ಇಬ್ಬರ ನಡುವೆ ಆಲ್ಕೋಹಾಲ್ ಚಾಲೆಂಜ್ – ಅರ್ಧಗಂಟೆಯಲ್ಲಿ 900 ಎಂಎಲ್ ಮದ್ಯ ಸೇವಿಸಿದ ವ್ಯಕ್ತಿ ಸಾವು!
ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಣ್ಣ ಪುಟ್ಟ ವಿಚಾರಕ್ಕೂ ಚಾಲೆಂಜ್ ಹಾಕುತ್ತಾರೆ. ಯಾರು ಗೆಲ್ಲುತ್ತಾರೋ ಅವರ ಮಾತು ಕೇಳಬೇಕು ಅಂತಾ ಷರತ್ತು ವಿಧಿಸುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಹಾಕಿದ ಚಾಲೆಂಜ್‌ನಿಂದಾಗಿ ಸಾಕಷ್ಟು ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ ಇಬ್ಬರು ಮದ್ಯ ಕುಡಿಕುಡಿಯುವ ಚಾಲೆಂಜ್ ಹಾಕಿದ್ದು, ಹೆಚ್ಚು ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡದಿದೆ. ತಿಮ್ಮೇಗೌಡ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್ ಮಿಲಿಟರಿ ದಾಳಿ – 25 ಮಂದಿ ಸಾವು
ಏನಿದು ಘಟನೆ?
ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ಮಾಡಿದ್ದರು. ಇಬ್ಬರಿಗೂ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದಾನೆ. ಈ ವೇಳೆ ತಿಮ್ಮೇಗೌಡ ಹೆಚ್ಚು ಮದ್ಯ ಸೇವಿಸಿದ್ದಾರೆ. ಮದ್ಯ ಸೇವಿಸಿದ ಕೆಲ ಹೊತ್ತಲ್ಲೇ ತಿಮ್ಮೇಗೌಡ ಅಸ್ವಸ್ಥಗೊಂಡಿದ್ದು, ರಕ್ತ ವಾಂತಿ ಮಾಡುತ್ತಲೇ ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ಥಳದಿಂದ ದೇವರಾಜು ಮತ್ತು ಕೃಷ್ಣೇಗೌಡ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಕುಡಿದು ಬಿದ್ದಿದ್ದ ತಿಮ್ಮೇಗೌಡನ ಶವವನ್ನು ಗ್ರಾಮಸ್ಥರು ಆತನ ಮನೆಗೆ ತಂದಿದ್ದಾರೆ. ಈ ಸಂಬಂಧ ತಲೆಮರೆಸಿಕೊಂಡಿರುವ ದೇವರಾಜ್ ಹಾಗೂ ಕೃಷ್ಣೇಗೌಡ ಎಂಬುವವರ ವಿರುದ್ಧ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.