ಅಯ್ಯೋ.. ನೀನಿನ್ನು ಬ್ರಷ್ ಮಾಡಿಲ್ವಾ? – ಎಮ್ಮೆಗೆ ಹುಲ್ಲುಜ್ಜಿಸಿದ ಪುಟಾಣಿ!

ಮಕ್ಕಳು ಏನ್ ಮಾಡಿದ್ರೂ ಚೆಂದ.. ತೊದಲು ಮಾತನಾಡುತ್ತಾ ಏನಾದ್ರೂ ಒಂದು ಕಿತಾಪತಿ ಮಾಡುತ್ತಲೇ ಇರುತ್ತಾರೆ. ಇದೀಗ ಇಲ್ಲೊಂದು ಕಂದಮ್ಮಗೆ ಅಮ್ಮ ಹಲ್ಲುಜ್ಜು ಅಂತ ಹೇಳಿದ್ರೆ, ಈ ಪುಟಾಣಿ ಎಮ್ಮೆ ಕರುವಿಗೆ ಬ್ರಷ್ ಮಾಡಿಸಿದೆ. ಇದ್ರ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಯಾವುದೋ ನಿಲ್ದಾಣಕ್ಕೆ ಇನ್ಯಾವುದೋ ಹೆಸರು! – BMRCLಗೆ ಆಟ.. ಪ್ರಯಾಣಿಕರಿಗೆ ಪ್ರಾಣ ಸಂಕಟ
ಮಕ್ಕಳಿಗೆ ಹಲ್ಲುಜ್ಜಿಸುವುದು ಪೋಷಕರಿಗೆ ದೊಡ್ಡ ಟಾಸ್ಕ್.. ಹಲ್ಲು ಉಜ್ಜೋಣ ಬಾ ಅಂದ್ರೆ ಅತ್ತು ದೊಡ್ಡ ಡ್ರಾಮಾ ಮಾಡಿ ಬಿಡುತ್ತಾರೆ. ಇಲ್ಲೊಂದು ಮಗು ತಾನು ಹಲ್ಲು ಉಜ್ಜೋದು ಬಿಟ್ಟು ಎಮ್ಮೆ ಕರುವಿನ ಹಲ್ಲು ಉಜ್ಜಿಸುವುದರಲ್ಲಿ ಬ್ಯುಸಿಯಾಗಿದೆ. ಪುಟಾಣಿ ಎಮ್ಮೆ ಕರು ಹಲ್ಲುಜ್ಜಲು ಪರದಾಡುತ್ತಿರುವ ಈ ಪುಟಾಣಿ ವಿಡಿಯೋ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಈ ಕ್ಯೂಟ್ ವಿಡಿಯೋವನ್ನ ದೀಪಕ್ ಕುಮಾರ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಎಮ್ಮೆಯ ಕರುವಿಗೆ ಹಲ್ಲುಜ್ಜಿಸುತ್ತಾ, ತಾನು ಮಾಡುತ್ತಿರುವ ಕೆಲಸವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಅದ್ಭುತ ಮಗ ಎಂದಿದ್ದಾರೆ. ಇನ್ನೊಬ್ಬರು, ಜೆಂಟಲ್ ಡೆಂಟಲ್ ಕ್ಲಿನಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಬಾಲ್ಯದ ದಿನಗಳೇ ಆಗಿತ್ತು ಎಂದು ಹೇಳಿದ್ದಾರೆ.

ನೋಡಿರಿ

