ವೋಟ್ ಹಾಕಲು ಅಮೆರಿಕದಿಂದ ಬಂದ ವ್ಯಕ್ತಿ –  ಮತಗಟ್ಟೆಯಲ್ಲಿ ಆಗಿದ್ದೇ ಬೇರೆ!

ವೋಟ್ ಹಾಕಲು ಅಮೆರಿಕದಿಂದ ಬಂದ ವ್ಯಕ್ತಿ –  ಮತಗಟ್ಟೆಯಲ್ಲಿ ಆಗಿದ್ದೇ ಬೇರೆ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವವರು ರಾಜ್ಯಕ್ಕೆ ಆಗಮಿಸಿ ತಮ್ಮ ಮತಕ್ಷೇತ್ರಗಳಲ್ಲಿ ಮತದಾನ ಮಾಡುತ್ತಿದ್ದಾರೆ. ಇಲ್ಲೊಬ್ಬರು ಅಮೆರಿಕದಿಂದ ಮತದಾನಕ್ಕೆಂದು ದಾವಣಗೆರೆಗೆ ಬಂದಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ಮತದಾನದಿಂದ ವಂಚಿತರಾಗಿದ್ದಾರೆ.

ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ರಾಘವೇಂದ್ರ ಕಮಾಲಕರ್ ಮತದಾನಕ್ಕಾಗಿಯೇ ದಾವಣಗೆರೆಗೆ ಬಂದಿದ್ದಾರೆ. ಆದರೆ, ಅವರ ಹೆಸರೇ ಮತದಾನದ ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ಮತದಾನದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ವೃದ್ಧನಿಗೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಬಟನ್ ಒತ್ತಿದ ಚುನಾವಣಾ ಅಧಿಕಾರಿ! – ಪ್ರಿಯಾಂಕ್ ಖರ್ಗೆ ಆಕ್ರೋಶ

ನಾನು ಮತದಾನ ಮಾಡುವ ಸಲುವಾಗಿಯೇ ಅಮೇರಿಕಾದಿಂದ ಸುಮಾರು ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಬಂದಿದ್ದೇನೆ ಆದರೆ ನನಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಜನವರಿ ತಿಂಗಳಲ್ಲಿ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಮಾಹಿತಿಯೂ ಬಂದಿತ್ತು. ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ನಾನು ಮತ ಚಲಾಯಿಸಲು ಬಂದಾಗ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ಮತದಾನ ಮಾಡಲಿಕ್ಕೆ ಆಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಅಮೆರಿಕದಲ್ಲಿ ನೆಲೆಸಿದ್ದ ಯುವತಿಯೊಬ್ಬರು ಬೆಂಗಳೂರಿನ ಬಸವನಗುಡಿ ಮತಕ್ಷೇತ್ರಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ. ಅದಾದ ಬಳಿಕ ಮಾತನಾಡಿದ ಅವರು, ಭಾರತದ ಪ್ರಜೆಯಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ವೋಟ್ ಮಾಡಲು ಅಮೆರಿಕದಿಂದ ಬಂದಿದ್ದೇನೆ. ಇದು ನನ್ನ ಎರಡನೇ ಬಾರಿಯ ಮತದಾನವಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಮತದಾನಕ್ಕೋಸ್ಕರ ದೂರದ ಅಮೆರಿಕದಿಂದ ಆಗಮಿಸಿದ ಶಿರಸಿಯ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಮತದಾನ ಮಾಡಿ ಕಾನಗೋಡ ಮತಗಟ್ಟೆ ಮೂಲಕ ಹಕ್ಕು ಚಲಾಯಿಸಿದ್ದಾರೆ.

suddiyaana