ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಾಂಧವ್ಯ – ಗಿಳಿರಾಯನಿಗೆ ಪ್ರೀತಿಯ ಕೈತುತ್ತು ಕೊಟ್ಟ ಕಪಿರಾಯ!
ಸ್ನೇಹಕ್ಕೆ ಯಾವುದೇ ಗಡಿ ಇಲ್ಲ. ಮನುಷ್ಯ ಮನುಷ್ಯರೊಂದಿಗೆ ಸ್ನೇಹ ಮಾಡುವುದು, ಪ್ರಾಣಿಗಳ ಜೊತೆಗೂ ಸ್ನೇಹ ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ. . ಅವುಗಳು ಯಾವುದೇ ಸ್ವಾರ್ಥ ಭಾವನೆಯಿಲ್ಲದೆ ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುತ್ತವೆ. ನಾಯಿ, ಬೆಕ್ಕು ಇತರ ಪ್ರಾಣಿಗಳು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ನೋಡಿರುತ್ತೇವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆದ್ರೆ ಇಲ್ಲೊಂದು ಕೋತಿ ಪಕ್ಷಿಯೊಂದಿಗೆ ಫ್ರೆಂಡ್ಶಿಪ್ ಮಾಡಿಕೊಂಡಿವೆ. ಇದಕ್ಕೆ ಸಂಬಂಧಿಸಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸಾಮಾನ್ಯವಾಗಿ ಪ್ರಾಣಿಗಳು ಫ್ರೆಂಡ್ಸ್ ಆಗಿ ಇರೋದನ್ನು ನೋಡಿರುತ್ತೇವೆ. ಆದ್ರೆ ಪ್ರಾಣಿಗಳು ಪಕ್ಷಿಗಳ ಫ್ರೆಂಡ್ ಶಿಪ್ ಆಗೋದು ತುಂಬಾನೇ ಕಷ್ಟ. ಯಾಕಂದ್ರೆ ಪ್ರಾಣಿಗಳು ಪಕ್ಷಿಗಳನ್ನು ಕಂಡ್ರೆ ಅವುಗಳ ಮೇಲೆ ದಾಳಿ ಮಾಡಿ ಕೊಂದೇ ಬಿಡುತ್ತವೆ. ಆದ್ರೆ ಇಲ್ಲೊಂದು ಕೋತಿ ಮತ್ತು ಗಿಳಿರಾಯನ ಜೊತೆ ಫ್ರೆಂಡ್ಶಿಪ್ ಮಾಡಿಕೊಂಡಿದೆ. ಕಪಿರಾಯನೇ ಗಿಳಿರಾಯನಿಗೆ ಕೈತುತ್ತು ನೀಡುತ್ತಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು @suni_pets ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. “ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಸ್ನೇಹ ಬಾಂಧವ್ಯ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಸುಂದರವಾದ ಮಕಾವ್ ಗಿಳಿ ಮತ್ತು ಕೋತಿ ಮರಿಯ ನಡುವಿನ ಸುಂದರ ಸ್ನೇಹ ಬಾಂಧವ್ಯದ ದೃಶ್ಯವನ್ನು ಕಾಣಬಹುದು. ಕೋತಿ ಮರಿ ನೋಡು ಸ್ವಲ್ಪ ಮಾತ್ರ ತಿನ್ಬೇಕು ಅಂತ ಹೇಳಿ ತನ್ನ ಕೈಯಲ್ಲಿದ್ದ ತಿಂಡಿಯನ್ನು ಗಿಳಿರಾಯನಿಗೆ ತಿನ್ನಿಸುತ್ತದೆ. ನಂತರ ಕೋತಿ ಆ ತಿಂಡಿಯನ್ನು ತಿನ್ನುವಾಗ, ಓ ಮಾರಾಯ ನೀ ಕೊಟ್ಟ ತಿಂಡಿ ಚೂರೂ ಸಾಕಾಗಿಲ್ಲ ಇನ್ನಾ ಸ್ವಲ್ಪ ತಿನ್ನಿಸು ಎಂದು ಗಿಳಿರಾಯ ಕೋತಿಯ ಕೈ ಹಿಡಿದುಕೊಂಡು ಕೇಳಿಕೊಳ್ಳುತ್ತೆ. ಆ ಸಂದರ್ಭದಲ್ಲಿ ಮುದ್ದಾದ ಕೋತಿ ಮರಿ ತಗೋ ತಿನ್ನು ಎಂದು ಇನ್ನೊಂದು ಬಾರಿ ಕೈ ತುತ್ತು ನೀಡುತ್ತೆ. ಈ ಮುದ್ದಾದ ಸ್ನೇಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಇಬ್ಬರ ನಡುವಿನ ಸ್ನೇಹಕ್ಕೆ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
View this post on Instagram