ಹುಟ್ಟುತ್ತಲೇ ತೂಕದಿಂದ ದಾಖಲೆ ಬರೆದ ನವಜಾತ ಶಿಶು – 6 ಕೆ.ಜಿಯ ಮರಿಭೀಮನ ನೋಡಿ ಪೋಷಕರ ಸಂಭ್ರಮ

ಹುಟ್ಟುತ್ತಲೇ ತೂಕದಿಂದ ದಾಖಲೆ ಬರೆದ ನವಜಾತ ಶಿಶು – 6 ಕೆ.ಜಿಯ ಮರಿಭೀಮನ ನೋಡಿ ಪೋಷಕರ ಸಂಭ್ರಮ

ಹುಟ್ಟುವಾಗ ಸಾಮಾನ್ಯವಾಗಿ ಮಕ್ಕಳ ತೂಕ ಎಷ್ಟಿರುತ್ತೆ ಹೇಳಿ. 3 ಕೆ.ಜಿ ಇಲ್ಲವೇ ಹೆಚ್ಚೆಂದರೆ 4 ಕೆ.ಜಿ.  ಆದರೆ ಕೆನಡಾದಲ್ಲಿ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗು ಹುಟ್ಟುವಾಗಲೇ ಸಾಮಾನ್ಯ ನವಜಾತ ಶಿಶುವಿಗಿಂತ ಎರಡು ಪಟ್ಟು ಹೆಚ್ಚು ತೂಕ ಹೊಂದಿದ್ದಾನೆ. ಮರಿಭೀಮನಂತೆ ಕಂಡು ಬಂದಿದೆ. ತನ್ನ ತೂಕದಿಂದಲೇ ಮರಿಭೀಮ ದಾಖಲೆಯನ್ನೂ ಕೂಡಾ ಬರೆದಿದ್ದಾನೆ.

ಇದನ್ನೂ ಓದಿ: ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ಬಂಪರ್‌ – ಸರ್ಕಾರದಿಂದ ಸಿಗುತ್ತೆ ಲಕ್ಷಾಂತರ ರೂಪಾಯಿ ಪ್ರೋತ್ಸಾಹ ಧನ!

ಕೆನಡಾದಲ್ಲಿ ಮಹಿಳೆಯೊಬ್ಬರು ಬಲಭೀಮನಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುವಿನ ತೂಕ 6.5 ಕೆಜಿ ಇದೆ. ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ. 13 ವರ್ಷಗಳಲ್ಲೇ ಇಷ್ಟು ತೂಕದ ಮಗುವೊಂದು ಜನಿಸಿದ್ದು ಇದೇ ಮೊದಲಾಗಿದೆ. ಕೆನಡಾ ನಿವಾಸಿಗಳಾದ ಬ್ರಿಟ್ನಿ ಐರಿ ಹಾಗೂ ಚಾನ್ಸ್ ಐರಿ ದಂಪತಿಯ ಐದನೇ ಮಗು ಈ ಬಲಭೀಮ. ಮಗುವಿಗೆ ಸೋನಿ ಐರಿ ಎಂದು ಹೆಸರಿಡಲಾಗಿದೆ. ಸೋನಿ ಐರಿ ಸಾಮಾನ್ಯ ಮಕ್ಕಳಿಗಿಂತ ಎರಡು ಪಟ್ಟು ಹೆಚ್ಚು ತೂಗುತ್ತಿದ್ದು, ಮರಿಭೀಮನ ನೋಡಿ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.

ಪೌಂಡ್‌ಗಳ ಲೆಕ್ಕದಲ್ಲಿ  ಹೇಳುವುದಾದರೆ ಈ ಮಗು 14 ಪೌಂಡ್ 8 ಔನ್ಸ್ (ಅಂದಾಜು 6 ಕೆಜಿ 500 ಗ್ರಾಂ) ತೂಗುತ್ತಿತ್ತು.  ಅಕ್ಟೋಬರ್ 23 ರಂದು ಕೇಂಬ್ರಿಡ್ಜ್ ಮೆಮೋರಿಯಲ್ ಆಸ್ಪತ್ರೆಯಲ್ಲಿ  ಸೋನಿ ಐರಿ ಹುಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಗುವಿನ ತೂಕ ಮೊದಲೇ ಗೊತ್ತಿದ್ದರಿಂದ ಬ್ರಿಟ್ನಿ ಐರಿಗೆ ಸಿಸೇರಿಯನ್ ಮಾಡಲಾಗಿತ್ತು. ಹೀಗಾಗಿ ಮಗು ಜನಿಸುತ್ತಿದ್ದಂತೆ ಪೋಷಕರು, ಸಂಬಂಧಿಗಳು ಮಾತ್ರವಲ್ಲದೇ ವೈದ್ಯಕೀಯ ತಂಡದವರು ಕೂಡ ನವಜಾತ ಶಿಶುವನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ವೈದ್ಯರು ಸೋನಿ ಅಕ್ಟೋಬರ್ 31 ರಂದು ಜನಿಸಬಹುದು ಎಂದು ತಾಯಿ ಬ್ರಿಟ್ನಿಗೆ (Britteney) ಹೆರಿಗೆ ದಿನಾಂಕ ನೀಡಿದ್ದರು. ಆದರೆ ನಿಗದಿಕ್ಕಿಂತ ವಾರ ಮೊದಲೇ ಈ ಭಾರಿ ಗಾತ್ರದ ಮಗು ಹುಟ್ಟಿದೆ. ಮಗುವನ್ನು ತೂಕದ ಸ್ಕೇಲ್ ಮೇಲೆ ಇಡುತ್ತಲೇ ಅದನ್ನು ನೋಡಿ ಎಲ್ಲರೂ ಅಚ್ಚರಿಗೊಂಡರು ಎಂದು ಮಗುವಿನ ತಂದೆ ಹೇಳಿದ್ದಾರೆ. ಮಗು ಜನಿಸಿದ ಕೇಂಬ್ರಿಡ್ಜ್ ಆಸ್ಪತ್ರೆಯ ಪಾಲಿಗೂ ಇದೊಂದು ದಾಖಲೆ ಎನಿಸಿದೆ.  ಇದಕ್ಕೂ ಮೊದಲು ಈ ದಂಪತಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಈ ದಂಪತಿಗೆ ಜನಿಸಿವೆ. ಎಲ್ಲರಿಗಿಂತ ದೊಡ್ಡವಳಾದ ಮಾರಿಗೋಲ್ಡ್, ಹುಟ್ಟುತ್ತಲೇ 13 ಪೌಂಡ್ 14 ಔನ್ಸ್  ತೂಗುತ್ತಿದ್ದಳು. ಇದಾದ ನಂತರ ಲಕ್ಕಿ13 ಪೌಂಡ್ 11 ಔನ್ಸ್ ತೂಗುತ್ತಿದ್ದ. ಹೀಗಾಗಿ ಇವರ ಕುಟುಂಬದಲ್ಲಿ ಭಾರಿ ಗಾತ್ರ ಮಕ್ಕಳು ಜನಿಸಿದ ಪ್ರಕರಣ ಹೊಸದೇನು ಅಲ್ಲ. ಆದರೆ ಈ ಸೋನಿ ಇವರೆಲ್ಲರ ತೂಕದ ದಾಖಲೆ ಮುರಿದಿದ್ದು, 14 ಪೌಂಡ್ ತೂಗುತ್ತಿದ್ದಾನೆ.

Sulekha