4 ವರ್ಷಗಳಿಂದ ಮಹಿಳೆಯ ಅಲೆಮಾರಿ ಜೀವನ – ಸತ್ತ ಪ್ರಾಣಿಗಳೇ ಆಹಾರ, ಪ್ರಕೃತಿಯೇ ಬದುಕಿನ ಆಧಾರ..!

4 ವರ್ಷಗಳಿಂದ ಮಹಿಳೆಯ ಅಲೆಮಾರಿ ಜೀವನ – ಸತ್ತ ಪ್ರಾಣಿಗಳೇ ಆಹಾರ, ಪ್ರಕೃತಿಯೇ ಬದುಕಿನ ಆಧಾರ..!

ಕಾಲ ಬದಲಾಗಿದೆ. ಜನ ತಮಗೆ ತೋಚಿದಂಗೆ ಬದುಕುವ ಕಾಲ ಇದು. ಕೆಲವು ಶ್ರೀಮಂತ ಜೀವನ ಶೈಲಿ ಇಷ್ಟಪಡುತ್ತಾರೆ. ಇನ್ನು ಕೆಲವರು ತೀರಾ ಸರಳವಾದ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರವರ ಆಲೋಚನಗೆ ತಕ್ಕಂತ ಜೀವನ ಅವರವರದ್ದು. ಆದರೆ, ಇಲ್ಲೊಬ್ಬ ಮಹಿಳೆಯಿದ್ದಾರೆ. ಆಕೆಗೆ ಕೂತು ತಿನ್ನುವಷ್ಟು ಆದಾಯವಿದೆ. ಆದರೂ, ನಿಂತ ಜಾಗದಲ್ಲಿ ನಿಲ್ಲಲು ಮನಸಿಲ್ಲ. ಆಕೆಯದ್ದು ಈಗ ಅಲೆಮಾರಿ ಜೀವನ. ಸತ್ತ ಪ್ರಾಣಿಗಳೇ ಆಕೆಯ ಆಹಾರ..

ಇದನ್ನೂ ಓದಿ: ಹೆಣ್ಣು ಮಕ್ಕಳ ಬಾಯಲ್ಲಿ ಗುಟ್ಟು ನಿಲ್ಲಲ್ಲ ಯಾಕೆ? – ಈ ಶಾಪದಿಂದಲೇ ಮಹಿಳೆಯರು ಎಲ್ಲಾ ಹೇಳ್ತಾರೆ..!

ಮನೆಯಲ್ಲಿ ಎಲ್ಲಾ ಸೌಲಭ್ಯವಿದೆ. ಕೂತು ತಿನ್ನುವಷ್ಟು ಆದಾಯವಿದೆ. ಆದರೆ, ಸುಖಕರವಾದ ಜೀವನ ಬೇಕಿಲ್ಲ. ಕಾಡಿನಲ್ಲಿ ತಿರುಗುವುದೇ ನನ್ನ ಮನಸಿಗೆ ಸಮಾಧಾನ ತರುವ ವಿಚಾರ ಎಂದಿದ್ದಾರೆ ಮ್ಯಾಂಡರ್ಸ್ ಬರ್ನೆಟ್. ಕಾಡಿನಲ್ಲಿ ಅಲೆಮಾರಿಯಂತೆ ಕುದುರೆಯ ಮೇಲೆ ಸುತ್ತಾಡುವುದೇ ನನಗೆ ಸಂತೃಪ್ತಿ ನೀಡುತ್ತಿದೆ ಅಂತಿದ್ದಾಳೆ ಮ್ಯಾಂಡರ್ಸ್ ಬರ್ನೆಟ್. ಈಕೆಯ ವಯಸ್ಸು 32. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮಾಂಡರ್ಸ್ ಕಳೆದ 4 ವರ್ಷಗಳಿಂದ ಇದೇ ರೀತಿ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಮ್ಯಾಂಡರ್ಸ್ ಬರ್ನೆಟ್  ಗೆ ಆಧುನಿಕ ಜೀವನದಿಂದ ಬೇಸರವಾಗಿದೆಯಂತೆ. ಅವಳ ಹೃದಯ ಮತ್ತು ಆತ್ಮವು ಪ್ರಕೃತಿಯಲ್ಲಿ ನೆಲೆಸಿದೆ ಎಂದು ಸ್ವತಃ ಈಕೆಯೇ ಹೇಳಿಕೊಂಡಿದ್ದಾಳೆ.

ಜುಲೈ 2019ರಲ್ಲಿ ಮನೆ ಬಿಟ್ಟು ಹೊರಟಿದ್ದಳು ಮ್ಯಾಂಡರ್ಸ್. ನಾಲ್ಕು ವರ್ಷಗಳಿಂದ ಕುದುರೆ ಮೇಲೆ ಓಡಾಟ ನಡೆಸಿದ್ದಾಳೆ. ಮುಂದಿನ 6 ವರ್ಷಗಳನ್ನು ಹೀಗೆ ಕಳೆಯಲು ಬಯಸಿದ್ದಾರೆ. ಒಂದು ದಿನ, ಮಾಂಡರ್ಸ್, ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಭೇಟಿಯಾದರು. ಆ ವ್ಯಕ್ತಿ ಹಲವು ವರ್ಷಗಳಿಂದ ಕುದುರೆ ಮೇಲೆ ಅಲೆಮಾರಿ ಜೀವನ ನಡೆಸುತ್ತಿದ್ದನಂತೆ. ಆತನ ಜೀವನಶೈಲಿಯಿಂದ ತುಂಬಾ ಪ್ರಭಾವಿತಳಾದ ಮ್ಯಾಂಡರ್ಸ್ ಅಂದೇ ತಮ್ಮ ಕೆಲಸವನ್ನು ಬಿಟ್ಟು, ಮನೆಯವರು, ಸ್ನೇಹಿತರು, ಬಂಧು ಬಳಗವನ್ನು ತೊರೆದು ಕುದುರೆ ಹತ್ತಿಕೊಂಡು ಹೊರಟಿದ್ದರು. ಆಹಾರಕ್ಕಾಗಿ ಸತ್ತ ಪ್ರಾಣಿಗಳನ್ನು ತಿನ್ನುತ್ತಾರೆ ಮ್ಯಾಂಡರ್ಸ್ ಬರ್ನೆಟ್. ಈಗ ಮಾಂಡರ್ಸ್ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ದಾರಿಯಲ್ಲಿ ಸತ್ತ ಪ್ರಾಣಿಗಳ ಮಾಂಸವನ್ನು ಆಹಾರಕ್ಕಾಗಿ ಬಳಸುತ್ತಾರೆ ಮತ್ತು ಅಡುಗೆಗಾಗಿ ಸೌದೆ ಒಲೆ ಬಳಸುತ್ತಾರೆ. ಸ್ನಾನಕ್ಕೆ, ಬಟ್ಟೆ ಒಗೆಯಲು ಬಾವಿಯ ನೀರನ್ನು ಬಳಸುತ್ತಾರೆ. ಸೋಲಾರ್ ಬ್ಯಾಟರಿಯಿಂದ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ.

Sulekha