ಪ್ರಿಯತಮೆ ಜೊತೆ ಸುದೀರ್ಘ ಚುಂಬನದಲ್ಲಿ ಮೈಮರೆತ ಪ್ರೇಮಿ – ಮುತ್ತಿನ ಮತ್ತಿಂದ ಹೊರಬಂದಾಗ ಕಿವಿಯೇ ಢಮಾರ್..!

ಪ್ರಿಯತಮೆ ಜೊತೆ ಸುದೀರ್ಘ ಚುಂಬನದಲ್ಲಿ ಮೈಮರೆತ ಪ್ರೇಮಿ – ಮುತ್ತಿನ ಮತ್ತಿಂದ ಹೊರಬಂದಾಗ ಕಿವಿಯೇ ಢಮಾರ್..!

ಸರೋವರದ ದಂಡೆ. ಪ್ರೇಮಪಕ್ಷಿಗಳಿಗೆ ಇವತ್ತು ನಿಮ್ಮದೇ ದಿನ.. ನಿಮ್ಮ ಪ್ರೇಮಿಗೆ ಎಷ್ಟು ಹೊತ್ತು ಬೇಕಾದರೂ ಚುಂಬಿಸಬಹುದು ಎಂದು ಆಹ್ವಾನ ನೀಡಿದರೆ ಹೇಗಿರುತ್ತದೆ. ಇಂಥಾ ಚಾನ್ಸ್ ಮಿಸ್ ಮಾಡಿಕೊಳ್ಳುವುದು ಹೇಗೆ ಎಂದು ಜೋಡಿಯೊಂದು ಸುದೀರ್ಘ ಚುಂಬನದಲ್ಲಿ ಮೈಮರೆತಿತ್ತು. ಅತಿಯಾದರೆ ಅಮೃತವೂ ವಿಷವಾಗಬಹುದು. ಅತಿ ಹೊತ್ತು ಚುಂಬಿಸಿದರೂ ಕೂಡಾ ಆಪತ್ತು ಅನ್ನೋದು ಈ ಪ್ರೇಮಿಗಳಿಗೆ ಗೊತ್ತಿರಲಿಲ್ಲ. ಪ್ರೇಮ ಚುಂಬನದಲ್ಲಿ ಮೈಮರತಿದ್ದ ಪ್ರಿಯತಮ ಮುತ್ತಿನ ಮತ್ತಿನಿಂದ ಹೊರಬಂದಾಗ ಶ್ರವಣಶಕ್ತಿಯನ್ನೇ ಕಳೆದುಕೊಂಡಿದ್ದ.

ಇದನ್ನೂ ಓದಿ: ಬಾಲ ತುಳಿದ ಸಿಟ್ಟೋ.. ಬಾಲಕನ ಮೇಲೆ ದ್ವೇಷವೋ? – ಹುಡುಕಿಕೊಂಡು ಬಂದು 9 ಬಾರಿ ಕಚ್ಚಿಹೋದ ವಿಷಸರ್ಪ..!

ಚೀನಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಗಸ್ಟ್ 22ರಂದು ಚೀನಾದಲ್ಲಿ ಚೈನೀಸ್ ಪ್ರೇಮಿಗಳ ದಿನವಾಗಿ ಆಚರಿಸಿಕೊಳ್ಳಲಾಗುತ್ತದೆ. ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದ ಪಶ್ಚಿಮ ಸರೋವರದಲ್ಲಿ ಆವತ್ತು ಪ್ರೇಮಿಗಳು ಸೇರಿದ್ದರು. ಇವರಲ್ಲಿ ಒಂದು ಜೋಡಿ ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮರೆತಿದೆ. ಪ್ರಿಯತಮೆ ಮತ್ತು ಪ್ರಿಯಕರ ಇಬ್ಬರು 10 ನಿಮಿಷಗಳ ಕಾಲ ಲಿಪ್ ಲಾಕ್ ಕಿಸ್ ನ್ನು ಮಾಡಿದ್ದಾರೆ. ತನ್ನ ಗೆಳತಿಯನ್ನು ಪ್ರೇಮಿ ಸುದೀರ್ಘವಾಗಿ ಚುಂಬಿಸಿದ್ದಾನೆ. ಮತ್ತಿನ ಮತ್ತಿನಲ್ಲಿ ಪ್ರೇಮಿಗಳು ತೇಲಿಹೋಗಿದ್ದಾರೆ. ಸುದೀರ್ಘ ಮುತ್ತಿನಾಟದ ನಂತರ ಪ್ರೇಮಿಗೆ ಯಾಕೋ ಕಿವಿಯೇ ಕೇಳಿಸುತ್ತಿರಲಿಲ್ಲ. ವಿಪರೀತ ಕಿವಿ ನೋವು ಕೂಡಾ ಆರಂಭವಾಗಿದೆ. ಪ್ರಿಯತಮೆಯ ಪ್ರೀತಿಯ ದನಿ ಕೂಡಾ ಕಿವಿಗೆ ಮುಟ್ಟುತ್ತಿರಲಿಲ್ಲ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಚೆಕಪ್‌ಗೆ ಹೋಗಿದ್ದಾನೆ. ಚಿಕಿತ್ಸೆ ಕೊಟ್ಟ ವೈದ್ಯರು ಶ್ರವಣಶಕ್ತಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನ ವರದಿ ಪ್ರಕಾರ ಗೆಳತಿಗೆ 10 ನಿಮಿಷ ಮುತ್ತು ಕೊಟ್ಟ ಬಳಿಕ ವ್ಯಕ್ತಿ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಹೆಚ್ಚು ಉತ್ಸಾಹದಿಂದ ಚುಂಬಿಸುವುದರಿಂದ ಇಂತಹ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಉದ್ರೇಕಗೊಂಡು ವೇಗವಾಗಿ ಚುಂಬಿಸುವುದರಿಂದ ದೇಹದಲ್ಲಿ ನಡುಕ ಉಂಟಾಗುತ್ತದೆ, ಉದ್ರೇಕದಿಂದ ಕಿಸ್ ಮಾಡುವಾಗ ಜೋರಾಗಿ ಉಸಿರಾಡುತ್ತಾರೆ. ಇದರಿಂದಾಗಿ ಕಿವಿ ಹಿಗ್ಗುತ್ತದೆ. ಚೀನಾ ಯುವಕನಿಗೆ ವೈದ್ಯರು ಸಂಪೂರ್ಣ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕು ಎಂದು ಹೇಳಿದ್ದಾರೆ.

suddiyaana