ಇದು ಪೆನ್ ಅಲ್ಲ, ಮೊಬೈಲ್! – ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಹೊಸ ಟೆಕ್ನಿಕ್
‘ಇದು ತಜ್ಞರ ಮಟ್ಟದ ವಂಚನೆ’ ಎಂದ ನೆಟ್ಟಿಗರು

ಇದು ಪೆನ್ ಅಲ್ಲ, ಮೊಬೈಲ್! – ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಹೊಸ ಟೆಕ್ನಿಕ್‘ಇದು ತಜ್ಞರ ಮಟ್ಟದ ವಂಚನೆ’ ಎಂದ ನೆಟ್ಟಿಗರು

ಇದು ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ ಲೈನ್ ಮೂಲಕವೇ ನಡೆಯುತ್ತದೆ. ಇಂದಿನ ಯುವಕರು ಎಷ್ಟರ ಮಟ್ಟಿಗೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ ಎಂದರೆ, ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನೂ ಡಿಜಿಟಲ್ ಆಗಿ ಪರಿವರ್ತಿಸಿಕೊಂಡಿದ್ದಾರೆ.

ಹೌದು, ಇಂದಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಕಂಡ ನೆಟ್ಟಗರು ‘ಇದು ತಜ್ಞರ ಮಟ್ಟದ ವಂಚನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದೇವರ ಮೇಲೆ ಅತಿಯಾದ ಭಕ್ತಿ : ಪೇಚಿಗೆ ಸಿಲುಕಿದ ವ್ಯಕ್ತಿ – ವಿಡಿಯೋ ವೈರಲ್

ವೈರಲ್ ಆದ ವಿಡಿಯೋದಲ್ಲಿ ಓರ್ವ ವ್ಯಕ್ತಿ ಪೆನ್ ನೊಂದಿಗೆ ಆಟವಾಡುತ್ತಿರುತ್ತಾನೆ. ಕೆಲವೇ ಕ್ಷಣಗಳಲ್ಲಿ ಕ್ಯಾಮೆರಾ, ಒಂದು ಪೌಚ್ ಕಡೆಗೆ ತಿರುಗುತ್ತದೆ. ಮೊದಲು ನೋಡಿದಾಗ ಆ ಪೌಚ್ ನಲ್ಲಿ ಬಣ್ಣ ಬಣ್ಣದ ಪೆನ್, ಪೆನ್ಸಿಲ್ ಗಳು ಕಾಣುತ್ತವೆ. ಅಚ್ಚರಿಯೆಂದರೆ ಅದು ಕ್ಷಣಾರ್ಧದಲ್ಲಿ ಮೊಬೈಲ್ ಆಗಿ ಬದಲಾಗುತ್ತದೆ. ಪರೀಕ್ಷೆ ಬರೆಯುವ ವೇಳೆ ಆ ವ್ಯಕ್ತಿ ಪೌಚ್ ನಲ್ಲಿ ಮೊಬೈಲ್ ಇಟ್ಟಿದ್ದಾನೆ. ಆ ಮೊಬೈಲ್ ನ ವಾಲ್ ಪೇಪರ್ ನಲ್ಲಿ ಪೆನ್ ಹಾಗೂ ಪೆನ್ಸಿಲ್ ಗಳ ಪೋಟೋ ಹಾಕಲಾಗಿದೆ. ವ್ಯಕ್ತಿ ಮೊಬೈಲ್ ಸ್ಕ್ರೀನ್ ಮುಟ್ಟುತ್ತಿದ್ದಂತೆ ಪೆನ್, ಪೆನ್ಸಿಲ್ ಫೋಟೋ  ಬದಲಾಗಿ ಗ್ಯಾಲರಿ ಕಾಣುತ್ತದೆ. ಅದರಲ್ಲಿ ಉತ್ತರ ಪತ್ರಿಕೆಗಳು ಗೋಚರಿಸುತ್ತವೆ. ಈ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ‘ಇದು ತಜ್ಞರ ಮಟ್ಟದ ವಂಚನೆ’ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

suddiyaana