ಇವತ್ತೇನಾದ್ರೂ ಸ್ಪೆಷಲ್ ನ್ಯೂಸ್ ಇದ್ಯಾ? – ದಿನ ಪತ್ರಿಕೆ ತಿರುವುತ್ತಾ ‘ಮಂಗ’ನಾಟ

ಇವತ್ತೇನಾದ್ರೂ ಸ್ಪೆಷಲ್ ನ್ಯೂಸ್ ಇದ್ಯಾ? – ದಿನ ಪತ್ರಿಕೆ ತಿರುವುತ್ತಾ ‘ಮಂಗ’ನಾಟ

ನಾಯಿ, ಬೆಕ್ಕಿನಂತೆ ಕೆಲವರು ಮನೆಯಲ್ಲಿ ಕೋತಿಗಳನ್ನು ಸಾಕುತ್ತಿದ್ದಾರೆ. ಈ ಕೋತಿಗಳು ಸಾಕು ಪ್ರಾಣಿಗಳಂತೆ ಮೌಲ್ಯಗಳನ್ನು ಕಲಿಯುತ್ತವೆ. ಕೆಲವೊಂದು ಬಾರಿ ತನ್ನ ಯಜಮಾನ ಮಾಡಿದಂತೆಯೇ ಅವುಗಳು ಕೂಡ ಅನುಕರಿಸುತ್ತವೆ. ಆತನನ್ನೇ ಹಿಂಬಾಲಿಸುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಸ್ನೇಹಿತನಿಗೆ ಉರಿಸಿ ಉರಿಸಿ ಸೇಬು ತಿಂದ ಮಂಗಣ್ಣ! – ಕಪಿ ಚೇಷ್ಠೆಗೆ ಜನ ಬೆರಗು

ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೋತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವ್ಯಕ್ತಿ ಸೋಫಾದಲ್ಲಿ ಕುಳಿತುಕೊಂಡು ದಿನಪತ್ರಿಕೆ ಓದುತ್ತಿದ್ದಾರೆ. ಈ ವೇಳೆ ಕೆಲವು ಪತ್ರಿಕೆಗಳನ್ನು ಸೋಫಾದ ಮೇಲೆ ಇಟ್ಟಿದ್ದರು. ಪಕ್ಕದಲ್ಲೇ ಇದ್ದ ಕೋತಿ ದಿನಪತ್ರಿಕೆ ಓದುವ ಯಜಮಾನನನ್ನು ನೋಡುತ್ತದೆ. ಮಂಗವು ಕೂಡ ಯಜಮಾನ ಏನು ಮಾಡುತ್ತಾನೋ ಅದನ್ನೇ ಅನುಕರಿಸಲು ಆರಂಭಿಸುತ್ತದೆ. ಮನುಷ್ಯರು ಪೇಪರ್ ಬಂದಾಗ ಇವತ್ತಿನ ಪೇಪರ್ ನಲ್ಲಿ ಏನ್ ನ್ಯೂಸ್ ಇದೆ ಅಂತಾ ಕಣ್ಣು ಹಾಯಿಸಿದ ಹಾಗೆ ಮಂಗ ಕೂಡ ಪೇಪರ್ ನೋಡಲು ಆರಂಭಿಸುತ್ತದೆ. ಬಳಿಕ ತನ್ನ ಪಕ್ಕದಲ್ಲೇ ಇದ್ದ ಪೇಪರ್ ಅನ್ನು ಒಂದೊಂದಾಗಿ ಬಿಡಿಸುತ್ತದೆ. ಪ್ರತಿ ಪೇಜ್ ಅನ್ನು ಬಿಡಿಸಿ ತನ್ನ ಬೆರಳಿನಲ್ಲಿ ಕುಟ್ಟುತ್ತಾ ಹೋಗುತ್ತೆ. ಮನುಷ್ಯರು ಮಾಡುವ ಹೆಚ್ಚಿನ ಕೆಲಸಗಳನ್ನು ಮಂಗಗಳು ಕೂಡ ಮಾಡಬಲ್ಲವು ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಈ ವಿಡಿಯೋವನ್ನು animals_being_epic ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಮಂಗವೊಂದು ತನ್ನ ಯಜಮಾನನೊಂದಿಗೆ ಕುಳಿತು ದಿನಪತ್ರಿಕೆ ಓದುತ್ತದೆ. ನ್ಯೂಸ್ ಪೇಪರ್ ಓದುವ ಮಂಗನ ಸೊಬಗು ನೋಡಲು ಸೊಗಸಾಗಿದೆ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Suddi Yaana (@suddiyaana)

suddiyaana