ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದವನಿಗೆ ಬಾಲ್ಯದ ಗೆಳತಿ ಮೇಲೆ ಪ್ರೀತಿ – ಮದುವೆಯಾಗಲ್ಲ ಎಂದಿದ್ದಕ್ಕೆ ಜೀವಂತವಾಗಿ ಸುಟ್ಟ ಪಾಪಿ

ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದವನಿಗೆ ಬಾಲ್ಯದ ಗೆಳತಿ ಮೇಲೆ ಪ್ರೀತಿ – ಮದುವೆಯಾಗಲ್ಲ ಎಂದಿದ್ದಕ್ಕೆ ಜೀವಂತವಾಗಿ ಸುಟ್ಟ ಪಾಪಿ

ಅವರಿಬ್ಬರು ಬಾಲ್ಯದ ಗೆಳೆಯರು. ಒಟ್ಟಿಗೆ ಓದಿ, ಒಟ್ಟಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಖುಷಿ ಖುಷಿಯಾಗೇ ಕೆಲಸ ಮಾಡಿಕೊಂಡಿದ್ದರು. ಆದರೆ ಮದುವೆ ವಿಚಾರ ಬಂದಾಗ ಇಬ್ಬರ ನಡುವೆ ಘೋರ ಘಟನೆಯೇ ನಡೆದು ಹೋಗಿದೆ. ಮದುವೆಗೆ ಒಪ್ಪಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಭೀಕರವಾಗಿ ಕೊಂದಿದ್ದಾನೆ.

ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈ ಸಮೀಪದ ತಲಂಬೂರಿನಲ್ಲಿ ಈ ಭಯಾನಕ ಘಟನೆ ನಡೆದಿದೆ. ಈ ಭೀಕರ ಹತ್ಯೆ ತಮಿಳುನಾಡಿನಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಸಾಫ್ಟ್ ವೇರ್ ಉದ್ಯೋಗಿ ನಂದಿನಿಯನ್ನ (25) ವೆಟ್ರಿಮಾರನ್ (26) ಪ್ರೀತಿಸುತ್ತಿದ್ದ. ಇಬ್ಬರೂ ಮಧುರೈನಲ್ಲಿ ಒಂದೇ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಇಬ್ಬರೂ ಒಂದೇ ಸಾಫ್ಟ್​ವೇರ್​ ಕಂಪನಿಗೆ ಸೇರಿದ್ದರು. ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರಿಂದ ನಂದಿನಿಯನ್ನ ಮದುವೆಯಾಗುವುದಾಗಿ ವೇಟ್ರಿ ಮಾರನ್​ ಕೇಳಿಕೊಂಡಿದ್ದಾನೆ, ಆದರೆ ನಂದಿನಿ ಒಪ್ಪಿರಲಿಲ್ಲ. ಹಾಗಾಗಿ ಆಕೆಯನ್ನ ಕೊಲೆ ಮಾಡುವ ನಿರ್ಧಾರ ಕೈಗೊಂಡಿದ್ದಾನೆ. ಅಂದುಕೊಂಡತೆಯೇ ಸರಪಳಿಯಲ್ಲಿ ಕಟ್ಟಿ, ಬ್ಲೇಡ್ ನಿಂದ ಕೊಯ್ದು, ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ.

ಇದನ್ನೂ ಓದಿ : ದೇಶದ ಅತ್ಯಂತ ಹಿರಿಯ ಸಿಂಹಿಣಿ ಸಾವು – ಸಿಂಹಗಳ ಜೀವನ ಶೈಲಿ, ಜೀವಿತಾವಧಿ ಎಷ್ಟು ಗೊತ್ತಾ?

ಅಷ್ಟಕ್ಕೂ ನಂದಿನಿ ಮದುವೆಗೆ ಒಪ್ಪದಿರಲು ಪ್ರಮುಖ ಕಾರಣವೂ ಇತ್ತು. ವೇಟ್ರಿಮಾರನ್​ ಒಬ್ಬ ಟ್ರಾನ್ಸ್​ಜೆಂಡರ್. ಆತನ ಮೊದಲ ಹೆಸರು ಪಾಂಡಿ ಮಹೇಶ್ವರಿ. ಈ ಇಬ್ಬರು ಚಿಕ್ಕಂದಿನಿಂದಲೂ ಒಟ್ಟಿಗೆ ಓದಿದ್ದರು. ಮಹೇಶ್ವರಿ ವೇಟ್ರಿ ಮಾರನ್​ ಅಗಿ ಬದಲಾದ ನಂತರ ನಂದಿನಿಯನ್ನು ವಿವಾಹವಾಗಲು ಬಯಸಿದ್ದಾನೆ. ಆದರೆ ನಂದಿನಿ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಕಳೆದ 6 ತಿಂಗಳಿನಿಂದ ಬೇರೆ ಯುವಕನ ಜೊತೆಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದಳು. ಹಾಗಾಗಿ ಆಕೆಯನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಆಕೆಯನ್ನು ಬರ್ತಡೇ ಗಿಫ್ಟ್​ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಮೊದಲು ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿ ಕುಸಿದ ಬಿದ್ದ ಆಕೆಯ ಕಾಲುಗಳನ್ನು ಸರಪಳಿಯಿಂದ ಕಟ್ಟಿ, ಬಳಿಕ ಆಕೆ ಬದುಕಿದ್ದಂತೆಯೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅರ್ಧಕ್ಕೂ ಹೆಚ್ಚು ಸುಟ್ಟ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆರೋಪಿ ವೆಟ್ರಿಮಾರನ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Shantha Kumari