ಉಡುಪಿಯ ಕೋಡಿ ಬೀಚ್‌ಗೆ ಹೊಸ ಲುಕ್! – ಬೀಚ್ ಬದಿಯಲ್ಲಿ ನಿರ್ಮಾಣಗೊಳ್ಳಲಿದೆ ಟ್ರೀ ಪಾರ್ಕ್!
ಉಡುಪಿ ಜಿಲ್ಲೆಯ ಬೀಚ್‌ಗಳಲ್ಲೊಂದಾದ ಕೋಡಿ ಬೀಚ್ ಅಂತ್ಯಂತ ರಮಣೀಯವಾದ ಸ್ಥಳವಾಗಿದೆ. ಹೀಗಾಗಿ ನಿತ್ಯ ಸಾವಿರಾರು ಮಂದಿ ಕಡಲಕಿನಾರೆಗೆ ಬಂದು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಇದೀಗ ಪ್ರವಾಸಿಗರ ಗಮನ ಸೆಳೆದಿರುವ ಕೋಡಿ ಬೀಚ್‌ನ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಯಡಿಯಲ್ಲಿ ಬೀಚ್ ಬದಿಯಲ್ಲಿ ಸುಮಾರು 10 ಹೆಕ್ಟೇರ್ ಜಾಗದಲ್ಲಿ ಗಿಡ ನೆಡಲು ನಿರ್ಧರಿಸಿದೆ.
ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು, ಕುಂದಾಪುರ ಆರ್ ಎಫ್‌ಒ ನೇತೃತ್ವದಲ್ಲಿ ಈಗಾಗಲೇ 15 ಸಾವಿರ ಗಿಡ ನೆಡುವ ಪ್ರಕ್ರಿಯೆ ನಡೆದಿದೆ. ಪ್ರವಾಸಿಗರ ಅನುಕೂಲ ಮತ್ತು ಸಮುದ್ರ ಸವಕಳಿ ತಡೆಯುವ ನಿಟ್ಟಿನಲ್ಲಿ ಇಲಾಖೆ ಕೈಗೊಂಡಿದೆ.
ಇದನ್ನೂ ಓದಿ: ತಾನು ಮುಳುಗಿದರೂ ಭಕ್ತನನ್ನು ಉಳಿಸಿದ ಗಣೇಶ! – ಸಮುದ್ರದಲ್ಲಿ ಕಣ್ಮರೆಯಾಗಿದ್ದ ಬಾಲಕ 36 ಗಂಟೆಗಳ ಬಳಿಕ ಪ್ರತ್ಯಕ್ಷ!
ಕಳೆದ 2-3 ವರ್ಷಗಳಿಂದ ಅಲಿವ್ ರೀಡ್ಲೆ ಜಾತಿಗೆ ಸೇರಿದ ಕಡಲ ಆಮೆ ಮೊಟ್ಟೆ ಇಡಲು ಹಾಟ್ ಸ್ಪಾಟ್ ಎಂದು ಗುರುತಿಸಿಕೊಂಡಿವೆ. ಅವು ಕೋಡಿ ಬೀಚ್ ತೀರದ ಆಯಕಟ್ಟಿನ ಕಡಲ ತೀರಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿವೆ. ಇದರ ಹಿಂದೆ ಕುಂದಾಪುರ ಸ್ಥಳದಲ್ಲಿ ವಲಯ ಅರಣ್ಯ ಇಲಾಖೆ ಕೈಜೋಡಿಸಿವೆ. ಈ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯಿಂದ ಈಗಾಗಲೇ ಕೇಂದ್ರ ಪರಿಸರ ಇಲಾಖೆಗೆ ಕೋಡಿ ಬೀಚ್ ಅನ್ನು ಬ್ಲೂ ಫ್ಲ್ಯಾಗ್ ಯೋಜನೆಗೆ ಸೇರ್ಪಡೆ ಗೋಳಿಸುವಂತೆ ಮನವಿ ಕಳುಹಿಸಲಾಗಿದೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕಳೆದ 5 ವರ್ಷಗಳಿಂದ ನಿರಂತರ ನಡೆದುಕೊಂಡು ಬರುತ್ತಿದ್ದು, ಬೀಚ್ ಸ್ವಚ್ಛತೆಗೆ ಕೊಡುಗೆ ನೀಡಿದೆ. ಕೋಡಿ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಹಸಿರು ಕೋಡಿ ಅಭಿಯಾನದಡಿ ಪ್ರತಿ ವಾರವೂ ಸ್ವಚ್ಛತಾ ಅಭಿಯಾನದ ಜತೆಗೆ ಹಸಿರೀಕರಣ ಕಾರ್ಯ ನಡೆಯುತ್ತಿವೆ.
ಪ್ರವಾಸಿಗರು, ದೇಶ ವಿದೇಶದಿಂದ ಬರುವ ಪರ್ಯಟನಕಾರರು ನೆಮ್ಮದಿಯಿಂದ ಕಾಲ ಕಳೆಯುವಂತಾಗಲು ಬೀಚನ ಆಯಕಟ್ಟನ ಸ್ಥಳದಲ್ಲಿ ಗಾಳಿ ಗಿಡಗಳ ನಾಟಿ ಕಾರ್ಯ ಆರಂಭಿಸಿದೆ. ಭವಿಷ್ಯದಲ್ಲಿ ಈ ಮರಗಳು ಕಡಲ ತೀರದ ಸೌಂದರ್ಯ ಹೆಚ್ಚಿಸುವುದಲ್ಲದೆ ಪಕ್ಷಿಗಳಿಗೆ ನೆಲೆ ಒದಗಿಸಲಿದೆ. ಪ್ರವಾಸಿಗರು ನಮ್ಮದಿಯಿಂದ ಮರದ ಬುಡದಲ್ಲಿ ಕಾಲ ಕಳೆಯಲು ಅನುಕೂಲವಾಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ.