ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಭೂಪ – ವಿಡಿಯೋ ವೈರಲ್

ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಭೂಪ – ವಿಡಿಯೋ ವೈರಲ್

ಚಿಕ್ಕಮಗಳೂರು: ಮನುಷ್ಯನಿಗೆ ಹಾವು ಕಚ್ಚಿದ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ತೆರಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತನಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ವಿಚಿತ್ರ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ.

ಇದನ್ನೂ ಓದಿ: ಓಲಾ ಸ್ಕೂಟರ್‌ ನಲ್ಲಿ ಕ್ರಿಕೆಟ್ ಕಾಮೆಂಟ್ರಿ – ಭೇಷ್ ಎಂದ ನೆಟ್ಟಿಗರು

ಕೊಲ್ಕತ್ತಾ ಮೂಲದ ಆಸೀಫ್ ಎಂಬಾತ ತನಗೆ ಹಾವು ಕಚ್ಚಿದ ಕೊಳಕ ಮಂಡಲ ಹಾವಿನೊಂದಿಗೆ ತರೀಕೆರೆ ಜಿಲ್ಲಾ ಆಸ್ಪತ್ರೆಗೆ ಬಂದು ಎಲ್ಲರಿಗೂ ಶಾಕ್ ನೀಡಿದ್ದಾನೆ.

ತರೀಕೆರೆಯಲ್ಲಿ ರಾಷ್ಟ್ರೀಯ ಕೆಲಸಕ್ಕೆ ಬಂದಿದ್ದ ಆಸೀಫ್, ಊರಿಗೆ ಹೋಗಲೆಂದು ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾನೆ. ಈ ವೇಳೆ ಕೊಳಕ ಮಂಡಲ ಹಾವು ಆಸೀಫ್ ಗೆ ಕಚ್ಚಿದೆ. ಆಸೀಫ್ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

suddiyaana