ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅದ್ಧೂರಿ ಕಾರ್ಯಕ್ರಮ -ಅಕ್ಟೋಬರ್ 14ರಂದು ವಿವಿಐಪಿಗಳ ದರ್ಬಾರ್
ಯಾವಾಗಲೂ ವರ್ಲ್ಡ್ಕಪ್ ಟೂರ್ನಿ ಆರಂಭದ ದಿನವೇ ಓಪನಿಂಗ್ ಸೆರಮನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆದರೆ, ಅಕ್ಟೋಬರ್ 5ರಂದೇ ವರ್ಲ್ಟ್ಕಪ್ ಟೂರ್ನಿ ಆರಂಭವಾಗಿದ್ರೂ ಅಂದು ಯಾವುದೇ ಓಪನಿಂಗ್ ಸೆರಮನಿ ಕಾರ್ಯಕ್ರಮ ಇರಲೇ ಇಲ್ಲ. ಹೀಗಾಗಿ ಓಪನಿಂಗ್ ಸೆರಮನಿ ಮಾಡಿಲ್ಲ ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ಈಗ ಸಿಗ್ತಾ ಇದೆ.
ಇದನ್ನೂ ಓದಿ: ಎರಡನೇ ಗೆಲುವಿಗೆ ಟೀಮ್ ಇಂಡಿಯಾ ಸಜ್ಜು – ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಲಿದೆ ಟೀಂ ಇಂಡಿಯಾ
ಅಕ್ಟೋಬರ್ 14ರಂದು ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಪಂದ್ಯ ಆರಂಭವಾಗೋ ಮುನ್ನ ಮ್ಯೂಸಿಕಲ್ ಸೆರಮನಿ ನಡೆಯಲಿದೆ. ಈ ವೇಳೆ ಖ್ಯಾತ ಸಿಂಗರ್ ಅರ್ಜಿತ್ ಸಿಂಗ್ ಪರ್ಫಾಮ್ ಮಾಡಲಿದ್ದಾರೆ. ಇನ್ನು ಭಾರತ-ಪಾಕಿಸ್ತಾನ ಪಂದ್ಯ ನೋಡೋಕೆ ವಿವಿಐಪಿಗಳ ದೊಡ್ಡ ದಂಡೇ ಸ್ಟೇಡಿಯಂಗೆ ಬರಲಿದೆ. ಗೋಲ್ಡನ್ ಟಿಕೆಟ್ ಪಡೆದ ಖ್ಯಾತ ನಾಮರೆಲ್ಲಾ ಈ ಮ್ಯಾಚ್ನ್ನ ವೀಕ್ಷಿಸಲಿದ್ದಾರೆ. ಸಚಿನ್ ತೆಂಡೂಲ್ಕರ್, ರಜಿನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಪಾಕಿಸ್ತಾನದಿಂದ ಸುಮಾರು 20 ರಿಂದ 25 ಮೀಡಿಯಾ ಹೌಸ್ಗಳು ಕೂಡ ಭಾರತಕ್ಕೆ ಬರಲಿವೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಮಂದಿಯೂ ಪಂದ್ಯ ನೋಡಲು ಆಗಮಿಸಲಿದ್ದಾರೆ.
ಭಾರತ-ಪಾಕಿಸ್ತಾನ ಮ್ಯಾಚ್ಗಾಗಿ ಕಂಡು ಕೇಳರಿಯದ ಭದ್ರತಾ ವ್ಯವಸ್ಥೆಗಳನ್ನ ಕೂಡ ಕೈಗೊಳ್ಳಲಾಗ್ತಿದೆ. ಭಾರತ-ಪಾಕಿಸ್ತಾನ ಮ್ಯಾಚ್ ವೇಳೆ ಉಗ್ರರ ದಾಳಿ ಭೀತಿ ಕೂಡ ಇದೆ. ಈಗಾಗ್ಲೇ ಖಲಿಸ್ತಾನಿ ಉಗ್ರರು ನರೇಂದ್ರ ಮೋದಿ ಸ್ಟೇಡಿಯಂನ್ನ ಸ್ಫೋಟಿಸೋದಾಗಿ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಅಕ್ಟೋಬರ್ 14ರಂದು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಸುತ್ತಮುತ್ತ 11 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗ್ತಿದೆ. ಸ್ಟೇಡಿಯಂನಲ್ಲಿ ವಿವಿಐಪಿಗಳು ಕುಳಿತುಕೊಳ್ಳುವ ಜಾಗಕ್ಕೆ ಸ್ಪೆಷಲ್ ಸೆಕ್ಯೂರಿಟಿ ಕೂಡ ನೀಡಲಾಗ್ತಿದೆ. ಸೆಂಟ್ರಲ್ ಫೋರ್ಸ್, ಱಪಿಡ್ ಆ್ಯಕ್ಷನ್ ಫೋರ್ಸ್, ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಅಂದ್ರೆ ಬಿಎಸ್ಎಫ್ ಸಿಬ್ಬಂದಿ ಕೂಡ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಭದ್ರತೆ ನೀಡಲಿದ್ದಾರೆ.