ಅಯ್ಯೋ.. ಇದೆಂಥಾ ಹುಚ್ಚಾಟ? – ಪ್ಯಾರಾಚೂಟ್ ಇಲ್ಲದೆ 12,500 ಅಡಿಯಿಂದ ಜಿಗಿದ ವ್ಯಕ್ತಿ

ಕೆಲವರು ಸುಮ್ಮನೆ ಕುಳಿತಿದ್ರೆ ನಿದ್ದೆನೇ ಬರೋದಿಲ್ಲ ಅನ್ನೋ ತರ ಆಡುತ್ತಾರೆ.. ಏನಾದರೊಂದು ಕಿತಾಪತಿ ಮಾಡುತ್ತಲೇ ಇರ್ಬೇಕು. ಇಲ್ಲೊಬ್ಬ ವ್ಯಕ್ತಿ ವಿಮಾನ ಚಲಿಸುತ್ತಿರುವಾಗಲೇ ಕೆಳಗೆ ಹಾರಿದ್ದಾನೆ. ಬಳಿಕ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸ್ಟಂಟ್‌ಗಳನ್ನೂ ಮಾಡಿದ್ದಾನೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಬಿಜೆಪಿಯೇ ನೇರ ಹೊಣೆ..! ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ? – ರೇವಂತ್ ರೆಡ್ಡಿ
ಸಾಮಾನ್ಯವಾಗಿ ಸ್ಟಂಟ್ಸ್ ಮಾಡುವವರು ಮುನ್ನೆಚ್ಚರಿಕೆ ವಹಿಸಿ ವಿಮಾನದಿಂದ ಹಾರುವುದನ್ನು ನೋಡಿರುತ್ತೇವೆ. ಎಷ್ಟೇ ಅನುಭವ ಇದ್ರೂ ಪ್ಯಾರಾಚೂಟ್ ಧರಿಸಿರುತ್ತಾರೆ. ಆದ್ರೆ ಟ್ರಾವಿಸ್ ಪಾಸ್ಟ್ರಾನಾ ಎಂಬುವವನೊಬ್ಬ ಪ್ಯಾರಾಚೂಟ್ ಧರಿಸದೆ ವಿಮಾನದಿಂದ ಜಿಗಿದಿದ್ದಾನೆ. ವಿಮಾನದಿಂದ ಪೋರ್ಟೊ ರಿಕೊದ ಅರೆಸಿಬೊ ಮೇಲೆ 12,500 ಅಡಿಗಳಿಂದ ಜಿಗಿದಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಗಾಳಿಯಲ್ಲಿಯೇ ಕೆಲವು ಸ್ಟಂಟ್ಗಳನ್ನು ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿಆತ ವಿಮಾನದಿಂದ ಜಿಗಿಯುವಾಗ ಅವರು ಸನ್‌ಗ್ಲಾಸ್, ಸಾಕ್ಸ್ ಮತ್ತು ಮಾತ್ರ ಧರಿಸಿದ್ದ. ಕೈಯಲ್ಲಿ ರೆಡ್ಬುಲ್ನ್ನು ಹಿಡಿದುಕೊಂಡು ಹಾರಿದ್ದಾನೆ. ಇನ್ನು ಆತ ವಿಮಾನದಿಂದ ಹಾರುವ ಮೊದಲು ಎನರ್ಜಿ ಡ್ರಿಂಕ್ನ್ನು ಕುಡಿಯುತ್ತಾನೆ. ಬಳಿಕ ಎಲ್ಲಾ ಸುರಕ್ಷತಾ ಕವಚಗಳನ್ನು ಹಾಕಿಕೊಂಡ ಇತರ ಸ್ಕೈಡೈವರ್ಗಳೊಂದಿಗೆ ಜಿಗಿಯುತ್ತಾನೆ. ಬಳಿಕ ಆತನನ್ನು ಬೀಳದಂತೆ ಆ ಇಬ್ಬರು ಸ್ಕೈಡೈವರ್ಗಳು ಹಿಡಿಯುತ್ತಾರೆ. ನಂತರ ಆ ವ್ಯಕ್ತಿ ಸುರಕ್ಷಿತವಾಗಿ ನೆಲದ ಮೇಲೆ ಇಳಿದಿದ್ದಾನೆ.