ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ಕೊರೊನಾ ಸೋಂಕು – ಬಿಬಿಎಂಪಿ ಹೈ ಅಲರ್ಟ್
‘ಚೀನಾದಿಂದ ಬಂದ ವ್ಯಕ್ತಿ ಬೆಂಗಳೂರಿನ ಒಳಗೆ ಕಾಲಿಟ್ಟಿಲ್ಲ’ - ಬಿಬಿಎಂಪಿ ಮುಖ್ಯ ಆಯುಕ್ತರ ಸ್ಪಷ್ಟನೆ

ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ಕೊರೊನಾ ಸೋಂಕು – ಬಿಬಿಎಂಪಿ ಹೈ ಅಲರ್ಟ್‘ಚೀನಾದಿಂದ ಬಂದ ವ್ಯಕ್ತಿ ಬೆಂಗಳೂರಿನ ಒಳಗೆ ಕಾಲಿಟ್ಟಿಲ್ಲ’ - ಬಿಬಿಎಂಪಿ ಮುಖ್ಯ ಆಯುಕ್ತರ ಸ್ಪಷ್ಟನೆ

ಬೆಂಗಳೂರು : ಚೀನಾದಲ್ಲಿ ಕೋವಿಡ್ ರೂಪಾಂತರಿ ಇನ್ನಿಲ್ಲದ ಆತಂಕ ಸೃಷ್ಟಿಸಿದೆ. ಹೀಗಾಗಿ ಭಾರತದಲ್ಲೂ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲೂ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆಯ ಹೆಜ್ಜೆ ಇಡುವಾಗಲೇ ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಡಿಸೆಂಬರ್ 25ರಂದು ಚೀನಾದಿಂದ ಬಂದ 40 ವರ್ಷದ ವ್ಯಕ್ತಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್  ಮಾಡಲಾಗಿದೆ. ಹೆಚ್ಚಿನ ತಪಾಸಣೆಗಾಗಿ ವ್ಯಕ್ತಿಯ ಮಾದರಿ ಸಂಗ್ರಹ ಮಾಡಿ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗಿದೆ.

ಇದನ್ನೂ ಓದಿ:   ‘ವೈರಸ್ ಬಗ್ಗೆ ಎಚ್ಚರಿಕೆ ಇರಲಿ, ಆತಂಕ ಬೇಡ’ – ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

 ಸದ್ಯ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿ ಉತ್ತರಪ್ರದೇಶದ ಆಗ್ರಾ ಮೂಲದವರಾಗಿದ್ದಾರೆ. ಇವರು ಚೀನಾದಿಂದ ಬೆಂಗಳೂರಿಗೆ ಬಂದು ಆಗ್ರಾಗೆ ಪ್ರಯಾಣ ಮಾಡಿರುವ ವಿಚಾರ ತಿಳಿದುಬಂದಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.  ಕೊರೋನಾ ಸೋಂಕಿತನ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ‘ಆ ವ್ಯಕ್ತಿಯ ಸ್ಯಾಂಪಲ್ ಯಾವಾಗ ಪಡೆದಿದ್ದು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆತ ಚೀನಾದಿಂದ ಬೆಂಗಳೂರಿನ ಒಳಗೆ ಬಂದಿಲ್ಲ. ಆತ ನಮ್ಮ ಏರ್‌ಪೋರ್ಟ್‌ನಲ್ಲಿ ಟ್ರಾನ್ಸಿಟ್ ಆಗಿ ಆಗ್ರಾಕ್ಕೆ ಹೋಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಏರ್ಪೋರ್ಟ್​​ನಿಂದಲೂ ಪಡೆಯುತ್ತಿದ್ದೇವೆ’ ಎಂದಿದ್ದಾರೆ.

ಡಿಸೆಂಬರ್ 24ರ ತನಕ ವಿವಿಧ ದೇಶಗಳಿಂದ ರಾಜಧಾನಿಗೆ ಒಟ್ಟು 2867 ಪ್ರಯಾಣಿಕರು ಭೇಟಿ ಕೊಟ್ಟಿದ್ದಾರೆ. ಇವರ ಪೈಕಿ ಒಟ್ಟು 12 ಪ್ರಯಾಣಿಕರಲ್ಲಿ ಕೊವಿಡ್ ಪಾಸಿಟಿವ್ ಕಂಡುಬಂದಿದ್ದು, 12 ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್​ಗೆ ರವಾನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸಾಧಕರ್ ಮಾಹಿತಿ ನೀಡಿದ್ದಾರೆ.

suddiyaana