ತಿದ್ದಾರೆ.

ಭುವಿಗೆ ಕೊನೇ ಚಾನ್ಸ್!

ಟಿ-20 ಪಂದ್ಯಗಳ ಫೋಕಸ್.. ರಣಜಿ ಆಡದಿದ್ದಾಗ ಕೆಲಸದ ಹೊರೆ ಸೀಮಿತ

ಏಕದಿನದಲ್ಲಿ 10 ಓವರ್‌ ಬೌಲ್ ಮಾಡಬೇಕು ಮತ್ತು 50 ಓವ‌ರ್ ಫೀಲ್ಡಿಂಗ್

ಭುವನೇಶ್ವ‌ರ್ ಜನವರಿ 2024 ರಿಂದ ಪ್ರಥಮ ದರ್ಜೆ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ

ಕೊನೆಯ ಬಾರಿಗೆ ಡಿಸೆಂಬರ್ 2023ರಲ್ಲಿ ಲಿಸ್ಟ್ ಎ ಪಂದ್ಯವನ್ನು ಆಡಿದ್ದ ಭುವಿ

50 ಓವರ್‌ ಗಳ ವಿಶ್ವಕಪ್‌ ಆಯ್ಕೆಗೆ ಐಪಿಎಲ್‌  ಶ್ರೇಷ್ಠತೆ ಆಧಾರವಾಗಿರಬಾರದು

ಒಂದು ವರ್ಷದ ಹಿಂದಿನ ಪ್ರತಿಯೊಂದು ಏಕದಿನ ಪಂದ್ಯದಲ್ಲೂ ಭಾಗವಹಿಸಬೇಕು

ಈಗಿನಿಂದಲೇ ಏಕದಿನ ಮಾದರಿಯ ಪಂದ್ಯಗಳನ್ನ ಆಡಲು ಶುರು ಮಾಡ್ಬೇಕು

ಏಕದಿನ ವಿಶ್ವಕಪ್ ಪ್ಲ್ಯಾನ್ ​ನಲ್ಲಿ ಭುವಿ ಹೆಸರು ಇದ್ರೆ ಏಕದಿನ ತಂಡಕ್ಕೂ ಆಯ್ಕೆ

ಐಸಿಸಿ ಟೂರ್ನಿಗೆ ಪ್ರಿಪೇರ್ ಆಗೋಕೆ ಒಂದು ವರ್ಷ ಮೊದಲೇ ಸಮಯ

ಐಪಿಎಲ್, ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಿಂದ ವಿಶ್ವಕಪ್ ಆಯ್ಕೆ ಸರಿಯಲ್ಲ

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಗಳ ಸರಣಿಯೇ ಭುವಿಗೆ ಕೊನೇ ಚಾನ್ಸ್

ಇಲ್ಲಿ ಆಕಾಶ್ ಚೋಪ್ರಾ ಹೇಳೋ ಲಾಜಿಕ್ ಕೂಡ ಕರೆಕ್ಟಾಗೇ ಇದೆ. ವಿಶ್ವಕಪ್​ನಲ್ಲಿ ಆಡಿಸ್ತೀರಾ ಅಂದ್ರೆ ಮಿನಿಮನ್ ಒಂದು ವರ್ಷ ಮೊದ್ಲೇ ಅವಕಾಶ ಕೊಡ್ಬೇಕು. ಫಿಟ್​ನೆಸ್ ಕಾಪಾಡೋಕೆ ರೆಗ್ಯೂಲರ್ ಮ್ಯಾಚಸ್ ಆಡಿಸ್ಬೇಕು ಅಂತಾ. ಆದ್ರೆ ಮ್ಯಾನೇಜ್​ಮೆಂಟ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *