ಚುನಾವಣೆ ಹೊಸ್ತಿಲಲ್ಲೇ ದಿಲ್ಲಿ ನಾಯಕರ ಪರೇಡ್ – ಅಮಿತ್ ಶಾ, ಮೋದಿ ಬ್ಯಾಕ್ ಟು ಬ್ಯಾಕ್ ವಿಸಿಟ್!

ಚುನಾವಣೆ ಹೊಸ್ತಿಲಲ್ಲೇ ದಿಲ್ಲಿ ನಾಯಕರ ಪರೇಡ್ – ಅಮಿತ್ ಶಾ, ಮೋದಿ ಬ್ಯಾಕ್ ಟು ಬ್ಯಾಕ್ ವಿಸಿಟ್!

ಪ್ರಚಂಡ ಪ್ರವಾಹಕ್ಕೆ ಊರೂರೇ ಮುಳುಗಿದ್ರೂ ಕರ್ನಾಟಕದತ್ತ ತಲೆಹಾಕಿಯೂ ಮಲಗದ ದಿಲ್ಲಿ ನಾಯಕರು ಎಲೆಕ್ಷನ್ ಬರ್ತಿದ್ದಂತೆ ಒಬ್ಬರ ಹಿಂದೆ ಒಬ್ಬರಂತೆ ಪರೇಡ್ ಮಾಡ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಮಾರ್ಚ್ 20ರಂದು ಬೆಳಗಾವಿಗೆ ಭೇಟಿ ನೀಡಿ ಯುವಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಿದ್ರು. ಆದ್ರೆ ಜನವರಿ ಬಳಿಕ ಸಾಕಷ್ಟು ಸಲ ರಾಜ್ಯಕ್ಕೆ ಬಂದು ಹೋಗಿರೋ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮತ್ತೆ ಎಂಟ್ರಿ ಕೊಡ್ತಿದ್ದಾರೆ.

ಇದನ್ನೂ ಓದಿ : ‘ಮುಂದಿನ ಸಲವೂ ನಾನೇ ಮುಖ್ಯಮಂತ್ರಿ’ ಎಂದ ಬೊಮ್ಮಾಯಿ – ಹೈಕಮಾಂಡ್​ ನಿಂದ ಸಿಕ್ಕಿತಾ ಸಮ್ಮತಿ?

ಮೂರು ದಿನಗಳ ಅಂತರದಲ್ಲೇ ಅಮಿತ್ ಶಾ ಅವರು ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಲಿದ್ದಾರೆ. ಮಾರ್ಚ್ 24 ಮತ್ತು 26 ರಂದು ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಮೊದಲ ಭೇಟಿ ಸಂದರ್ಭದಲ್ಲಿ ಮೂರು ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ. ಹಾಗೇ ಮಾರ್ಚ್ 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.. ಈ ವೇಳೆ ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಮತ್ತು ದಾವಣಗೆರೆಯಲ್ಲಿ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ದಿಲ್ಲಿ ನಾಯಕರು ಕರ್ನಾಟಕದಲ್ಲಿ ಹವಾ ಎಬ್ಬಿಸಿಸುತ್ತಿದ್ದು ಚುನಾವಣಾ ಅಖಾಡ ರಂಗೇರುತ್ತಿದೆ.

suddiyaana