ಸೆಕ್ಯೂರಿಟಿ ಶಮರ್ ಶರವೇಗಿ ಆಗಿದ್ದು ಹೇಗೆ?- ವೆಸ್ಟ್ಇಂಡೀಸ್ ಕ್ರಿಕೆಟ್ ಲೋಕದಲ್ಲಿ ಹೊಸ ಹೀರೋ..!

ಜನವರಿ 28.. ವೆಸ್ಟ್ಇಂಡೀಸ್ ಕ್ರಿಕೆಟ್ ಪಾಲಿಗೆ ಅತ್ಯಂತ ಐತಿಹಾಸಿಕ ದಿನ. ಬರೋಬ್ಬರಿ 27 ವರ್ಷಗಳ ಬಳಿಕ ವೆಸ್ಟ್ಇಂಡೀಸ್ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮ್ಯಾಚ್ನ್ನ ಗೆದ್ದಿದೆ. ಕಳೆದ 27 ವರ್ಷಗಳಿಂದ ವೆಸ್ಟ್ಇಂಡೀಸ್ ತಂಡಕ್ಕೆ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಮ್ಯಾಚ್ನ್ನ ಕೂಡ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಬ್ರಿಯಾನ್ ಲಾರಾ ಸೇರಿದಂತೆ ಈ ಹಿಂದೆ ಘಟಾನುಘಟಿ ಆಟಗಾರರಿದ್ರೂ ಕೂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮ್ಯಾಚ್ ಗೆಲ್ಲೋಕೆ ಆಗಿರಲಿಲ್ಲ. ಆದ್ರೀಗ ಆ ಸಾಧನೆಯನ್ನ ವೆಸ್ಟ್ಇಂಡೀಸ್ ಯಂಗ್ & ಇನ್ಎಕ್ಸ್ಪೀರಿಯನ್ಸ್ಡ್ ಟೀಮ್ ಸಾಧಿಸಿ ತೋರಿಸಿದೆ. 1997ರ ಬಳಿಕ ಫಸ್ಟ್ ಟೆಸ್ಟ್ ಮ್ಯಾಚ್ನ್ನ ಗೆದ್ದುಕೊಂಡಿದ್ದಾರೆ. ಕಾಮೆಂಟ್ರಿ ಮಾಡ್ತಿದ್ದ ವಿಂಡೀಸ್ ಲೆಜೆಂಡ್ಸ್ ಬ್ರಿಯಾನ್ ಲಾರಾ ಮತ್ತು ಕಾರ್ಲ್ ಹೂಪರ್ ಕಾಮೆಂಟ್ರಿ ಬಾಕ್ಸ್ನಲ್ಲೇ ಅತ್ತಿದ್ದಾರೆ. ಆದ್ರೆ ಈ ವೆಸ್ಟ್ಇಂಡೀಸ್ ಈ ಮ್ಯಾಚ್ ಗೆಲ್ಲೋಕೆ ಸಾಧ್ಯವಾಗಿರೋದು ಒಬ್ಬ ಅಮೇಜಿಂಗ್ ಬೌಲರ್ನಿಂದಾಗಿ. ಶಮರ್ ಜೋಸೆಫ್.. ಕೆರಿಬಿಯನ್ನರ ನಾಡಿನ ಹೊಸ ಸ್ಟಾರ್. ಈ ಶಮರ್ ಜೋಸೆಫ್ರ ಲೈಫೇ ಒಂದು ಇನ್ಸ್ಪೈರಿಂಗ್ ಸ್ಟೋರಿ.
ಇದನ್ನೂ ಓದಿ: ಟೆಸ್ಟ್ನಲ್ಲಿ ಫ್ಲಾಪ್ ಕ್ರಿಕೆಟರ್ ಆದ ಶುಬ್ಮನ್ ಗಿಲ್ – ಸೆಕೆಂಡ್ ಟೆಸ್ಟ್ ಚಾನ್ಸ್ ಸಿಗೋದು ಡೌಟ್?
ವೆಸ್ಟ್ಇಂಡೀಸ್ ಟೀಮ್ ಬಗ್ಗೆ ಭಾರತೀಯರೆಲ್ಲರಿಗೂ ಒಂದು ಸ್ಪೆಷಲ್ ಫೀಲಿಂಗ್ ಇದೆ. ವರ್ಲ್ಡ್ಕ್ರಿಕೆಟ್ನಲ್ಲಿ ವೆಸ್ಟ್ಇಂಡೀಸ್ ವೆರಿ ವೆರಿ ಸ್ಪೆಷಲ್ ಟೀಮ್. 2023ರ ವಂಡೇ ವರ್ಲ್ಡ್ಕಪ್ಗೆ ವೆಸ್ಟ್ಇಂಡೀಸ್ ಕ್ವಾಲಿಫೈ ಆಗದೇ ಇದ್ದಾಗ ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ ಕೂಡ ಅಪ್ಸೆಟ್ ಆಗಿದ್ರು. ಛೇ ವೆಸ್ಟ್ಇಂಡೀಸ್ ಟೀಮ್ ಇರ್ಬೇಕಿತ್ತು ಅಂತಾನೆ ಎಲ್ಲರೂ ಹೇಳ್ತಿದ್ರು. ವರ್ಲ್ಡ್ಕಪ್ನಂಥಾ ಟೂರ್ನಿಯಲ್ಲಿ ವಿಂಡೀಸ್ ಟೀಮ್ ಇಲ್ಲಾಂದ್ರೆ ಅಷ್ಟೊಂದು ಮಜಾನೂ ಇರಲ್ಲ. ಟೀಮ್ ಇಂಡಿಯಾ ಹೊರತಾಗಿ ವೆಸ್ಟ್ಇಂಡೀಸ್ ಇನ್ಯಾವುದೇ ಟೀಮ್ ವಿರುದ್ಧ ಆಡ್ತಿದ್ರೂ ಭಾರತೀಯರು ಸಪೋರ್ಟ್ ಮಾಡೋದು ವೆಸ್ಟ್ಇಂಡೀಸ್ಗೇನೆ. ವರ್ಲ್ಡ್ ಕ್ರಿಕೆಟ್ನಲ್ಲಿ ಮೋಸ್ಟ್ ಎಂಟರ್ಟೈನಿಂಗ್ ಪ್ಲೇಯರ್ಸ್ಗಳು ಅಂದ್ರೆ ನೋ ಡೌಟ್ ಅದು ವಿಂಡೀಸಿಗರೇ. ಆದ್ರೆ ಕಳೆದ ಒಂದು ದಶಕದಿಂದ ವಿಂಡೀಸ್ ಕ್ರಿಕೆಟ್ ಕಂಪ್ಲೀಟ್ ಸೊರಗಿ ಹೋಗಿತ್ತು. ವರ್ಲ್ಡ್ಕಪ್ಗೂ ಕ್ವಾಲಿಫೈ ಆಗಿರಲಿಲ್ಲ ಅಂದ್ರೆ ಅವರ ಸ್ಥಿತಿ ಹೇಗಾಗಿದೆ ಅನ್ನೋದನ್ನ ಇಲ್ಲೇ ಅರ್ಥಮಾಡಿಕೊಳ್ಳಬಹುದು.
ಈಗ ವೆಸ್ಟ್ಇಂಡೀಸ್ ಕ್ರಿಕೆಟ್ಗೆ ಹೊಸ ಲೈಫ್ ಸಿಕ್ಕಿದೆ. 2022ರಲ್ಲಿ ಗಾಬ್ಬಾದಲ್ಲಿ ಆಸ್ಟ್ರೇಲಿಯಾವನ್ನ ಮಣಿಸಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿತ್ತು. ಟೀಂ ಇಂಡಿಯಾದ ವನ್ ಆಫ್ ದಿ ಟಾಪ್ ಕ್ಲಾಸ್ ಟೆಸ್ಟ್ ಪರ್ಫಾಮೆನ್ಸ್ ಅದು. ಈಗ ಅಂಥದ್ದೇ ಐತಿಹಾಸಿಕ ಸಾಧನೆಯನ್ನ ಅದೇ ಗಾಬ್ಬಾ ಗ್ರೌಂಡ್ನಲ್ಲಿ ವೆಸ್ಟ್ಇಂಡೀಸ್ ಟೀಮ್ ಮಾಡಿದೆ. ಟೆಸ್ಟ್ ಮ್ಯಾಚ್ನಲ್ಲಿ ಕೇವಲ 8 ರನ್ಗಳಿಂದ ಆಸ್ಟ್ರೇಲಿಯಾವನ್ನ ರೋಚಕವಾಗಿ ಮಣಿಸಿದೆ. ಶಮರ್ ಜೋಸೆಫ್.. ವೆಸ್ಟ್ಇಂಡೀಸ್ನ ಫಾಸ್ಟ್ ಬೌಲರ್. 24 ವರ್ಷದ ಈ ಯಂಗ್ಸ್ಟರ್ನ ಬೌಲಿಂಗ್ ವಿಂಡೀಸ್ ಲೆಜೆಂಡರಿ ಬೌಲರ್ಸ್ಗಳಾದ ಕರ್ಟ್ನಿ ಆ್ಯಂಬ್ರೋಸ್, ಕರ್ಟ್ನಿ ವಾಲ್ಷ್, ಮೈಕಲ್ ಹೋಲ್ಡಿಂಗ್ ಇವರನ್ನೆಲ್ಲಾ ನೆನಪಿಸಿಬಿಡುತ್ತೆ. ಕಳೆದ ಕೆಲ ಹಲವು ದಶಕಗಳಿಂದ ವೆಸ್ಟ್ಇಂಡೀಸ್ ಇಂಥಾ ವರ್ಲ್ಡ್ಕ್ಲಾಸ್ ಬೌಲರ್ಗಳ ಕೊರತೆ ಅನುಭವಿಸ್ತಾ ಇದೆ. 60, 80ರ ದಶಕದಲ್ಲಿ ವೆಸ್ಟ್ಇಂಡೀಸ್ ಬೌಲರ್ಸ್ಗಳು ಅಂದ್ರೆ ಬ್ಯಾಟ್ಸ್ಮನ್ಗಳು ನಿಂತಲ್ಲೇ ನಡುಗ್ತಾ ಇದ್ರು. ಬಿಗ್ ಗ್ಯಾಪ್ ಬಳಿಕ ವೆಸ್ಟ್ಇಂಡೀಸ್ಗೆ ಹಳೆಯ ಜಮಾನದಂಥಾ ಒಬ್ಬ ಬೆಸ್ಟ್ ಬೌಲರ್ನ ಎಂಟ್ರಿಯಾಗಿರುವಂತೆ ಕಾಣ್ತಾ ಇದೆ. ಶಮರ್ ಜೋಸೆಫ್.. ಆಸ್ಟ್ರೇಲಿಯಾ ವಿರುದ್ಧದ ಗಾಬ್ಬಾ ಟೆಸ್ಟ್ ಮ್ಯಾಚ್ನ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾಗ ಮಿಚೆಲ್ ಸ್ಟಾರ್ಕ್ ಎಸೆದ ಯಾರ್ಕರ್ಗೆ ಬಾಲ್ ನೇರವಾಗಿ ಶಾಮರ್ ಜೋಸೆಫ್ ಕಾಲಿಗೆ ಬಡಿದಿತ್ತು. ಕ್ರೀಸ್ನಲ್ಲಿ ನಿಲ್ಲೋಕೂ ಆಗದೆ ಶಾಮರ್ ಜೋಸೆಫ್ ರಿಟೈರ್ಡ್ ಹರ್ಟ್ ಆಗಿದ್ರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಡೇ-3 193 ರನ್ಗೆ ವೆಸ್ಟ್ಇಂಡೀಸ್ ಆಲೌಟ್ ಆಗುತ್ತೆ. ಇನ್ನೆರಡು ದಿನದ ಆಟದಲ್ಲಿ ಆಸ್ಟ್ರೇಲಿಯಾಗೆ ಗೆಲ್ಲೋಕೆ 216ರನ್ಗಳಷ್ಟೇ ಬೇಕಾಗಿರುತ್ತೆ. ಇಂಗ್ಲೆಂಡ್ ವಿರುದ್ಧದ ಫಸ್ಟ್ ಟೆಸ್ಟ್ನಲ್ಲಿ ಟೀಂ ಇಂಡಿಯಾದ ಸ್ವಿಚ್ಯುವೇಶನ್ ಏನಿತ್ತಲ್ಲಾ ಸೇಮ್ ಕಂಡೀಷನ್ ಆಸ್ಟ್ರೇಲಿಯಾದ್ದಾಗಿತ್ತು. ಬಟ್ ಆಸ್ಟ್ರೇಲಿಯಾ 207 ರನ್ಗೆ ಅಲೌಟ್ ಆಗಿಬಿಡುತ್ತೆ. ಕಾರಣ ಶಾಮರ್ ಜೋಸೆಫ್.. ಕಾಲಿಗೆ ಇಂಜ್ಯೂರಿಯಾಗಿದ್ರೂ ಕೂಡ ಶಾಮರ್ ಜೋಸೆಫ್ ಮಾರಕ ಬೌಲಿಂಗ್ ಮಾಡಿ, ಆಸ್ಟ್ರೇಲಿಯಾದ 7 ಬ್ಯಾಟ್ಸ್ಮನ್ಗಳನ್ನ ಪೆವಿಯನ್ಗೆ ಕಳುಹಿಸ್ತಾರೆ. ಈ ಪೈಕಿ ನಾಲ್ವರು ಬ್ಯಾಟ್ಸ್ಮನ್ಗಳು ಕ್ಲೀನ್ಬೌಲ್ಡ್. ಇಲ್ಲಿ ಪಾಯಿಂಟ್ಔಟ್ ಮಾಡಬೇಕಾದ ಇನ್ನೊಂದು ಸಂಗತಿ ಏನಂದ್ರ, ಶಾಮರ್ ಜೋಸೆಫ್ ಬರೋಬ್ಬರಿ 150 ಕಿಲೋ ಮೀಟರ್ ಸ್ಪೀಡ್ನಲ್ಲಿ ಬೌಲಿಂಗ್ ಮಾಡ್ತಾರೆ. ದ್ಯಾಟ್ ಈಸ್ ಹಿಸ್ ಸ್ಪೆಷಾಲಿಟಿ.. ಆಸ್ಟ್ರೇಲಿಯಾ ವಿರುದ್ಧ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಜೊಸೆಫ್ ಎಸೆದ ಆಲ್ಮೋಸ್ಟ್ ಎಲ್ಲಾ ಬಾಲ್ಗಳು ಅನ್ಪ್ಲೇಯಬಲ್ಗಳಾಗಿದ್ವು. ಕಾಲಿಗೆ ಇಂಜ್ಯೂರಿ ಆಗಿದ್ರೂ ಕನ್ಸಿಸ್ಟೆಂಟ್ ಆಗಿ ಕನಿಷ್ಠ 145 ಕಿಲೋ ಮೀಟರ್ ಸ್ಪೀಡ್ನಲ್ಲಾದ್ರೂ ಬೌಲಿಂಗ್ ಮಾಡಿದ್ರು. ಎಂಥಾ ಫೈಟರ್, ಎಂಥಾ ಪ್ರತಿಭೆ ನೋಡಿ. ಸ್ನೇಹಿತರೇ ಶಾಮರ್ ಜೋಸೆಫ್ರ ಈ ಪರ್ಫಾಮೆನ್ಸ್ಗೆ ಇಡೀ ಕ್ರಿಕೆಟ್ ಜಗತ್ತೇ ತಲೆ ಬಾಗಿದೆ. ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್, ಎಬಿಡಿ ವಿಲಿಯರ್ಸ್ ಹೀಗೆ ಕ್ರಿಕೆಟ್ ಲೆಜೆಂಡ್ಸ್ಗಳೆಲ್ಲಾ ಶಾಮರ್ ಜೋಸೆಫ್ಗೆ ಹ್ಯಾಟ್ಸಾಫ್ ಹೇಳಿದ್ದಾರೆ. ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅಂತೂ ಮ್ಯಾಚ್ ಸೋತ್ರೂ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಶಮರ್ ಜೋಸೆಫ್ಗೆ ವಿಶ್ ಮಾಡಿದ್ರು. ತಮ್ಮ ಜೆರ್ಸಿಗಳನ್ನ ಕೂಡ ಶೇರ್ ಮಾಡ್ಕೊಂಡ್ರು. ಈವನ್ ಬೀಯರ್ ಕುಡಿದು ಪಾರ್ಟಿ ಮಾಡಿದ್ರು. ಯಾಕಂದ್ರೆ ಶಾಮರ್ ಜೋಸೆಫ್ರ ಹಿನ್ನೆಲೆ ಇದ್ಯಲ್ಲಾ, ಈ ಮಟ್ಟಕ್ಕೆ ಅವರು ನಡೆದು ಬಂದ ಹಾದಿ ಇದ್ಯಲ್ಲಾ..ಅದೇ ಒಂದು ರೋಚಕ ಸ್ಟೋರಿ. ಇನ್ಸ್ಪೈರಿಂಗ್ ಕಹಾನಿ.. ಅದನ್ನ ನೀವು ತಿಳಿದುಕೊಳ್ಳಲೇಬೇಕು.
1999 ಆಗಸ್ಟ್ 31ರಂದು ಗಯಾನ ದ್ವೀಪದ ಬ್ಯಾರಕೆರಾ ಅನ್ನೋ ಸಣ್ಣ ಗ್ರಾಮವೊಂದರಲ್ಲಿ ಮರೂನ್ ಅನ್ನೋ ಸಮುದಾಯದಲ್ಲಿ ಶಾಮರ್ ಜೋಸೆಫ್ ಜನಿಸ್ತಾರೆ. ನಿಮಗೆ ಗೊತ್ತಿರ್ಲಿ, 2018ರ ವರೆಗೂ ಈ ಗ್ರಾಮಕ್ಕೆ ಇಂಟರ್ನೆಟ್ ಕನೆಕ್ಷನೇ ಇರಲಿಲ್ಲ. ಇಲ್ಲಿನ ಜನರಿಗೆ ಹೊರ ಜಗತ್ತಿನ ಬಗ್ಗೆ ಏನೇನೂ ಗೊತ್ತೇ ಇರಲಿಲ್ಲ. 19ನೇ ಶತಮಾನಾದಲ್ಲಿ ಬ್ಯಾರಕೆರಾ ಅನ್ನೋದು ಒಂದು ನಿರಾಶ್ರಿತರ ಕೇಂದ್ರವಾಗಿತ್ತು. ಗುಲಾಮರನ್ನ ಇಲ್ಲಿ ತಂದು ಬಿಡಲಾಗ್ತಿತ್ತು. ಕ್ಯಾಂಜಿ ಅನ್ನೋ ನದಿಯಿಂದಲೇ ಸುತ್ತುವರೆದಿರೋ ಈ ಗ್ರಾಮಕ್ಕೆ ಏನಿದ್ರೂ ಬೋಟ್ಗಳ ಮೂಲಕವೇ ಹೋಗ್ಬೇಕು. 1763ರಲ್ಲಿ ಇಲ್ಲಿದ್ದ ಸಾವಿರಾರು ಆಫ್ರಿಕನ್ ಗುಲಾಮರು ತಮಗಾಗುತ್ತಿದ್ದ ಅನ್ಯಾಯದ ವಿರುದ್ಧ ದಂಗೆಯಿದ್ದಿದ್ರು. ಬಳಿಕ ಗ್ರಾಮ ಗುಲಾಮರಾಗಿದ್ದ ಮರೂನ್ ಜನಾಂಗದವರ ಹಿಡಿತಕ್ಕೆ ಸಿಗುತ್ತೆ. ಅವರು ಅಲ್ಲಿ ಜೀವನಕ್ಕಾಗಿ ಕಬ್ಬಿನ ಕೃಷಿ ಶುರು ಮಾಡ್ತಾರೆ. ಶಮರ್ ಜೋಸೆಫ್ ಕೂಡ ಒಬ್ಬ ಕಬ್ಬಿನ ಬೆಳೆಗಾರ. ಸಣ್ಣ ವಯ್ಯಸಲ್ಲೇ ಶಮರ್ಗೆ ಭಾರಿ ಕ್ರಿಕೆಟ್ ಹುಚ್ಚಿತ್ತು. ವೆಸ್ಟ್ಇಂಡೀಸ್ನ ದೈತ್ಯ ಬೌಲರ್ಸ್ಗಳಾದ ಕರ್ಟ್ಲಿ ಆ್ಯಂಬ್ರೋಸ್, ಕರ್ಟ್ನಿ ವಾಲ್ಷ್ ಶಾಮರ್ ಜೋಸೆಫ್ ಪಾಲಿನ ರೋಲ್ ಮಾಡೆಲ್ಗಳು. ಶಮರ್ ಜನಿಸೋ ವೇಳೆಗೆ ಅವರೆಲ್ಲಾ ರಿಟೈರ್ಡ್ ಆಗಿದ್ರೂ, ತಮ್ಮ ಜಮೀನಿನಲ್ಲೇ ರೋಲ್ ಮಾಡೆಲ್ಗಳ ರೀತಿ ಶ್ಯಾಮರ್ ಬೌಲಿಂಗ್ ಪ್ರಾಕ್ಟೀಸ್ ಮಾಡ್ತಾರೆ. ಆರಂಭದಲ್ಲಿ ಬೌಲಿಂಗ್ ಮಾಡೋವ್ ಜೋಸೆಫ್ ಬಳಿ ಬಾಲ್ ಕೂಡ ಇರಲಿಲ್ಲ. ಮರದಿಂದ ಅದ್ಯಾವುದೋ ಒಂದು ಗಟ್ಟಿಯಾದ ಹಣ್ಣನ್ನ ಕಿತ್ತು, ಇನ್ನು ಕೆಲವೊಮ್ಮೆ ನಿಂಬೆ ಹಣ್ಣು, ಪೇರಳೆ, ಇನ್ನೊಂದು ಪೀಚ್ ಅನ್ನೋ ಹಣ್ಣನ್ನ ಅಲ್ಲಿ ಬೆಳೀತಾರೆ ಅದ್ರಿಂದ ಬೌಲಿಂಗ್ ಪ್ರಾಕ್ಟೀಸ್ ಮಾಡ್ತಾ ಇದ್ರಂತೆ. ಇಡೀ ಗ್ರಾಮದಲ್ಲಿ ಒಂದು ಬ್ಲ್ಯಾಕ್ & ವೈಟ್ ಟಿವಿಯಷ್ಟೇ ಇರುತ್ತೆ. ಅದ್ರಲ್ಲೇ ಶಾಮರ್ ಜೋಸೆಫ್ ಕ್ರಿಕೆಟ್ ಮ್ಯಾಚ್ ನೋಡ್ತಿರ್ತಾರೆ. ಆ ಗ್ರಾಮದಲ್ಲಿ ಈಗ ಇರೋದೆ 350 ಮಂದಿ ಜನ. ಹೊಟ್ಟೆಪಾಡಿಗಾಗಿ ಮರ ಕಡಿಯೋ ಕೆಲಸಕ್ಕೂ ಜೋಸೆಫ್ ಇಳಿಯಬೇಕಾಗುತ್ತೆ. ಆಗ ಮರದ ಗೆಲ್ಲೊಂದು ಜೋಸೆಫ್ ಮೇಲೆಯೇ ಬೀಳುತ್ತಾ, ಹೀಗಾಗಿ ಈ ಕೆಲಸ ಬೇಡ, ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಬೇಕು ಅಂತಾ ಡಿಸೈಡ್ ಮಾಡಿ ಶಾಮರ್ ಜೋಸೆಫ್ ಗಯಾನಾದ ನ್ಯೂ ಆರ್ಮ್ಸ್ಟ್ರೆಡಾಮ್ಗೆ ಶಿಫ್ಟ್ ಆಗ್ತಾರೆ. 2021ರಲ್ಲಿ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸ ಮಾಡ್ತಾರೆ. ಶಿಫ್ಟ್ನಲ್ಲಿ ದಿನಕ್ಕೆ 12 ಗಂಟೆ ಕೆಲಸ. ಟೈಮ್ ಸಿಕ್ಕಾಗಲೆಲ್ಲಾ ಕ್ರಿಕೆಟ್ ಆಡೋದು. ಇದಾದ್ಮೇಲೆ ಕೆಲಸ ಕೂಡ ಬಿಟ್ಟು ಫುಲ್ಟೈಮ್ ಕ್ರಿಕೆಟ್ ಆಡೋಕೆ ಇಳಿತಾರೆ. ಗಯಾನಾದಲ್ಲಿ ಟುಕೇಬರ್ ಪಾರ್ಕ್ ಅನ್ನೋ ಕ್ಲಬ್ ಪರ ಜೋಸೆಫ್ ಆಡ್ತಿರ್ತಾರೆ. ಅಲ್ಲಿಂದ ಗಯಾನಾ ಫಸ್ಟ್ ಕ್ಲಾಸ್ ಟೀಮ್ಗೆ ಸೆಲೆಕ್ಟ್ ಆಗ್ತಾರೆ. 2023ರಲ್ಲಿ ಗಯಾನಾ ಪರ ಫಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡ್ತಾರೆ. ನಂತರ ಕೆರಿಬಿಯರ್ ಪ್ರೀಮಿಯರ್ ಲೀಗ್ನಲ್ಲೂ ಆಡಿ, 2023ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಮ್ಯಾಚ್ಗಳ ಸೀರಿಸ್ಗೆ ವೆಸ್ಟ್ಇಂಡೀಸ್ ಟೀಮ್ಗೆ ಶಾಮರ್ ಜೋಸೆಫ್ ಎಂಟ್ರಿಯಾಗ್ತಾರೆ. ತಮ್ಮ ಫಸ್ಟ್ ಟೆಸ್ಟ್ ಮ್ಯಾಚ್ನ ಫಸ್ಟ್ ಬಾಲ್ನಲ್ಲೇ ವಿಕೆಟ್ ಪಡೀತಾರೆ. ಅದು ಕೂಡ ಔಟಾಗಿದ್ಯಾರು ಸ್ಟೀವ್ ಸ್ಮಿತ್. ಡೆಬ್ಯೂ ಮ್ಯಾಚ್ನ ಫಸ್ಟ್ ಬಾಲ್ನಲ್ಲೇ ವಿಕೆಟ್ ಪಡೆದ ಎರಡನೇ ವಿಂಡೀಸ್ ಕ್ರಿಕೆಟಿಗ ಅಂದ್ರೆ ಶಾಮರ್ ಜೋಸೆಫ್. ಆ ಮ್ಯಾಚ್ನಲ್ಲಿ ಒಟ್ಟು 5 ವಿಕೆಟ್ ತೆಗೀತಾರೆ. ಅಲ್ಲಿಂದ ಬಳಿಕ ಶುರುವಾಯ್ತು ನೋಡಿ ಅಣ್ಣನ ಜರ್ನಿ. ಈಗ ವೆಸ್ಟ್ಇಂಡೀಸ್ ಟೀಮ್ನ ಪರ್ಮನೆಂಟ್ ಮೆಂಬರ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಗಾಬ್ಬಾದಲ್ಲಿ 7 ವಿಕೆಟ್ ಪಡೆದು ತಮ್ಮ ದೇಶದ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಗಿರೋದೆ ಶಾಮರ್ ಜೋಸೆಫ್. ಫೈನಲಿ ಈ ಗೆಲುವಿನಿಂದ ವೆಸ್ಟ್ಇಂಡೀಸ್ ಕ್ರಿಕೆಟ್ ಟೀಮ್ಗೆ ಪುನರ್ಜನ್ಮ ಸಿಕ್ಕಂತಾಗಿದೆ.