ಮಹಿಳೆಯನ್ನು ಕೊಂದು ತರಕಾರಿ ಜೊತೆ ಆಕೆಯ ಹೃದಯವನ್ನು ಬೇಯಿಸಿ ಅಡುಗೆ ಮಾಡಿ ಬಡಿಸಿದ ಭೂಪ!

ಮಹಿಳೆಯನ್ನು ಕೊಂದು ತರಕಾರಿ ಜೊತೆ ಆಕೆಯ ಹೃದಯವನ್ನು ಬೇಯಿಸಿ ಅಡುಗೆ ಮಾಡಿ ಬಡಿಸಿದ ಭೂಪ!

ಕೊಲೆಯಾದ ಸಂದರ್ಭದಲ್ಲಿ ಮೃತದೇಹವನ್ನು ಆರೋಪಿಗಳು ಯಾರೂ ಓಡಾಡದ ಸ್ಥಳಗಳಲ್ಲಿ ಎಸೆದು ಹೋಗುತ್ತಾರೆ. ಇನ್ನೂ ಕೆಲ ಆರೋಪಿಗಳು ಶವವನ್ನು ಹೂತು ಸುಳಿವು ಸಿಗದಂತೆ ಮಾಡುತ್ತಾರೆ. ಆದರೆ ಇತ್ತೀಚೆಗೆ ಕೆಲವು ವಿಚಿತ್ರ ಪ್ರಕರಣಗಳು ವರದಿಯಾಗುತ್ತಿವೆ. ಶವವನ್ನು ತುಂಡರಿಸಿ ಫ್ರಿಡ್ಜ್ ನಲ್ಲಿ ಇಡುವುದು, ಅವುಗಳನ್ನು ಪೀಸ್‌ ಪೀಸ್‌ ಮಾಡಿ ಸಿಕ್ಕ ಸಿಕ್ಕಲ್ಲೆಲ್ಲಾ ಎಸೆಯುತ್ತಿರುವ ವಿಲಕ್ಷಣಕಾರಿ ಘಟನೆಗಳು ನಡೆಯುತ್ತಿವೆ. ಇದೀಗ ಇಲ್ಲೊಬ್ಬ, ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಮೃತದೇಹದಿಂದ ಹೃದಯ ತೆಗೆದು ಅಡುಗೆ ಮಾಡಿ ಬಡಿಸಿದ್ದಾನೆ.

ಹೌದು, ಅಚ್ಚರಿಯಾದ್ರೂ ಸತ್ಯ. ವ್ಯಕ್ತಿಯೊಬ್ಬ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದಾನೆ. ಆ ಮೃತದೇಹವನ್ನು ಬಿಸಾಡುವ ಮೊದಲು ಆ ಶವವನ್ನು ಕತ್ತರಿಸಿ, ಅದರಲ್ಲಿರುವ ಹೃದಯವನ್ನು ಹೊರಗೆ ತೆಗೆದು, ಅದನ್ನು ಆಲೂಗಡ್ಡೆಯ ಜೊತೆ ಬೇಯಿಸಿ ಮನೆಯವರಿಗೆ ಸಾಂಬಾರ್ ಮಾಡಿ ಬಡಿಸಿರುವ ಭಯಾನಕ ಘಟನೆ ನಡೆದಿದೆ.

ಇದನ್ನೂ ಓದಿ: ಹಸುಗೂಸು ಮಾರಾಟ ದಂಧೆ‌ ಪ್ರಕರಣ – ಮಹಿಳಾ ಏಜೆಂಟ್‌ ಹಾಗೂ ನಕಲಿ ವೈದ್ಯ ಅರೆಸ್ಟ್!

ಅಮೆರಿಕದ ಒಕ್ಲಹೋಮ ರಾಜ್ಯದಲ್ಲಿ ಈ ವಿಲಕ್ಷಣಕಾರಿ ಘಟನೆ ನಡೆದಿದೆ. ಕೊಲೆ ಮಾಡಿದ ನಂತರ ಮೃತದೇಹದಿಂದ ಕೆಲವು ಅಂಗಗಳನ್ನು ಹೊರಗೆ ತೆಗೆದಿದ್ದಾನೆ. ಬಳಿಕ ಹೃದಯವನ್ನು ಮೃತದೇಹದಿಂದ ಕತ್ತರಿಸಿ, ಆಲೂಗಡ್ಡೆಯೊಂದಿಗೆ ಬೇಯಿಸಿ ಅಡುಗೆ ಮಾಡಿ ಬಡಿಸಿದ್ದಾನೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದೆ.

ಆತ ಮೃತ ಮಹಿಳೆಯ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತಂದು ಅಲ್ಲಿ ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಚಿಕ್ಕಪ್ಪ ಮತ್ತು ಅವರ ಹೆಂಡತಿಗೆ ಬಡಿಸಿದ್ದಾನೆ ಎಂದು ತನಿಖಾಧಿಕಾರಿಗಳು ಚಿಕಾಶಾದ ಗ್ರೇಡಿ ಕೌಂಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಾದ ಬಳಿಕ ಆಂಡರ್ಸನ್ ಆ ಮನೆಯಲ್ಲಿದ್ದ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಮೊಮ್ಮಗಳನ್ನು ಕೂಡ ಕೊಂದಿದ್ದಾನೆ. ತನ್ನ ಚಿಕ್ಕಪ್ಪನಿಗೆ ಚಾಕುವಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾನೆ.

ಈ ಮೊದಲು ಕೂಡ ಕೊಲೆ ಮಾಡಿರುವ ಆರೋಪ ಹೊತ್ತಿರುವ ಆಂಡರ್ಸನ್ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಇತ್ತೀಚೆಗೆ ಆತ ಉತ್ತಮ ನಡವಳಿಕೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಕೆಲವೇ ವಾರಗಳ ನಂತರ ಈ ಕೃತ್ಯ ಎಸಗಿದ್ದಾನೆ. 2017ರಲ್ಲಿ ಮಾದಕವಸ್ತು ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

Shwetha M