ಕಾರಿನಲ್ಲಿ ಗೂಳಿಯನ್ನು ಕೂರಿಸಿಕೊಂಡು ರೌಂಡ್ಸ್ – ಮಾಲೀಕನಿಗೆ ಶಾಕ್ ಕೊಟ್ಟ ಪೊಲೀಸರು!

ಶಾಪಿಂಗ್ ಹೋಗುವಾಗ, ಸಂಬಂಧಿಕರ ಮನೆಗೆ ನಾಯಿ ಬೆಕ್ಕುಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಇನ್ನು ಆಕಳು, ಎತ್ತು, ಕೋಣ ಮುಂತಾದ ಸಾಕು ಪ್ರಾಣಿಗಳನ್ನು ಟ್ರಕ್, ಟೆಂಪೋಗಳಲ್ಲಿ ಸಾಗಿಸುವುದನ್ನು ನಾವು ಕೇಳಿದ್ದೇವೆ. ಎಂದಾದರೂ ಗೂಳಿಗಳು ಕಾರಿನಲ್ಲಿ ಸವಾರಿ ಮಾಡುವುದನ್ನು ಕೇಳಿದ್ದೀರಾ? ನೋಡಿದ್ದೀರಾ? ಇಲ್ಲೊಬ್ಬ ಕಾರಿನಲ್ಲಿ ದೈತ್ಯ ಕೊಂಬುಳ್ಳ ಗೂಳಿಯನ್ನು ಕರೆದೊಯ್ಯುತ್ತಿದ್ದಾನೆ. ಅದೂ ಹೆದ್ದಾರಿಯಲ್ಲಿ!
ಇದನ್ನೂ ಓದಿ: ಗೂಳಿ ಕಾಳಗ ಬಿಡಿಸಲು ಹೋದ ಕುಡುಕ- ಹೀರೋ ಆಗಲು ಹೋಗಿ ಝೀರೋ ಆದ
ಸಾಮಾನ್ಯವಾಗಿ ಬೆಕ್ಕು, ನಾಯಿ ಮುಂತಾದ ಸಾಕು ಪ್ರಾಣಿಗಳನ್ನು ಅನೇಕರು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಕೆಲ ಪ್ರಾಣಿಗಳು ಗಾಬರಿಗೊಂಡು ರಂಪಾಟ ಮಾಡುತ್ತವೆ. ಅಷ್ಟೇ ಅಲ್ಲದೇ ಕೆಲವೊಂದು ಬಾರಿ ವಾಹನದಿಂದ ರಸ್ತೆಗೆ ಹಾರುತ್ತವೆ. ಆದರೆ ಇಲ್ಲೊಂದು ಬೃಹತ್ ಗಾತ್ರದ ಗೂಳಿ ಕಾರಿನಲ್ಲಿ ಒಂಚೂರು ಭಯವಿಲ್ಲದೆ ಆರಾಮವಾಗಿ ಪ್ರಯಾಣಿಸುತ್ತಿದೆ. ಹೆದ್ದಾರಿಯಲ್ಲಿ ವಾಹನಗಳು ಹತ್ತಿರ ಬರುತ್ತಿದ್ದರೂ ಯಾವುದೇ ಭಯವಿಲ್ಲದೆ ಕೂಲ್ ಆಗಿ ರೈಡ್ ಎಂಜಾಯ್ ಮಾಡುತ್ತಿದೆ. ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಹೀಗೆ ಕಾರಿನಲ್ಲಿ ಗೂಳಿಯನ್ನು ಕರೆದುಕೊಂಡು ಹೋಗುವುದು ಅಪಾಯಕಾರಿ. ಅಕಸ್ಮಾತ್ ಈ ಗೂಳಿ ದಾರಿಹೋಕರ ಮೇಲೆ ಹರಿಹಾಯ್ದರೆ ಅಥವಾ ದಾರಿಹೋಕರು ಇದನ್ನು ಕೆಣಕಿದರೆ ಮುಂದೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆತ ಶೋಕಿಗಾಗಿ ಹೀಗೆ ಗೂಳಿಯೊಂದಿಗೆ ಸವಾರಿ ಹೊರಟಿದ್ದಾನೋ ಏನೋ ಗೊತ್ತಿಲ್ಲ. ಸದ್ಯ ಈತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.