ನೋಟ್‌ ನಲ್ಲಿ ಹೆಲ್ಪ್‌ಮೀ ಎಂದು ಬರೆದು ಕಿಟಕಿಯಿಂದ ಎಸೆದ –ಸ್ಥಳಕ್ಕೆ ಹೋದ ಪೊಲೀಸರಿಗೆ ಕಾದಿತ್ತು ಶಾಕ್!‌

ನೋಟ್‌ ನಲ್ಲಿ ಹೆಲ್ಪ್‌ಮೀ ಎಂದು ಬರೆದು ಕಿಟಕಿಯಿಂದ ಎಸೆದ –ಸ್ಥಳಕ್ಕೆ ಹೋದ ಪೊಲೀಸರಿಗೆ ಕಾದಿತ್ತು ಶಾಕ್!‌

ಓದೋದು, ಬರೆಯೋದು ಕೆಲ ಮಕ್ಕಳಿಗೆ ಇಷ್ಟವಿಲ್ಲ. ಹೀಗಾಗಿ ಕೆಲ ಮಕ್ಕಳು ಹೊಟ್ಟೆ ನೋವು, ತಲೆನೋವು, ಕೈ ನೋವು ಅಂತಾ ಏನೇನೋ ಕಾರಣಗಳನ್ನು ಕೊಟ್ಟು ತಪ್ಪಿಸಿಕೊಳ್ಳುತ್ತಾರೆ. ಕೆಲ ಮಕ್ಕಳು ಅತ್ತು, ಗಲಾಟೆ ಮಾಡಿ ಹೋಮ್ ವರ್ಕ್ ನಿಂದ ತಪ್ಪಿಸಿಕೊಂಡ್ರೆ ಇನ್ನೂ ಕೆಲ ಮಕ್ಕಳು ಮತ್ತೆ ಮಾಡುತ್ತೇನೆ, ಆಮೇಲೆ ಎನ್ನುತ್ತಲೇ ಹೋಮ್ ವರ್ಕ್ ಗೆ ಚಕ್ಕರ್ ಹಾಕ್ತಾರೆ. ಆದ್ರೆ ಕೆಲ ಮಕ್ಕಳು ಅತೀ ಚಾಲಾಕಿ ಇರ್ತಾರೆ. ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಅವರು ಮಾಡಿದ ಕೆಲಸ ಅಚ್ಚರಿಯುಂಟು ಮಾಡುತ್ತದೆ. ಕೆಲವೊಮ್ಮೆ ಉಳಿದವರನ್ನು ಪೇಚಿಗೆ ಸಿಲುಕಿಸುತ್ತದೆ. ಇಲ್ಲೊಬ್ಬ ಬಾಲಕ ಹೋಮ್‌ವರ್ಕ್‌ನಿಂದ ತಪ್ಪಿಸಿಕೊಳ್ಳಲು ಮಾಡಿದ ಮಹಾನ್ ಕೆಲಸ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಈ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿದ್ದಾನೆ. ಆ ವಿಡಿಯೋದಲ್ಲಿ ಪಕ್ಕದ ಮನೆಯ ವ್ಯಕ್ತಿ ಪೊಲೀಸ್  ಜೊತೆ ಮಾತನಾಡುತ್ತಿರುವುದನ್ನು ನೋಡಬಹುದು. ನೆರೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿ ಪೊಲಿಸರಿಗೆ ಹುಡುಗನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವಾಸ್ತವವಾಗಿ, ಹುಡುಗ ಮನೆಯ ಮೇಲಿಂದ ಕಿಟಕಿ ಮೂಲಕ ನೋಟ್ ಒಂದನ್ನು ಕೆಳಗೆ ಇಳಿ ಬಿಟ್ಟಿದ್ದಾನೆ. ಅದರಲ್ಲಿ ಹೆಲ್ಪ್ ಮೀ ಎಂದು ಬರೆದಿತ್ತು. ಇದನ್ನು ನೋಡಿದ ನೆರೆ ಮನೆ ವ್ಯಕ್ತಿ ಕಂಗಾಲಾಗಿದ್ದಾನೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾನೆ. ನೆರೆ ಮನೆ ವ್ಯಕ್ತಿ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದ್ರೆ ಅಲ್ಲಿ ನಡೆದಿದ್ದೆ ಬೇರೆ. ಬಾಲಕ ನೋಟಿನ ಮೇಲೆ ಹೆಲ್ಪ್ ಮೀ ಎಂದು ಬರೆದಿದ್ದಲ್ಲದೆ ಅಳುವುದನ್ನು ನೋಡಿರೋದಾಗಿ ನೆರೆ ಮನೆ ವ್ಯಕ್ತಿ ಪೊಲೀಸರಿಗೆ ಹೇಳಿದ್ದ. ಆ ಮನೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದ್ರೆ ಅಲ್ಲಿ ಬಾಲಕನಿಗೆ ಏನೋ ಕೆಟ್ಟದಾಗಿ ನಡೆದಿದೆ ಎನ್ನುವ ಊಹೆ ನನ್ನದು. ಈ ಮನೆ ಕೆಳಗೆ ಇಬ್ಬರು ಮಕ್ಕಳು ಆಟ ಆಡೋದನ್ನು ಬಿಟ್ಟು ನಾನು ಮತ್ತೇನೂ ನೋಡಿಲ್ಲವೆಂದು ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ: ಸಹೋದರರ ಜೊತೆ ಸೇರಿ ತನ್ನ ಮನೆಯಲ್ಲೇ ಕದ್ದಳು – ಖತರ್ನಾಕ್‌ ಕಳ್ಳಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?  

ಪಕ್ಕದ ಮನೆಯ ವ್ಯಕ್ತಿ ತಿಳಿಸಿದ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಬಾಲಕನನ್ನು ಕರೆಸಿ ಮಾಹಿತಿ ಪಡೆಯುತ್ತಾರೆ. ಆದ್ರೆ ಈ ವೇಳೆ ಬಾಲಕನ ಬಣ್ಣ ಬಯಲಾಗುತ್ತದೆ. ನಕಲಿ ನೋಟ್ ಇದು. ಸುಮ್ಮನೆ ಹೆಲ್ಪ್ ಮೀ ಎಂದು ಬರೆದಿದ್ದೇನೆ. ನಾನು ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡಿದೆ ಎಂದು ಬಾಲಕ ಹೇಳಿದ್ದಾನೆ. ಈತನ ಮಾತನ್ನು ಹೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಹುಡುಗನ ಜೊತೆ ಗಂಭೀರವಾಗಿ ಮಾತನಾಡಿದ ಪೊಲೀಸರು ಈ ವಿಚಾರದ ಗಂಭೀರತೆಯನ್ನು ಅರ್ಥಮಾಡಿಕೊಂಡಿಕೊಳ್ಳುವಂತೆ ವಿವರಿಸಿದ್ದಾರೆ.

Shwetha M