ಭಾರತ ಮೂಲದ ತಳಿಯ ಹಸುವಿಗೆ ಬ್ರೆಜಿಲ್ ನಲ್ಲಿ ಡಿಮ್ಯಾಂಡ್‌! – ಅಬ್ಬಾಬ್ಬ  40 ಕೋಟಿ ರೂ.ಗಳಿಗೆ ಸೇಲ್

ಭಾರತ ಮೂಲದ ತಳಿಯ ಹಸುವಿಗೆ ಬ್ರೆಜಿಲ್ ನಲ್ಲಿ ಡಿಮ್ಯಾಂಡ್‌! – ಅಬ್ಬಾಬ್ಬ  40 ಕೋಟಿ ರೂ.ಗಳಿಗೆ ಸೇಲ್

ಸಾಮಾನ್ಯವಾಗಿ ಹಸುಗಳನ್ನ 10 ಸಾವಿರ 20 ಸಾವಿರ ರೂಪಾಯಿ ಮಾರಾಟ ಮಾಡಲಾಗುತ್ತೆ.. ಅದೇ ಒಳ್ಳೆಯ ತಳಿಹ ಹಸುಗಳು ಕೊಂಚ ದುಬಾರಿಯಾಗಿರುತ್ತವೆ. ಅಬ್ಬಬ್ಬಾ ಅಂದ್ರೆ 30, 50 ಸಾವಿರಕ್ಕೆ ಹಸುಗಳನ್ನ ಮಾರಾಟ ಮಾಡ್ಬೋದು.. ಆದ್ರೆ ಇಲ್ಲೊಂದು ಹಸು ಬರೋಬ್ಬರಿ 40 ಕೋಟಿ ರೂಪಾಯಿಗೆ ಮಾರಾಟ ಆಗಿದೆ.

ಇದನ್ನೂ ಓದಿ:‌ RCB ಕ್ಯಾಪ್ಟನ್ ಕೊಹ್ಲಿ ಟ್ರೆಂಡ್ – ವಿರಾಟ್ ಗೆ ನಾಯಕತ್ವ ನೀಡ್ಬೇಕಿತ್ತಾ?   

ಹೌದು ಭಾರತ ಮೂಲದ ನೆಲ್ಲೂರು ತಳಿಯ ಹಸು ಬರೋಬ್ಬರಿ 40 ಕೋಟಿ ರೂ. ಗಳಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ನೆಲ್ಲೂರು ತಳಿಯ ಹಸು ದುಬಾರಿ ದರಕ್ಕೆ ಮಾರಾಟವಾಗುವ ಮೂಲಕ ಜಗತ್ತಿನ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಯಾಟಿನಾ-19 ಎಂಬ ಹೆಸರಿನಿಂದ ಕರೆಯಲಾಗುವ ಭಾರತ ಮೂಲದ ನೆಲ್ಲೂರು ತಳಿಯ ಹಸು 4.8 ಮಿಲಿಯನ್‌ USD ಅಂದರೆ ಸುಮಾರು 40 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಈ ಮೂಲಕ 2023 ರಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂಬ ಗಿನ್ನೆಸ್‌ ದಾಖಲೆಯನ್ನು ಬರೆದಿದೆ. ಜೊತೆಗೆ ಈ ನೆಲ್ಲೂರು ತಳಿ ಹಸು ಕೌ ಚಾಂಪಿಯನ್‌ ಆಫ್‌ ದಿ ವರ್ಲ್ಡ್‌ ಸ್ಪರ್ಧೆಯಲ್ಲಿ “ಮಿಸ್‌ ಸೌತ್‌ ಅಮೇರಿಕಾ” ಪ್ರಶಸ್ತಿಯನ್ನು ಕೂಡಾ ಗೆದ್ದಿದೆ.

ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸೇರಿದ ಈ ನೆಲ್ಲೂರು ತಳಿಯ ಈ ಹಸುಗಳು ಹೆಚ್ಚಿನ ತೂಕ, ಬಲವಾದ ಸ್ನಾಯುಗಳು, ಸೌಂದರ್ಯದಿಂದಾಗಿಯೇ ಬಹಳ ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ ಈ ತಳಿಯ ಹಸು ಉಷ್ಣವಲಯದ ಹವಮಾನ ಮತ್ತು ರೋಗ ನಿರೋಧಕತೆಗೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ತುಂಬಾ ದೃಢ ಮತ್ತು ಬಲಶಾಲಿಯಾಗಿರುವ ಈ ಹಸುಗಳು ಬರೋಬ್ಬರಿ 1101 ಕೆಜಿ ಯಷ್ಟು ತೂಗುತ್ತವೆ. ಭಾರತದಲ್ಲಿ ಈ ಹಸುಗಳ ಮಾನ್ಯತೆ ಕ್ಷೀಣಿಸುತ್ತಿದ್ದರೂ, ಬ್ರೆಜಿಲ್‌ ಮತ್ತು ಇನ್ನಿತರೆ ರಾಷ್ಟ್ರಗಳಲ್ಲಿ ರೈತರು ಈ ತಳಿಯ ಹಸುಗಳನ್ನೇ ಹೆಚ್ಚು ಸಾಕುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

Shwetha M