ಇದೆಂಥಾ ವಿಚಿತ್ರ.. ಬೆಡ್‌ರೂಮ್‌ನಲ್ಲಿ ಹಾವುಗಳನ್ನ ಸಾಕಿದ ಯುವತಿ!

ನಮ್ಮಲ್ಲಿ ಹಾವು ಕಂಡ್ರೆ ಭಯಪಡುವವರೇ ಹೆಚ್ಚು.. ಹಾವು ಇದೆ ಅಂತ ಗೊತ್ತಾದ್ರೆ ಹಾವು ಇರೋ ಕಡೆ ಅಪ್ಪಿತಪ್ಪಿನೂ ಹೋಗಲ್ಲ.. ಆದ್ರೆ ಇಲ್ಲೊಬ್ಬಳು ಯುವತಿ ತನ್ನ ಬೆಡ್ ರೂಮ್ ಒಳಗೆ ಹಾವು ಸಾಕಿದ್ದಾಳೆ.
ಇದನ್ನೂ ಓದಿ:ಹೃದಯವಂತ ರಿಷಭ್ ಪಂತ್ – ಬಡ ವಿದ್ಯಾರ್ಥಿನಿ ಭವಿಷ್ಯಕ್ಕೆ ‘ಜ್ಯೋತಿ’
ಅಚ್ಚರಿಯಾದ್ರೂ ಸತ್ಯ.. ಪ್ರಾಣಿ ಪ್ರಿಯರನ್ನ ನಾವು ನೋಡಿರ್ತೇವೆ.. ಹಾವು ಪ್ರಿಯರ ಬಗ್ಗೆಯೂ ಕೇಳಿರ್ತೇವೆ.. ಆದ್ರೆ ಹಾವುಗಳನ್ನ ಸಾಕೋ ಬಗ್ಗೆ ಎಂದಾದ್ರೂ ಕೇಳಿದ್ದೀರಾ? ಇದೀಗ ಚೀನಾದ ಯುವತಿಯೊಬ್ಬಳು ಹಾವು ಸಾಕುತ್ತಿದ್ದಾಳೆ.. ಆಕೆ ಹಾವುಗಳನ್ನ ಯಾವುದೋ ಕೋಣೆ ಅಥವಾ ಮ್ಯೂಸಿಯಂನಲ್ಲಿ ಸಾಕ್ತಿಲ್ಲ. ಆಕೆ ತನ್ನ ಬೆಡ್ ರೂಮ್‌ನಲ್ಲೇ ರಾಶಿ ರಾಶಿ ಹಾವುಗಳನ್ನ ಸಾಕುತ್ತಿದ್ದಾಳೆ. ಇದ್ರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ. .
sports.jx.china ಹೆಸರಿನ ಎಕ್ಸ್ ಖಾತೆಯಲ್ಲಿ ಯುವತಿ ಹಾವುಗಳನ್ನ ಪೋಷಣೆ ಮಾಡ್ತಿರೋ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಮಂಚದ ಮೇಲಿರುವ ಹೊದಿಕೆಯನ್ನು ಮೇಲೆಕ್ಕೆತ್ತಿರುವುದನ್ನು ನೋಡಬಹುದು. ಈ ಹಾಸಿಗೆಯ ಮೇಲೆ ಹಾವುಗಳದ್ದೇ ರಾಶಿ. ತೆವಳುತ್ತ ನೆಲದ ಮೇಲೆ ಬಿದ್ದಿದೆ. ಈ ಚೀನಾದ ಯುವತಿಯೂ ಮಲಗುವ ಕೋಣೆಯನ್ನು ಹಾವು ಸಾಕಾಣಿಕೆ ಕೇಂದ್ರವನ್ನಾಗಿಸಿಕೊಂಡಿದ್ದಾಳೆ. ಹೀಗಾಗಿ ದಿನಾಲೂ ಹೊದಿಕೆಯನ್ನು ಮೇಲಕ್ಕೆತ್ತಿ ಹಾಸಿಗೆಯಲ್ಲಿನ ಹಾವುಗಳನ್ನು ನೆಲಕ್ಕೆ ಚೆಲ್ಲಿ ಹಾಸಿಗೆಯ ಮೇಲಿನ ಭಾಗವನ್ನು ಶುಚಿಗೊಳಿಸುವುದು ಈ ಯುವತಿಯ ನಿತ್ಯದ ಕಾಯಕವಾಗಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ನೋಡಿರಿ

