ಮನೆಗೆ ಬಂದ ಮೊಸಳೆಯನ್ನು ಕಸದ ಬುಟ್ಟಿಯಲ್ಲಿ ಸೆರೆ ಹಿಡಿದ ಭೂಪ!

ಮೊಸಳೆಗಳು ಅಪಾಯಕಾರಿ ಜೀವಿಗಳು. ಇದರ ಬಾಯಿಗೆ ಸಿಕ್ಕಿಬಿದ್ರೆ ಕತೆ ಮುಗಿತು ಅಂತಾ ಲೆಕ್ಕ. ಹೀಗಾಗಿಯೇ ಇದರ ಬಳಿ ಯಾರು ಹೋಗುವುದಿಲ್ಲ. ಕೆಲವೊಬ್ಬರು ಇಂತಹ ಅಪಾಯಕಾರಿ ಜೀವಿಗಳ ಜೊತೆ ಹುಚ್ಚಾಟ ಮೆರೆಯುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಲ್ಲೊಬ್ಬ ವ್ಯಕ್ತಿ ಯಾವುದೇ ಭಯವಿಲ್ಲದೆ ಧೈರ್ಯದಿಂದ ಮನೆ ಬಳಿ ಬಂದಂತಹ ಮೊಸಳೆಯನ್ನು ಹೆಡೆಮುರಿ ಕಟ್ಟಿ ಸರೋವರದ ಬಳಿ ಬಿಟ್ಟು ಬಂದಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆ ವ್ಯಕ್ತಿಯ ಸಾಹಸವನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲೇ ಡಿವೋರ್ಸ್ ಘೋಷಿಸಿದ ಸ್ಪರ್ಧಿ – ಅಂತಹದ್ದು ಏನಾಯ್ತು ಗೊತ್ತಾ?
ಈ ಘಟನೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದೆ. MindBlowing ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ “ಫ್ಲೋರಿಡಾದ ವ್ಯಕ್ತಿ ಕಸದ ಬುಟ್ಟಿಯ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮನೆ ಬಾಗಿಲಿಗೆ ಬಂದಂತಹ ಮೊಸಳೆಯನ್ನು ಸೆರೆ ಹಿಡಿಯುವುದನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ, ಮೊಸಳೆಯೊಂದು ನಿಧಾನಕ್ಕೆ ಮನೆಯ ಅಂಗಳದ ಬಳಿ ಬರುತ್ತಿರುವುದನ್ನು ಕಾಣಬಹುದು. ಈ ಅಪಾಯಕಾರಿ ಜೀವಿಯನ್ನು ಕಂಡು ಅಕ್ಕ ಪಕ್ಕದ ಮನೆಯವರೆಲ್ಲರೂ ಗಾಬರಿಗೊಂಡು ಕಿರಿಚಾಡುತ್ತಾರೆ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಈ ಮೊಸಳೆಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕು, ಇಲ್ಲದಿದ್ರೆ, ತುಂಬಾ ಕಷ್ಟ ಇದೆ ಎನ್ನುತ್ತಾ, ಧೈರ್ಯ ಮಾಡಿ ಅಲ್ಲೇ ಇದ್ದ ದೊಡ್ಡ ಕಸದ ಬುಟ್ಟಿಯನ್ನು ತೆಗೆದುಕೊಂಡು ತನ್ನ ಸಾಹಸ ಮತ್ತು ಸಮಯ ಪ್ರಜ್ಞೆಯಿಂದ ಮೊಸಳೆಯನ್ನು ಆ ಕಸದ ಬುಟ್ಟಿಯೊಳಗೆ ಬೀಳಿಸಿ, ನಂತರ ಕಸದ ಬುಟ್ಟಿಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ, ಮೊಸಳೆಯನ್ನು ಸೆರೆಹಿಡಿಯುತ್ತಾನೆ. ಹೀಗೆ ಸೆರೆ ಹಿಡಿದ ಮೊಸಳೆಯನ್ನು ತೆಗೆದುಕೊಡು ಹೋಗಿ ಅಲ್ಲೇ ಸಲ್ವ ದೂರದಲ್ಲಿದ್ದ ಸರೋವರದ ಬಳಿ ಬಿಟ್ಟು ಬರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ನೋಡಿರಿ

