ಮಹಿಳೆ ಮತ್ತು ಪುರುಷ ಪದಕ್ಕೆ ಇಂಗ್ಲೀಷ್‌ಲ್ಲಿ ಹೊಸ ವಿವರಣೆ..! – ಈ ವ್ಯಾಖ್ಯಾನದ ಬಗ್ಗೆ ನಡೀತಿದೆ ಬಿಸಿ ಬಿಸಿ ಚರ್ಚೆ
ಮಹಿಳೆ ಮತ್ತು ಪುರುಷ ಪದಕ್ಕೆ ಈಗ ಮತ್ತೆ ಹೊಸ ವ್ಯಾಖ್ಯಾನ ಸಿಕ್ಕಿದೆ. ಕೇಂಬ್ರಿಡ್ಜ್ ಡಿಕ್ಷನರಿ ಇತ್ತೀಚೆಗೆ ಮಹಿಳೆ ಮತ್ತು ಪುರುಷ ಪದದ ವ್ಯಾಖ್ಯಾನವನ್ನ ನವೀಕರಿಸಿಕೊಂಡಿದೆ. ಅಕ್ಟೋಬರ್ ನಲ್ಲಿ ನವೀಕರಣೆಗೊಂಡಿದ್ದರೂ ಇಂಟರ್ನೆಟ್ ನಲ್ಲಿ ಈಗ ಸುದ್ದಿ ಮಾಡ್ತಾ ಇದೆ. ಕೇಂಬ್ರಿಡ್ಜ್ ಡಿಕ್ಷನರಿಯ ಈ ಹೊಸ ವ್ಯಾಖ್ಯಾನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಕೂಡಾ ಇದೇ ವಿಚಾರದ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ.
ಇದನ್ನೂ ಓದಿ : ಕೃತಕ ಬೆಳಕಿನಿಂದ ಜಗತ್ತು ಸುಂದರ – ಮಧುಮೇಹದ ಅಪಾಯವಿದೆ ಎಚ್ಚರ..!
ಕೇಂಬ್ರಿಡ್ಜ್ ಡಿಕ್ಷನರಿ ಪ್ರಕಾರ ಪುರುಷ ಪದಕ್ಕೆ ಹೊಸ ವಿವರಣೆ ಹೀಗಿದೆ ‘ಒಬ್ಬ ವ್ಯಕ್ತಿ ಹುಟ್ಟಿದಾಗ ವಿಭಿನ್ನ ಲಿಂಗದಲ್ಲಿ ಇದ್ದರೂ ವಯಸ್ಕರಾದ ಮೇಲೆ ಪುರುಷರಂತೆ ಗುರುತಿಸಿಕೊಂಡಿದ್ದರೆ ಮತ್ತು ಹಾಗೇ ಜೀವಿಸುತ್ತಾ ಇದ್ದರೆ ಪುರುಷನೆಂದು ಪರಿಗಣಿಸಬಹುದು.’
‘ಹಾಗೇ ಒಬ್ಬ ವ್ಯಕ್ತಿ ಹುಟ್ಟಿದಾಗ ವಿಭಿನ್ನ ಲಿಂಗದಲ್ಲಿ ಇದ್ದರೂ ವಯಸ್ಕರಾದ ಮೇಲೆ ಮಹಿಳೆಯಂತೆ ಗುರುತಿಸಿಕೊಂಡಿದ್ದರೆ ಮತ್ತು ಹಾಗೇ ಜೀವನ ನಡೆಸುತ್ತಾ ಇದ್ದರೆ ಅವರನ್ನ ಮಹಿಳೆಯೆಂದು ಪರಿಗಣಿಸಬಹುದು.’
ಜೊತೆಗೆ ಈ ವ್ಯಾಖ್ಯಾನಕ್ಕೆ ಉದಾಹರಣೆಗಳನ್ನ ಕೂಡಾ ನೀಡಿದ್ದಾರೆ. ‘ಅವಳು ಮಹಿಳೆಯಾಗಿ ರಾಷ್ಟೀಯ ಕಚೇರಿಗೆ ಆಯ್ಕೆಯಾದ ಮೊದಲ ಟ್ರಾನ್ಸ್ ಮಹಿಳೆ’. ‘ಆತ ಶಸ್ತ್ರ ಚಿಕಿತ್ಸಾ ಪರಿವರ್ತನೆಗೆ ಒಳಗಾಗುವ ಮೊದಲು ಪುರುಷನಂತೆ ಬದುಕಲು ವೈದ್ಯರು ಪ್ರೋತ್ಸಾಹಿಸಿದರು ‘ .
ಕೇಂಬ್ರಿಡ್ಜ್ ಡಿಕ್ಷನರಿಯ ಈ ಹೊಸ ವ್ಯಾಖ್ಯಾನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಕುರಿತಾಗಿ ಟ್ವಿಟ್ಟರ್ ನಲ್ಲಿ ಅನೇಕ ಟೀಕೆಗಳು ಬರ್ತಿವೆ. ಮಹಿಳೆ ಮತ್ತು ಪುರುಷ ಪದಕ್ಕೆ ಹೊಸ ವ್ಯಾಖ್ಯಾನ ಅಪಾಯಕಾರಿ ಎಂದು ಟ್ವಿಟ್ಟರ್ ನಲ್ಲಿ ವಾದ ಮಂಡನೆಯಾಗುತ್ತಿದೆ. ಡಿಕ್ಷನರಿ ಎಂಬ ಪದಕ್ಕೆ ಹೊಸ ವ್ಯಾಖ್ಯಾನ ನೀಡುವುದಕ್ಕೆ ಇದೂ ಸಕಾಲ ಎಂದೂ ಟ್ವಿಟ್ಟರ್ ಬಳಕೆದಾರ ಟ್ವೀಟ್ ಮಾಡಿದ್ದರೆ ಇನ್ನೊಬ್ಬ ಕೇಂಬ್ರಿಡ್ಜ್ ಯೂನಿವರ್ಸಿಟಿ ಮಹಿಳೆ ಪದಕ್ಕೆ ಹೊಸ ವ್ಯಾಖ್ಯಾನ ಕೊಟ್ಟಿದೆ. ನೆನಪಿರಲಿ, ನಿಮಗೆ ಭಾಷೆಯನ್ನ ನಿಯಂತ್ರಣ ಮಾಡಲು ಸಾಧ್ಯವಾದರೆ ಜನಸಂಖ್ಯೆಯನ್ನು ಕೂಡಾ ನಿಯಂತ್ರಿಸಬಹುದು ಎಂದೂ ಟ್ವೀಟ್ ಮಾಡುವ ಮೂಲಕ ಕಾಲೆಳಿದಿದ್ದಾರೆ.