ಪ್ರಯಾಣಿಕರ ಸೀಟಿನಲ್ಲಿ ಕುಳಿತು ಕಾಲಿನಲ್ಲಿ ಸ್ಟೇರಿಂಗ್ ತಿರುಗಿಸುವ ಭೂಪ! – ಅಬ್ಬಬ್ಬಾ.. ಭೀತಿ ಹುಟ್ಟಿಸುತ್ತೆ ಈತನ ಸ್ಟಂಟ್!
ಕೆಲವರಿಗೆ ಇರೋದಿಕ್ಕೆ ಆಗೋದಿಲ್ಲ. ಏನಾದರೊಂದು ಕಿತಾಪತಿ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಹೆಚ್ಚು ಜನಪ್ರಿಯತೆ ಪಡೆಯಲು ಏನೇನೊ ಸ್ಟಂಟ್‌ಗಳನ್ನು ಮಾಡಿ ಪೇಚಿಗೆ ಸಿಲುಕುತ್ತಾರೆ. ವಾಹನದಲ್ಲಿ ಹೋಗುತ್ತಿರುವ ವೇಳೆ ಕೈ ಬಿಟ್ಟು ರೈಡ್ ಮಾಡಿವುದು, ಕಾರು ಡ್ರೈವಿಂಗ್ ಮಾಡುವ ವೇಳೆ ಡೋರ್ ಓಪನ್ ಮಾಡಿ ಏನೇನೋ ಸಾಹಸ ಮಾಡುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಕಾರ್ ಡ್ರೈವಿಂಗ್ ಮಾಡಿದ್ದಾನೆ. ಆದ್ರೆ ಆತ ಸ್ಟರಿಂಗ್ ತಿರುಗಿಸುತ್ತಿರುವುದು ಕೈಯಿಂದ ಅಲ್ಲ.. ಕಾಲಿನಿಂದ. ಅದೂ ಕೂಡ ಪ್ರಯಾಣಿಕನ ಸೀಟಿನಲ್ಲಿ ಕುಳಿತು ಡ್ರೈವಿಂಗ್ ಮಾಡುತ್ತಿದ್ದಾನೆ. ಇದರ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಗೆಳತಿ ಮೇಲೆ ಕಾರು ಹರಿಸಿ ಕೈ, ಕಾಲು ಮುರಿದ ಐಎಎಸ್ ಅಧಿಕಾರಿ ಮಗ – ಹೋಟೆಲ್ ಮುಂದೆಯೇ ನಡೆದಿತ್ತು ಅಮಾನುಷ ಕೃತ್ಯ
ಕೆಲವರ ಕೈಗೆ ವಾಹನ ಸಿಕ್ರೆ ಸಾಕು.. ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕ ಹಾಗೆ ಮಾಡುತ್ತಾರೆ. ವಾಹನ ಕೈಗೆ ಸಿಕ್ಕಿದ್ದೇ ಚಾನ್ಸ್ ಅಂತಾ ಏನೇನೋ ಸ್ಟಂಟ್ಸ್ ಮಾಡುತ್ತಾರೆ. ಅದರ ಬೆಲೆ ಎಷ್ಟು? ಹೀಗೆ ಸ್ಟಂಟ್ಸ್ ಮಾಡಿದ್ರೆ ಮುಂದೆ ಏನೆಲ್ಲಾ ಸಮಸ್ಯೆ ಆಗುತ್ತೆ ಅನ್ನೋದ್ರ ಬಗ್ಗೆ ಒಂಚೂರು ಯೋಚನೆ ಮಾಡುವುದಿಲ್ಲ. ಆ ಕ್ಷಣಕ್ಕೆ ಮನಸ್ಸು ಏನು ಹೇಳುತ್ತೋ.. ಅದನ್ನೇ ಮಾಡ್ತಾರೆ. ವಾಹನ ಕೈಗೆ ಸಿಕ್ಕ ಕೂಡಲೇ ಒಂದಲ್ಲ ಒಂದು ರೀತಿಯಲ್ಲಿ ಜನರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಕೆಲವರು ನಾನಾ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಆದರೆ, ಇಂತಹ ಕಸರತ್ತುಗಳು ಬಹುತೇಕ ನೋಡಲು ಅಪಾಯಕಾರಿಯಾಗಿ ಇರುತ್ತವೆ. ಇಲ್ಲೊಬ್ಬ ಭೂಪ ಕಾರು ಚಲಾಯಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಕರ ಸೀಟಿನಲ್ಲಿ ಕುಳಿತು ಕಾರು ಚಲಾಯಿಸಿದ್ದಾರೆ. ಅದೂ ಸ್ಟೀರಿಂಗ್ ತಿರುಗಿಸಲು ಇವರು ಕೈ ಬಳಸುತ್ತಿಲ್ಲ, ಬದಲಾಗಿ ಕಾಲಿನಲ್ಲಿ ಸ್ಟೀರಿಂಗ್ ತಿರುಗಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆಲ್ಟೋ ಕಾರು ಸಾಗುತ್ತಿರುವ ದೃಶ್ಯದ ಮೂಲದ ಈ ಕ್ಲಿಪ್ ಶುರುವಾಗುತ್ತದೆ. ಈ ಕಾರಿನ ಹಿಂಬದಿಯಲ್ಲಿ ಬರುವ ಪ್ರಯಾಣಿಕರು ಈ ದೃಶ್ಯ ಸೆರೆ ಹಿಡಿಯುತ್ತಿರುತ್ತಾರೆ. ಹೀಗೆ ಕಾರಿನ ದೃಶ್ಯ ಸೆರೆ ಹಿಡಿಯುತ್ತಿದ್ದಂತೆಯೇ ಚಾಲಕ ಪ್ರಯಾಣಿಕರ ಸೀಟಿನಲ್ಲಿ ಕುಳಿತಿರುವುದು ಕಾಣಿಸುತ್ತದೆ. ಜೊತೆಗೆ ಕಾಲಿನ ಸಹಾಯದಿಂದ ಈ ವ್ಯಕ್ತಿ ಕಾರನ್ನು ಚಲಾಯಿಸುವುದನ್ನು ಇಲ್ಲಿ ನೋಡಬಹುದು. ವಿಡಿಯೋದ ಕೊನೆಯಲ್ಲಿ ಈ ದೃಶ್ಯ ಸೆರೆ ಹಿಡಿಯುವವರೊಂದಿಗೆ ಈ ವ್ಯಕ್ತಿ ಮಾತನಾಡುತ್ತಾರೆ. ಆಗ ಅವರು ಪ್ರಯಾಣಿಕರ ಸೀಟಿನಲ್ಲಿಯೇ ಕುಳಿತು ಒಂದು ಕೈಯಿಂದ ಕಾರನ್ನು ಓಡಿಸುತ್ತಿರುವುದು ಕಾಣುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ಯುಪಿ ನಂಬರ್ ಪ್ಲೇಟ್ ಹೊಂದಿರುವ ಈ ಕಾರನ್ನು ನೋಡಿದ ಕೆಲವರು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುಂತೆ ಆಗ್ರಹಿಸಿದ್ದಾರೆ.