ಬೆನ್ನ ಮೇಲೆ ಕತ್ತೆ ಹೊತ್ತು ಬಸ್ ಹತ್ತಿದ ವ್ಯಕ್ತಿ- ವಿಡಿಯೋ ವೈರಲ್

ಬೆನ್ನ ಮೇಲೆ ಕತ್ತೆ ಹೊತ್ತು ಬಸ್ ಹತ್ತಿದ ವ್ಯಕ್ತಿ- ವಿಡಿಯೋ ವೈರಲ್

ಕತ್ತೆಯನ್ನು ಸರಕು ಸಾಗಾಣಿಕೆಗೆ ಬಳಸುವುದು ಸಾಮಾನ್ಯ. ಮನುಷ್ಯರೂ ಕತ್ತೆ ಮೇಲೆ ಕುಳಿತು ಸವಾರಿ ಮಾಡುವುದನ್ನು ನೋಡಿರುತ್ತೀರಿ. ಆದರೆ ಕತ್ತೆ ಬಸ್ ನಲ್ಲಿ, ಅದೂ ಮನುಷ್ಯನ ಬೆನ್ನಿನ ಮೇಲೆ ಸವಾರಿ ಮಾಡುವುದನ್ನು ಎಂದಾದರೂ ಕಂಡಿದ್ದೀರಾ? ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ವ್ಯಕ್ತಿಯೊಬ್ಬ ತನ್ನ ಬೆನ್ನಿನ ಮೇಲೆ ಕತ್ತೆಯನ್ನು ಹೊತ್ತು ಬಸ್ ಏರುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಕಂಡ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಇದನ್ನೂ ಓದಿ: “ಚಿನ್ನದ ಮೀನು” ಹಿಡಿದು ದಾಖಲೆ ಬರೆದ ಮೀನುಗಾರ: ಫೊಟೋ ವೈರಲ್

ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಕತ್ತೆಯೊಂದಿಗೆ ಬಸ್ ಬಳಿ ಬಂದಿದ್ದಾನೆ. ಬಳಿಕ ಏಣಿಯ ಸಹಾಯದಿಂದ ಬಸ್ಸಿನ ಛಾವಣಿಯ ಮೇಲೆ ಸರಾಗವಾಗಿ ಹತ್ತಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ವಿಡಿಯೋವನ್ನು @HasnaZarooriHai ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ದೃಶ್ಯ ಪಾಕಿಸ್ತಾನದಲ್ಲಿ ಸೆರೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕೆಲ ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

suddiyaana