ಎಲ್ಲಾ ಮೋಸ.. ಇದು ಚೈಲ್ಡ್ ವುಡ್ ಸ್ಕ್ಯಾಮ್! – ಮಗುವಿಗೆ ಔಷಧಿ ಕುಡಿಸಲು ಪೋಷಕರ ಹೊಸ ಟ್ರಿಕ್!

ಎಲ್ಲಾ ಮೋಸ.. ಇದು ಚೈಲ್ಡ್ ವುಡ್ ಸ್ಕ್ಯಾಮ್! – ಮಗುವಿಗೆ ಔಷಧಿ ಕುಡಿಸಲು ಪೋಷಕರ ಹೊಸ ಟ್ರಿಕ್!

ಮಕ್ಕಳಿಗೆ ಔಷಧಿ ಕುಡಿಸೋದು, ಊಟ ಮಾಡಿಸೋದು ಅಂದ್ರೆ ದೊಡ್ಡ ತಲೆವೋವು. ಊಟ ಮಾಡಿಸಲು, ಔಷಧಿ ಕುಡಿಸಲು ಹೆತ್ತವರು ಹರಸಾಹಸಪಡಬೇಕಾಗುತ್ತದೆ. ಈಗಂತೂ ಕೆಲವರು ಫೋನ್‌ ತೋರಿಸಿ ಆಹಾರ, ಔಷಧಿ ಕುಡಿಸುತ್ತಾರೆ. ಆದ್ರೆ ಇಲ್ಲೊಂದು ಕಡೆ ಪೋಷಕರು ಮಗುವಿಗೆ ಔಷಧಿ ಕುಡಿಸಲು ಹೊಸ ಟ್ರಿಕ್ಸ್‌ ಕಂಡು ಹುಡುಕಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಅಯೋಧ್ಯೆಗೆ ಬರುವ ಭಕ್ತರಿಗೆ ತಿಲಕ ಇಡುವುದೇ ಈತನ ಕೆಲಸ – ಪುಟ್ಟ ಬಾಲಕನ ದಿನದ ಆದಾಯ ಎಷ್ಟು ಗೊತ್ತಾ?

ಪುಟ್ಟ ಮಕ್ಕಳಿಗೆ ಔಷಧಿ ನೀಡುವ ವೇಳೆ ಪೋಷಕರು ನಾನಾ ಸರ್ಕಸ್ ಮಾಡಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತಮ್ಮ ಮಗುವಿಗೆ ಔಷಧಿ ಕುಡಿಸಲು ಹೊಸ ಟ್ರಿಕ್ಸ್ ಒಂದನ್ನು ಕಂಡುಹಿಡಿದಿದ್ದಾರೆ. ಜ್ಯೂಸ್ ಕುಡಿಸುವ ನೆಪದಲ್ಲಿ ಮಗುವಿಗೆ ಔಷಧಿ ಕುಡಿಸಿದ್ದಾರೆ. ಬಾಲ್ಯದ ಈ ಸ್ಕ್ಯಾಮ್ ಕುರಿತ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋವನ್ನು  ಮಂಡ್ಯ ಹೈದನ್ ಟ್ರೋಲ್ (@Mandyahaidan_trolls) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಎಲ್ಲಾ ಮೋಸ, ಚೈಲ್ಡ್ ವುಡ್ ಸ್ಕ್ಯಾಮ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಮನೆಯವರು ಮಗುವಿಗೆ ಬಾ ನಿನಗೆ ಜ್ಯೂಸ್ ಕುಡಿಸುತ್ತೇವೆ ಅಂತ ಹೇಳಿ, ಮಗುವಿನ ಬಾಯಿ ಓಪನ್ ಮಾಡಿಸಿ ಜ್ಯೂಸ್ ಬದಲಿಗೆ ಔಷಧಿ ಕುಡಿಸಿದ್ದಾರೆ. ಮಕ್ಕಳಿಗೆ ಔಷಧಿ ಕುಡಿಸುವ ಈ ಹೊಸ ಟ್ರಿಕ್ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Shwetha M