ಧೋನಿಯ ಉದ್ಯಮಗಳೆಷ್ಟು? – ಬೆಂಗಳೂರಿನಲ್ಲಿ ಕೂಲ್ ಕ್ಯಾಪ್ಟನ್ ಸ್ಕೂಲ್!

ಮಹೇಂದ್ರ ಸಿಂಗ್ ಧೋನಿ… ಪ್ರತಿ ಬಾರಿ ಈ ಹೆಸರು ಕೇಳಿದಾಗಲೂ ಒಂದೊಂದು ರೋಚಕ ಪ್ರಸಂಗಗಳು, ಹುಬ್ಬೇರಿಸುವಂತಹ ಕಥೆಗಳು ನೆನಪಾಗುತ್ತವೆ. ಭಾರತೀಯ ಕ್ರಿಕೆಟ್‌ಗೆ ಎಲ್ಲವನ್ನೂ ಕೊಟ್ಟ ಧೋನಿ, ವಿಶ್ವ ಕ್ರಿಕೆಟ್‌ಗೇ ಮಾದರಿ. ಅವರೊಬ್ಬ ದಂತಕಥೆ. ಮೈದಾನದಲ್ಲಿ ಇವರು ಎಷ್ಟು ಕೂಲ್ ಎಂಬುದು ಎಲ್ಲರಿಗೂ ಗೊತ್ತು. ಧೋನಿ ಮೈದಾನದಲ್ಲಿ ಎಷ್ಟು ಕೂಲ್ ಆಗಿ ಇರ್ತಾರೋ.. ಮೈದಾನದ ಹೊರಗೂ ಅಷ್ಟೇ ಕೂಲ್ ಆಗಿ ಉದ್ಯಮ ನಡೆಸ್ತಾ ಇದ್ದಾರೆ.. ಈ ಎವರ್ ಗ್ರೀನ್ ಕೂಲ್ ಕ್ಯಾಪ್ಟನ್ ಯಾವ ಉದ್ಯಮ ನಡೆಸ್ತಾ ಇದ್ದಾರೆ? ಅವ್ರ ಆದಾಯ ಮೂಲ ಯಾವುದು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರ್‌ಸಿಬಿ ಮತ್ತು ಸಿಎಸ್‌ಕೆ ಕದನಕ್ಕೆ ಕೌಂಟ್‌ಡೌನ್ – RCBಗೆ ಧೋನಿ, ಜಡ್ಡು ಭಯ..!
ಭಾರತಕ್ಕೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಫಿ ಗೆದ್ದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ.. ವಿಕೆಟ್ ಕೀಪರ್ ಆಗಿ ಭಾರತ ತಂಡಕ್ಕೆ ಕಾಲಿಟ್ಟು, ಸ್ಫೋಟಕ ಬ್ಯಾಟಿಂಗ್‌ನಿಂದ ಕ್ರಿಕೆಟ್ ಜಗತ್ತು ತಮ್ಮತ್ತ ತಿರುಗಿ ನೋಡುವಂತೆ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.. ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಅವರು ಐಪಿಎಲ್‌ನಲ್ಲಿ ಮಾತ್ರ ವಯಸ್ಸು ನಲ್ವತ್ತು ದಾಟಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಲೇ ಇದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ.
ಮೈದಾನದಲ್ಲಿ ಸರಿಯಾದ ಫೀಲ್ಡ್ ಪ್ಲೇಸ್ಮೆಂಟ್, ಪರ್ಫೆಕ್ಟ್ ಡಿಸಿಷನ್, ಕೂಲ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಧೋನಿ.. ಧೋನಿ ಮೈದಾನದಲ್ಲಿ ಎಷ್ಟು ಕೂಲ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಮೈದಾನದ ಹೊರಗೆ ಧೋನಿಗೆ ಬೇರೆ ಪ್ರಪಂಚವೇ ಇದೆ.. ಅನೇಕ ಕ್ರಿಕೆಟಿಗರಂತೆ ಎಂಎಸ್ ಧೋನಿ ಕೂಡ ಆಟ ಆಡುತ್ತಲೇ ಪರ್ಯಾಯ ಬಿಸಿನೆಸ್ಗಳನ್ನೂ ಬೆಳೆಸಿದ್ದಾರೆ. ಧೋನಿ ವಿವಿಧ ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲಿಯೂ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಹೀಗಾಗಿಯೇ ಧೋನಿ ದೇಶದ ಶ್ರೀಮಂತ ಕ್ರಿಕೆಟರ್ ರೇಸ್ ನಲ್ಲಿ ಒಬ್ಬರಾಗಿದ್ದಾರೆ.. ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 1,040 ಕೋಟಿ ರೂಪಾಯಿ.. ಅಂದ್ರೆ ಅವರ ಉದ್ದಿಮೆ ಗಳು ಎಷ್ಟು ದೊಡ್ಡದಿವೆ ಎನ್ನುವುದು ಅರ್ಥವಾಗುತ್ತದೆ ..
ಇನ್ನು ಬ್ಯುಸಿನೆಸ್ ವಿಷಯದಲ್ಲಿ ಎಂಎಸ್ ಧೋನಿಗೂ ಬೆಂಗಳೂರಿಗೂ ಸಂಬಂಧವಿದೆ. ಧೋನಿ ಬೆಂಗಳೂರಿನಲ್ಲಿ ಎಂಎಸ್ ಧೋನಿ ಗ್ಲೋಬಲ್ ಶಾಲೆ ತೆರೆದಿದ್ದಾರೆ. ಇದು CBSE ಆಂಗ್ಲ ಮಾಧ್ಯಮ ಶಾಲೆ. ಇನ್ನು ಧೋನಿ ಪಾನೀಯ ಬ್ರಾಂಡ್ ಮತ್ತು ಚಾಕೊಲೇಟ್ ಕಂಪನಿ 7ಇಂಕ್ ಬ್ರೀವ್ಸ್ (Brews )ನಲ್ಲಿ ಹೂಡಿಕೆ ಮಾಡಿದ್ದಾರೆ. ಸೆವನ್ ಸ್ಪೋರ್ಟ್ಸ್ ಕ್ಲೋತಿಂಗ್ ಬ್ರ್ಯಾಂಡ್, ಜಾಹೀರಾತು ಹೀಗೆ ಹಲವು ಕಡೆಗಳಿಂದ ಅವರು ಸಾಕಷ್ಟು ಆದಾಯ ಗಳಿಸುತ್ತಾರೆ. ಎಂಎಸ್ ಧೋನಿ ಅವರು ತಮ್ಮ ತವರು ರಾಂಚಿಯಲ್ಲಿ ಮಾಹಿ ರೆಸಿಡೆನ್ಸಿ ಹೆಸರಿನ ಹೋಟೆಲ್ ಅನ್ನು ಹೊಂದಿದ್ದಾರೆ.
ಮಹೇಂದ್ರ ಸಿಂಗ್ ಧೋನಿಗೆ ಫಿಟ್ನೆಸ್ ಗೆ ವಿಶೇಷ ಆದ್ಯತೆಕೊಡ್ತಾರೆ.. ಖುದ್ದು ಫಿಟ್ ಆಗಿರಲು ಬೇಕಾದ ಎಲ್ಲ ಕಸರತ್ತು ಮಾಡುತ್ತಾರೆ. ಹೀಗಾಗಿಯೇ ಧೋನಿ ಈ ಕ್ಷೇತ್ರದಲ್ಲೂ ಹೂಡಿಕೆ ಮಾಡಿದ್ದಾರೆ. ತಮ್ಮ ಹೆಸರನ್ನೇ ಬ್ರ್ಯಾಂಡ್ ಮಾಡಿಕೊಂಡಿರುವ ಜಿಮ್ ಹೊಂದಿದ್ದು, ಇದರ ಹೆಸರು ಧೋನಿ ಸ್ಪೋರ್ಟ್ಸ್ ಫಿಟ್. ಈ ಜಿಮ್ ದೇಶಾದ್ಯಂತ 200 ಕ್ಕೂ ಹೆಚ್ಚು ಫ್ರಾಂಚೈಸಿ ಗಳನ್ನು ಹೊಂದಿದೆ..
ಧೋನಿ ಕೋವಿಡ್ ಸಮಯದಲ್ಲಿ ಕೃಷಿ ಕೆಲಸಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ತಮ್ಮ ತೋಟದಲ್ಲಿ ವಿವಿಧ ತರಕಾರಿ, ದೇಶದ ವಿವಿಧ ತಳಿಯ ಕೋಳಿಗಳನ್ನು ಸಾಕುತ್ತಾರೆ… ಐಪಿಎಲ್‌ನಲ್ಲಿ ಒಂದು ವರ್ಷದಲ್ಲಿ ಅವರ ಸಂಭಾವನೆ 12 ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ.. ಸೋಷಿಯಲ್ ಮೀಡಿಯಾ ಎಂಡೋರ್ಸ್ಮೆಂಟ್ಗಳಿಂದ ಕೋಟಿ ಕೋಟಿ ಆದಾಯ ಗಳಿಸುತ್ತಾರೆ. ಪ್ರತೀ ಬ್ರ್ಯಾಂಡ್ ಎಂಡೋರ್ಸ್ಮೆಂಟ್ಗಳಿಂದ 6 ಕೋಟಿ ರೂವರೆಗೆ ಸಂಭಾವನೆ ಪಡೆಯುತ್ತಾರೆ. ಹೀಗೆ ಮಹೇಂದ್ರ ಸಿಂಗ್ ಧೋನಿ ತಮ್ಮ ವಿವಿಧ ವ್ಯವಹಾರಗಳ ಮೂಲಕ ಕ್ರಿಕೆಟ್ ಐಕಾನ್ ಆಗಿ ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ..