ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾದ ವ್ಯಕ್ತಿ! – ಕಾರಣವೇನು ಗೊತ್ತಾ?

ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾದ ವ್ಯಕ್ತಿ! – ಕಾರಣವೇನು ಗೊತ್ತಾ?

ಒಬ್ಬ ವ್ಯಕ್ತಿ ಏಕಕಾಲಕ್ಕೆ ಒಬ್ಬರನ್ನು ಮದುವೆಯಾಗಲು ಸಾಧ್ಯ. ಕೆಲವರು ಎರಡು, ಮೂರನೇ ಮದುವೆ ಆಗುವುದನ್ನು ನಾವು ಕೇಳಿದ್ಧೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾಗಿದ್ದಾನೆ.

ಈ ವಿಚಿತ್ರ ಮದುವೆ ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ಸೆಪ್ಟೆಂಬರ್ 10 ರಂದು ನಡೆದಿದೆ. ವ್ಯಕ್ತಿಯೊಬ್ಬ ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾಗಿದ್ದು, ಮತ್ತೆ ಇನ್ನಷ್ಟು ಯುವತಿಯರನ್ನು ಮದುವೆ ಆಗುವ ಯೋಚನೆ ಇದೆ ಎಂದು ಘೋಷಣೆ ಮಾಡಿದ್ದಾನೆ.

ಇದನ್ನೂ ಓದಿ: ಬಾಲಿವುಡ್‌ನಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ಖದರ್ – ಅತಿ ಹೆಚ್ಚು ಸಂಭಾವನೆ ಪಡೆದು ಸುದ್ದಿಯಾದ ನಯನತಾರಾ

ಹಜ್ ಹಬೀಬ್ ಎನ್ಸಿಕೊನ್ನೆನ್ ಎಂಬ ವ್ಯಕ್ತಿ ʻ ಒಂದೇ ದಿನದಲ್ಲಿ ಏಳು ಮಹಿಳೆಯರನ್ನು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ತಾನು ಇನ್ನಷ್ಟು ಯುವತಿಯರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾನೆ. ಸಾಯುವವರೆಗೂ ಪತ್ನಿಯರ ಜೊತೆ ಬಾಳುತ್ತೇನೆ ಎಂದು ಪ್ರಮಾಣ ಮಾಡಿದ್ದಾನೆ. ಆದರೆ ಈ ಏಳು ಹೆಂಡತಿಯರಲ್ಲಿ ಇಬ್ಬರು ತನ್ನ ಸಹೋದರಿಯರೆಂದು ತಿಳಿದು ಅವನು ಆಘಾತಕ್ಕೊಳಗಾದನು. ಸದ್ಯ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.

ತನ್ನ ಮದುವೆಯ ಕುರಿತಾಗಿ ಮಾತನಾಡಿದ ಹಜ್ ಹಬೀಬ್, ಹೆಂಡತಿಯರಲ್ಲಿ ಅಸೂಯೆ ಬೆಳೆಯಬಾರದು ಅದಕ್ಕೇ ಅವರೆಲ್ಲರನ್ನೂ ಒಂದೇ ದಿನ ಮದುವೆ ಆಗಿದ್ದೇನೆ. ನಾನು ದೊಡ್ಡ ಮತ್ತು ಸಂತೋಷದ ಕುಟುಂಬವನ್ನು ಬಯಸುತ್ತೇನೆ. ನಮ್ಮ ಕುಟುಂಬದಲ್ಲಿ ಬಹುಪತ್ನಿತ್ವವಿದೆ. ಅಜ್ಜನಿಗೆ ಒಂದೇ ಮನೆಯಲ್ಲಿ ಆರು ಹೆಂಡತಿಯರಿದ್ದರು. ತಂದೆಗೆ ಐವರು ಹೆಂಡಿರು. ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾನೆ.

Shwetha M