ಎಲ್ಲರಿಗೂ ಮಾದರಿ ಈ ಪುಟಾಣಿ – ತಾಯಿ ಜೊತೆ ಕೃಷಿಯಲ್ಲಿ ತೊಡಗಿಸಿಕೊಂಡ ಪುಟ್ಟ ಪೋರಿ!

ಇದು ಸೋಶಿಯಲ್ ಮೀಡಿಯಾ ಜಮಾನ.. ಮಕ್ಕಳು ದಿನವಿಡಿ ಟಿವಿ ನೋಡುತ್ತಾ, ಮೊಬೈಲ್‌ನಲ್ಲೇ ಕಾಲ ಕಳೀತಾ ಇರ್ತಾರೆ. ಓದು, ಕೆಲಸ ಬಿಡಿ.. ಆಟವಾಡುವುದಕ್ಕೂ ಉದಾಸೀನ ಮಾಡುತ್ತಾರೆ. ಆದ್ರೆ ಇಲ್ಲೊಂದು ಪುಟ್ಟ ಹುಡುಗಿ ತಾಯಿಯೊಂದಿಗೆ ಗದ್ದೆಗೆ ಹೋಗಿ ಕೆಲಸ ಮಾಡುತ್ತಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಇನ್ನು ಮುಂದೆ ಡಾರ್ಲಿಂಗ್ ಎಂದು ಕರೆದರೆ ಜೋಕೆ..! – ಕಂಬಿ ಎಣಿಸಬೇಕಾದಿತು ಹುಷಾರ್!
ಈಗಿನ ಕಾಲದಲ್ಲಿ ಮಕ್ಕಳು ಬಿಡಿ.. ದೊಡ್ಡವರು ಕೂಡ ಮನೆ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.. ಆದ್ರೆ ಇಲ್ಲೊಂದು ಪುಟ್ಟ ಬಾಲಕಿ ರಜಾ ದಿನದಲ್ಲಿ ಮೊಬೈಲ್, ಟಿವಿ ನೋಡುತ್ತಾ ಸಮಯ ಕಳೆಯದೆ ಹೊಲದ ಕಡೆಗೆ ಹೋಗಿ ತನ್ನ ತಾಯಿಯ ಕೃಷಿ ಕೆಲಸಕ್ಕೆ ಸಹಾಯವಾಗಿ ನಿಂತಿದ್ದಾಳೆ. ಇದ್ರ ವಿಡಿಯೋವೊಂದನ್ನು @Viral Post Kannada ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ಇಂತಹ ಮಕ್ಕಳನ್ನು ಪಡೆಯಲು ತಂದೆ ತಾಯಿ ತುಂಬಾನೇ ಪುಣ್ಯ ಮಾಡಿರಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಪುಟ್ಟ ಕಂದಮ್ಮ ತನ್ನ ಅಮ್ಮನ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸುಮಾರು 5 ವರ್ಷ ವಯಸ್ಸಿನ ಪುಟ್ಟ ಬಾಲೆ ತನ್ನ ಬಿಡುವಿನ ಸಮಯದಲ್ಲಿ ಮೊಬೈಲ್ ಅಥವಾ ಟಿವಿ ನೋಡುತ್ತಾ ಸಮಯ ಕಳೆಯದೆ, ಹೊಲಕ್ಕೆ ಬಂದು ತಾಯಿಯ ಕೃಷಿ ಕೆಲಸಕ್ಕೆ ಸಹಾಯ ಮಾಡಿದೆ. ಒಂದೆಡೆ ತಾಯಿ ಬೆಳೆಗಳ ನಡುವಿನ ಕಳೆಗಳನ್ನು ಕಿತ್ತರೆ, ಈ ಮಗು ನಗುನಗುತ್ತಲೇ ಆ ಕಿತ್ತ ಕಳೆಗಳನ್ನು ಅತ್ತಕಡೆ ಬಿಸಾಡಿ ಬರುವ ಕೆಲಸವನ್ನು ಮಾಡಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಇಂತಹ ಜೀವನ ಪಾಠವನ್ನು ಕಲಿಸಿಕೊಡಬೇಕೆಂದು ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದಾರೆ.