ಮದುಮಕ್ಕಳಂತೆ ಸಿಂಗಾರಗೊಂಡ ಶ್ವಾನಗಳು! – ಹೇಗಿತ್ತು ನಾಯಿಗಳ ಮದುವೆ?
ಇತ್ತೀಚಿನ ದಿನಗಳಲ್ಲಿ ಪ್ರಾಣಿ ಪ್ರಿಯರಿಗೆ ಕೊರತೆ ಇಲ್ಲ. ಪ್ರಾಣಿಗಳೊಂದಿಗೆ ರೈಡ್, ಪ್ರೀತಿಯ ಶ್ವಾನಗಳ ಹುಟ್ಟು ಹಬ್ಬ ಆಚರಣೆ ಮಾಡುವುದನ್ನು ಕೇಳಿದ್ದೇವೆ. ಎಂದಾದರೂ ಶ್ವಾನಗಳ ಮದುವೆ ಬಗ್ಗೆ ಕೇಳಿದ್ದೀರಾ? ಇಲ್ಲೊಬ್ಬ ಶ್ವಾನ ಪ್ರೇಮಿ ತನ್ನ ನಾಯಿಗಳಿಗೆ ಮನುಷ್ಯರಂತೆ ಅದ್ದೂರಿಯಾಗಿ ಮದುವೆ ಮಾಡಿದ್ದಾನೆ. ಈ ಮದುವೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮನೆ ಯಜಮಾನಿಗೆ ಪ್ರತೀ ತಿಂಗಳು ₹2 ಸಾವಿರ – ಯಾರಿಗೆಲ್ಲಾ ಬಂಪರ್ ಆಫರ್..?
ಉತ್ತರ ಪ್ರದೇಶದ ಅಲಿಗಢ ನಿವಾಸಿ ದಿನೇಶ್ ಎಂಬಾತ ತನ್ನ ಪ್ರೀತಿಯ ಶ್ವಾನ ಟಾಮಿಗೆ ಜೈಲಿ ಎಂಬ ಹೆಣ್ಣು ಶ್ವಾನದ ಜೊತೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾನೆ.
ಶ್ವಾನಗಳ ಮದುವೆ ಜ. 14 ರಂದು ನಡೆದಿದೆ. ಮದುವೆಯಲ್ಲಿ ವಾದ್ಯ, ನೃತ್ಯ, ನೆಂಟರಿಷ್ಟರ ಸಮಾಗಮ, ಊಟೋಪಚಾರ ಎಲ್ಲವೂ ಒಳಗೊಂಡಿತ್ತು. ಇದಕ್ಕಾಗಿ ದಿನೇಶ್ ಬರೋಬ್ಬರಿ 40 ರಿಂದ 45 ಸಾವಿರದವರೆಗೆ ಖರ್ಚು ಮಾಡಿದ್ದಾನೆ.
ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ದೃಶ್ಯದಲ್ಲಿ ಎರಡೂ ಶ್ವಾನಗಳನ್ನು ಮಧ್ಯದಲ್ಲಿ ನಿಲ್ಲಿಸಿ, ಅದರ ಸುತ್ತ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ವಿಡಿಯೋವನ್ನು ನೋಡಿ ಶ್ವಾನ ಪ್ರೀತಿಯನ್ನು ಕೊಂಡಾಡಿದ್ದರೆ, ಇನ್ನೂ ಕೆಲವರು ಇದು ಅತಿರೇಕ ಎಂದಿದ್ದಾರೆ.
#WATCH | A male dog, Tommy and a female dog, Jaily were married off to each other in UP’s Aligarh yesterday; attendees danced to the beats of dhol pic.twitter.com/9NXFkzrgpY
— ANI UP/Uttarakhand (@ANINewsUP) January 15, 2023