ಮಗುವಂತೆ ಶ್ವಾನವನ್ನ ಹೆಗಲ ಮೇಲೆ ಕೂರಿಸಿಕೊಂಡು ಊರೂರು ಸುತ್ತಿದ ಯುವಕ!

ಮಗುವಂತೆ ಶ್ವಾನವನ್ನ ಹೆಗಲ ಮೇಲೆ ಕೂರಿಸಿಕೊಂಡು ಊರೂರು ಸುತ್ತಿದ ಯುವಕ!

ಮನುಷ್ಯನ ಅತ್ಯುತ್ತಮ ಸ್ನೇಹಿತ ಅಂದ್ರೆ ಶ್ವಾನಗಳು. ನಮ್ಮ ಕುಟುಂಬದವರು, ಸ್ನೇಹಿತರು ನಮ್ಮನ್ನ ದೂರ ಮಾಡ್ಬೋದು.. ಆದ್ರೆ ಶ್ವಾನಗಳು ಯಾವತ್ತೂ ಮಾಲೀಕರನ್ನ ಬಿಟ್ಟುಕೊಡುವುದಿಲ್ಲ. ಹೀಗಾಗಿ ಶ್ವಾನಗಳನ್ನ ತಮ್ಮ ಮನೆ ಮಕ್ಕಳಂತೆ ಅನೇಕರು ನೋಡಿಕೊಳ್ಳುತ್ತಾರೆ. ಎಲ್ಲಿ ಹೋದ್ರೂ ಅದನ್ನ ಕರೆದುಕೊಂಡು ಹೋಗುತ್ತಾರೆ. ಇದೀಗ ಇಲ್ಲೊಬ್ಬ ಯುವಕ ತನ್ನ ಪ್ರೀತಿಯ ಶ್ವಾನವನ್ನ ಹೆಗಲ ಮೇಲೆ ಹೊತ್ತುಕೊಂಡು ಊರೂರು ಸುತ್ತಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಬ್ಯಾಂಕ್‌ ಸಿಬ್ಬಂದಿ ಎಡವಟ್ಟಿನಿಂದ ಗ್ರಾಹಕನ ಅಕೌಂಟ್‌ಗೆ ಬಂತು 1,00,000 ಕೋಟಿ ರೂ! – ಅಷ್ಟೊಂದು ಹಣ ಏನಾಯ್ತು?

ಇತ್ತೀಚೆಗೆ ಅನೇಕರು ತಮ್ಮ ಮುದ್ದಿನ ಶ್ವಾನಗಳನ್ನ ಹೋದಲ್ಲೆಲ್ಲಾ ಕರೆದುಕೊಂಡು ಹೋಗುತ್ತಾರೆ. ಇದೀಗ ಈ ಯುವಕ ಕೂಡ ನಾಯಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಊರು ಸುತ್ತಿದ್ದಾನೆ. ಮಕ್ಕಳಂತೆ ತನ್ನ ಹೆಗಲ ಮೇಲೆ ಹೊತ್ತು ನಡೆದುಕೊಂಡು  ಹೋಗುತ್ತಿರುವ ವಿಡಿಯೋವನ್ನ Binoy joshep ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆ ಯುವಕ ಮಕ್ಕಳಂತೆ ನಾಯಿಯನ್ನೂ ಹೆಗಲ ಮೇಲೆ ಹೊತ್ತು ಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಇದೀಗ ಈ ವ್ಯಕ್ತಿಯ ಶ್ವಾನ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ.

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪ್ರೀತಿ ನೀಡಿದರೆ ಕೊನೆತನಕ ಜೊತೆಯಿರುವ ಏಕೈಕ ಜೀವವಿದು ಎಂದಿದ್ದಾರೆ. ಇನ್ನೊಬ್ಬರು, ಇದು ನಿಜವಾದ ಪ್ರೀತಿ ಎಂದರೆ, ಮತ್ತೊಬ್ಬರು ಇಂತಹ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

Shwetha M