ಅಯ್ಯಯ್ಯೋ ಹೆಂಗಪ್ಪಾ ಬಿಡಿಸಿಕೊಳ್ಳೋದು – ಏಡಿ ಜೊತೆ ಆಡಲು ಹೋದವನ ಮೂಗಿಗೆ ಆಪತ್ತು!

ಅಯ್ಯಯ್ಯೋ ಹೆಂಗಪ್ಪಾ ಬಿಡಿಸಿಕೊಳ್ಳೋದು – ಏಡಿ ಜೊತೆ ಆಡಲು ಹೋದವನ ಮೂಗಿಗೆ ಆಪತ್ತು!

ಪ್ರಪಂಚದಲ್ಲಿ ಒಬ್ಬೊಬ್ಬರ ವರ್ತನೆ ಒಂದೊಂದು ರೀತಿ ಇರುತ್ತೆ. ಕೆಲವರು ತುಂಬಾ ಸಾಧುವಾಗಿದ್ದರೆ, ಇನ್ನೂ ಕೆಲವರು ವಿಲಕ್ಷಣವಾಗಿ ವರ್ತಿಸುತ್ತಾರೆ. ಅವರು ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುತ್ತಾರೆ ಅಂತಾ ಹೇಳಲಾಗದು. ಒಮ್ಮೆ ಸುಮ್ಮನೆ ಕುಳಿತಿದ್ದರೆ, ಮತ್ತೊಮ್ಮೆ ಏನಾದರೊಂದು ಕಿತಾಪತಿ ಮಾಡುತ್ತಿರುತ್ತಾರೆ. ಇಲ್ಲೊಬ್ಬ ವೃದ್ಧ ಏಡಿ ಜೊತೆ ಆಟವಾಡಲು ಹೋಗಿದ್ದಾನೆ. ಇದೀಗ ಇರಲಾರದೇ ಇರುವೆ ಬಿಟ್ಟುಕೊಂಡರು ಎಂಬ ಗಾದೆಯಂತಾಗಿದೆ ವೃದ್ಧನ ಸ್ಥಿತಿ.

ಇದನ್ನೂ ಓದಿ:ಜೊತೆ ಜೊತೆಯಲಿ ಇರುವೆವು ಹೀಗೆ ಎಂದು.. ಚಿರತೆ, ಕರಿಚಿರತೆ ಜೋಡಿಯ ಪಯಣ ಹೇಗಿದೆ ಗೊತ್ತಾ?

ಯಾವುದಾದರೂ ಜೀವಿಯನ್ನು ಕಂಡಾಗ ಕೆಲವರು ಅದನ್ನು ತನ್ನಷ್ಟಕ್ಕೆ ಬಿಡದೇ ಉಪಟಳ ನೀಡುತ್ತಾರೆ. ಇಂತಹ ಸಾಲಿಗೆ ಸೇರಿದ ವ್ಯಕ್ತಿಯೊಬ್ಬ ಏಡಿಯನ್ನು ಕೈಯಲ್ಲಿ ಹಿಡಿದು ಮುದ್ದು ಮಾಡಲು ಹೊರಟನೋ ಏನೋ ಗೊತ್ತಿಲ್ಲ. ಅದು ಮಾತ್ರ ಆತನ ಮೂಗನ್ನು ಹಿಡಿದು ತನ್ನ ಕೊಂಡಿಯಲ್ಲಿ ಗಟ್ಟಿಯಾಗಿ ಕಚ್ಚಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Weird and Terrifying Things ಎಂಬ ಟ್ವಿಟ್ಟರ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಿಳಿಗಡ್ಡಧಾರಿಯೊಬ್ಬ ಬೀಡಿ ಸೇದುತ್ತಿರುತ್ತಾನೆ. ಮತ್ತೊಂದು ಕೈಯಲ್ಲಿ ಏಡಿಯನ್ನು ಹಿಡಿದುಕೊಂಡು ತನ್ನ ಮೂಗಿನ ಬಳಿ ತೆಗೆದುಕೊಂಡು ಹೋಗಿದ್ದಾನೆ.  ಈ ವೇಳೆ ಗಾಬರಿಗೊಂಡ ಏಡಿ ಆತನ ಮೂಗಿಗೆ ಕಚ್ಚಿದೆ. ನೋವು ತಾಳಲಾರದೆ ಆತ ಬೀಡಿಯನ್ನು ಎಸೆದು ಜೋರಾಗಿ ಕಿರುಚಿದ್ದಾನೆ. ತನ್ನ ಎರಡು ಕೈಗಳ ಸಹಾಯದಿಂದ ಬಿಡಿಸಿಕೊಂಡು ಏಡಿಯನ್ನು ದೂರ ಎಸೆದಿದ್ದಾನೆ.

suddiyaana