ಕಂದನಿಗೆ ಅಮ್ಮನೇ ಶ್ರೀರಕ್ಷೆ! – ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್!

ಕಂದನಿಗೆ ಅಮ್ಮನೇ ಶ್ರೀರಕ್ಷೆ! – ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್!

ತಾಯಿ ಅಂದ್ರೇನೇ ಹಾಗೇ.. ಮಕ್ಕಳ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ಇರ್ತಾಳೆ. ಮಕ್ಕಳಿಗೆ ಏನೂ ಆಗದಂತೆ ಕಾಳಜಿ ವಹಿಸುತ್ತಾಳೆ. ಇನ್ನು ತಾಯಿ ಪ್ರೀತಿ ಅಂದಾಗ ಪ್ರಾಣಿಗಳು ಕೂಡ ತನ್ನ ಮರಿಗಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತವೆ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಅನ್ನುವಂತೆ ಇಲ್ಲೊಂದು ಕ್ಯೂಟ್‌ ವಿಡಿಯೋ ವೈರಲ್‌ ಆಗ್ತಿದೆ. ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಆಸರೆಯಾಗಿ ನಿಂತಿದೆ.

ಇದನ್ನೂ ಓದಿ:  IPL 2027 ಹರಾಜು ಫಿಕ್ಸ್! – ಡಿಸೆಂಬರ್ 2ನೇ ವಾರದಲ್ಲಿ ಮಿನಿ ಆಕ್ಷನ್!

ಆನೆಮರಿಗಳು ಕ್ಯೂಟ್‌ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಆನೆಮರಿ ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದು, ಅದಕ್ಕೆ ತಾಯಾನೆ ಆಸರೆಯಾಗಿ ನಿಂತಿದೆ. ತನ್ನ ಸೊಂಡಿಲನ್ನು ಬಳಸಿ ತನ್ನ ಕಂದಮ್ಮ ಬೀಳದಂತೆ ಜೋಪಾನವಾಗಿ ಹಿಡಿದುಕೊಂಡಿದೆ. ತಾಯಿ ಪ್ರೀತಿ ಕಾಳಜಿ ಸಾರುವ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ಫ್ಯೂಚರ್ ಫಾರ್ ಎಲಿಫೆಂಟ್ಸ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶುದ್ಧ ಪ್ರೀತಿಯನ್ನು ಸಾರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಪುಟಾಣಿ ಆನೆಯೊಂದು ನಿಧಾನವಾಗಿ ಎದ್ದು ನಿಲ್ಲಲು ಪ್ರಯತ್ನಿಸಿದೆ. ಇದೇ ವೇಳೆ ತಾಯಾನೆ ತನ್ನ ಕಂದಮ್ಮ ಬೀಳದಂತೆ ಸೊಂಡಿಲಿನಿಂದ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋ ಇದುವರೆಗೆ 2.4 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತನ್ನ ತಾಯಿಯ ಸಹಾಯದಿಂದ ಎದ್ದು ನಿಲ್ಲುವ ಕಂದಮ್ಮನದ್ದು ಎಂತಹ ಸಾಧನೆ ಎಂದಿದ್ದಾರೆ. ಇನ್ನೊಬ್ಬರು, ಕಂದಮ್ಮನಿಗೆ ತಾಯಿಯ ಪ್ರೀತಿ ಆರೈಕೆ ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಮ್ಮನಿಗೆ ಏನು ಮಾಡ್ಬೇಕು ಅನ್ನೋದು ಗೊತ್ತು ಎಂದು ಕಾಮೆಂಟ್ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *