ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತ ವ್ಯಕ್ತಿ – ಆಫೀಸ್‌ ಬೇಗ ತಲುಪಲು ಹೀಗಾ ಮಾಡೋದು?  

ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತ ವ್ಯಕ್ತಿ – ಆಫೀಸ್‌ ಬೇಗ ತಲುಪಲು ಹೀಗಾ ಮಾಡೋದು?  

ಈಗ ಎಲ್ಲಿ ನೋಡಿದ್ರೂ ಟ್ರಾಫಿಕ್‌ ಕಿರಿಕಿರಿ. ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಹೋಗಬೇಕಾದ್ರೂ ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ. ಇದ್ರಿಂದಾಗಿ ಸರಿಯಾದ ಸಮಯಕ್ಕೆ ಕಾಲೇಜು. ಆಫೀಸಿಗೆ ತಲುಪಲು ಸಾಧ್ಯವಾಗಲ್ಲ. ಇಲ್ಲೂ ಒಬ್ಬ ಟಾಫ್ರಿಕ್‌ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾನೆ. ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಆತ ಮಾಡಿರುವ ಪ್ಲಾನ್‌ ಪೊಲೀಸರಿಗೆ ಶಾಕ್‌ ಆಗುವಂತೆ ಆಗಿದೆ.

ಏನಿದು ಘಟನೆ?

ಈಗ ಎಲ್ಲಾ ನಗರಗಳಲ್ಲೂ ಟ್ರಾಫಿಕ್‌ ಸಮಸ್ಯೆ ತಲೆದೋರಿದೆ. ಟ್ರಾಫಿಕ್‌ನಿಂದಾಗಿ ಸರಿಯಾದ ಸಮಯಕ್ಕೆ ಉದ್ಯೋಗಿಗಳಿಗೆ ಆಫೀಸ್‌ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇಲ್ಲೊಬ್ಬ ಟ್ರಾಫಿಕ್‌ ನಿಂದ ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಒಂದನ್ನು ಮಾಡಿದ್ದಾನೆ. ತನ್ನ ಆಫೀಸ್‌ಗೆ ಬೇಗ ತಲುಪಲು ತನ್ನ ಕಾರಿಗೆ ಪೊಲೀಸರು ಬಳಸುವಂತಹ ನೀಲಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಲೈಟ್ ಆಳವಡಿಸಿದ್ದಾನೆ. ಈತನ ಈ ಕತರ್ನಾಕ್‌ ಐಡಿಯಾಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.

ಈ ಘಟನೆ ಅಮೆರಿಕಾದಲ್ಲಿ ನಡೆದಿದೆ.  ಪೊಲೀಸರ ಸೋಗು ಹಾಕಿ ಕಂಬಿ ಎಣಿಸುತ್ತಿರುವ ವ್ಯಕ್ತಿಯನ್ನು 43 ವರ್ಷದ ಮಿಚೆಲ್ ಮಾರ್ಷಲ್ ಎಂದು ಗುರುತಿಸಲಾಗಿದೆ. ಈತ ತನ್ನ ನ್ಯೂ ಲಂಡನ್‌ ಕೌಂಟಿಯಲ್ಲಿರುವ ತನ್ನ ಮನೆಯಿಂದ ಗ್ರೊಟನ್‌ನಲ್ಲಿರುವ ತನ್ನ ಕಚೇರಿಗೆ ಹೋಗುವ ವೇಳೆ ಈ ಕಿತಾಪತಿ ಮಾಡಿದ್ದಾನೆ.  ಈತನಿಂದಾಗಿ  ಅಮೆರಿಕಾದ ಇಂಟರ್‌ಸ್ಟೇಟ್ ಹೆದ್ದಾರಿ 95ರಲ್ಲಿ ಸುಮಾರು ಹೊತ್ತು ಟ್ರಾಫಿಕ್‌ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿದ್ದ ಟ್ರಾಫಿಕ್ ಪೊಲೀಸ್ ಒಬ್ಬರು ಪರಿಶೀಲನೆ ಮಾಡಿದಾಗ ಈತ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ: ಕುರ್ಕುರೆ, ಬಿಸ್ಕೆಟ್‌ ಪ್ಯಾಕೆಟ್‌ ಕದ್ದ ಆರೋಪ – ಮಕ್ಕಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಅಂಗಡಿ ಮಾಲೀಕ!

ಈತನ ಡೋಜ್ ಚಾಲೆಂಜರ್ ಕಾರು ಕೆಂಪು ಹಾಗೂ ನೀಲಿ ಬಣ್ಣದ ಲೈಟ್‌ಗಳನ್ನು ಹೊರಸೂಸುತ್ತಿತ್ತು. ಇದು ಟ್ರಾಫಿಕ್‌ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅನುಮಾನಕ್ಕೆ ಕಾರಣವಾಯಿತು. ಹೀಗಾಗಿ ಅವರು ಈ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ನಂಬರ್‌ ಪ್ಲೇಟ್‌ ತಪಾಸಣೆ ಮಾಡಿದಾಗ ಇದು ಯಾವುದೇ ಆಡಳಿತ ಅಥವಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನ ಅಲ್ಲ ಎಂಬುದು ತಿಳಿದು ಬಂತು.

ನಂತರ ಪೊಲೀಸರು ಮಿಚೆಲ್ ಮಾರ್ಷಲ್ ಬಳಿ ಈ ರೀತಿ ಕಿತಾಪತಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಜನ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನ ಎಂದು ಜಾಗ ಬಿಡುವುದರಿಂದ  ಟ್ರಾಫಿಕ್‌ನಲ್ಲಿ ವೇಗವಾಗಿ ಮುಂದೆ ಸಾಗುವುದಕ್ಕಾಗಿ ತಾನು ಈ ರೀತಿ  ಮಾಡಿದ್ದಾಗಿ ಹೇಳಿದ್ದಾನೆ. ಅಲ್ಲದೇ ತಾನು ಯಾವುದೇ ಇಲಾಖೆಗೆ ಸಂಬಂಧಿಸಿದ ಅಧಿಕಾರಿಯೂ ಅಲ್ಲ, ಪೊಲೀಸ್ ಸಿಬ್ಬಂದಿಯೂ ಅಲ್ಲ ಎಂಬುದನ್ನು ಆತ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಈತನ ಡೋಜ್ ಚಾಲೆಂಜರ್ ಗಾಡಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಈತನನ್ನು ಪೊಲೀಸರು ಕಸ್ಟಡಿಗೆ ಪಡೆದ ಹಿನ್ನೆಲೆಯಲ್ಲಿ ಈತನ ಕಾರನ್ನು ಬಳಿಕ ಟೋವ್ ಮಾಡುವ ಮೂಲಕ (ಬೇರೆ ವಾಹನದ ಮೂಲಕ ಸ್ಥಳಾಂತರ ಮಾಡುವುದು) ಬೇರೆಡೆ ತೆಗೆದುಕೊಂಡು ಹೋಗಲಾಯಿತು. ಅಲ್ಲದೇ ಆತನನ್ನು ಜೈಲಿಗೆ ಕಳುಹಿಸಲಾಯಿತು. ನಂತರ ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಜಾಮೀನು ನೀಡಲಾಗಿದ್ದು, ನವೆಂಬರ್ 13ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.

Shwetha M