ಭುಜದ ಸುತ್ತ ಕೈ ಹಾಕಿದ ನಿರ್ದೇಶಕ ಕೊಟ್ಟೇ ಬಿಟ್ಟ ‘ಕಿಸ್’ – ಡೈರೆಕ್ಟರ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್

ಭುಜದ ಸುತ್ತ ಕೈ ಹಾಕಿದ ನಿರ್ದೇಶಕ ಕೊಟ್ಟೇ ಬಿಟ್ಟ ‘ಕಿಸ್’ – ಡೈರೆಕ್ಟರ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್

ಆ ನಟಿ 9 ವರ್ಷಗಳಿಂದ ನಟನೆಯ ಮೂಲಕ ಸಿನಿಮಾರಂಗದಲ್ಲಿ ತನ್ನದೇ ಆದ ಮಟ್ಟಿಗೆ ಖ್ಯಾತರಾಗಿದ್ದರು. ಜೊತೆಗೆ ತನಗೊಂದು ಒಳ್ಳೇ ಸಿನಿಮಾ ಸಿಗಬೇಕು ಎಂದು ಸಕ್ಸಸ್ ಸಿನಿಮಾಕ್ಕಾಗಿ ಕಾಯುತ್ತಿದ್ದರು. ತೆಲುಗು ಚಿತ್ರವೊಂದರಲ್ಲಿ ಆಕೆ ನಟಿಸುತ್ತಿದ್ದು ಸಿನಿಮಾ ಟೀಸರ್ ಬಿಡುಗಡೆಗೆಂದು ಬಂದಿದ್ದರು. ಆಗ ಅಲ್ಲಿ ನಡೆದ ಪ್ರಸಂಗದಿಂದಾಗಿ ಆಕೆ ಮುಜುಗರಕ್ಕೊಳಗಾಗಬೇಕಾಯ್ತು. ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಸಹೋದರ ಸಂಬಂಧಿ ನಟಿ ಮನ್ನಾರ ಚೋಪ್ರಾ ಇಂಥಾ ಒಂದು ಅಸಹಜ ಸನ್ನಿವೇಶಕ್ಕೆ ಸಾಕ್ಷಿಯಾಗಿ ತೀವ್ರ ಮುಜುಗರಪಟ್ಟಿದ್ದಾರೆ.

ಇದನ್ನೂ ಓದಿ: ‘ತನ್ನ ಕೈ ಹಿಡಿದಿರುವ ಮನದನ್ನೆ’ – ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಹಿಡಿದಿದ್ದು ಯಾರ ಕೈ ?

ತೆಲುಗು ಚಿತ್ರರಂಗದ ನಿರ್ದೇಶಕ ರವಿಕುಮಾರ್ ಚೌದರಿ ‘ತಿರಗಬದರ ಸಾಮಿ’ ತೆಲುಗು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಟ ರಾಜ್ ತರುಣ್‌ಗೆ ನಾಯಕ ನಟಿಯಾಗಿ ಮನ್ನಾರ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರ ಸಹೋದರ ಸಂಬಂಧಿಯಾಗಿರುವ ನಟಿ ಮನ್ನಾರ ಚೋಪ್ರಾ, 9 ವರ್ಷಗಳಿಂದ ಸಕ್ಸಸ್ ಸಿನಿಮಾದ ನಿರೀಕ್ಷೆಯಲ್ಲಿದ್ದರು. ಮನ್ನಾರ ಚೋಪ್ರಾ ‘ತಿರಗಬದರ ಸಾಮಿ’ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ ಎಸ್ ರವಿಕುಮಾರ್ ಚೌಧರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಗೆಂದು ನಟಿ ಮನ್ನಾರ ಚೋಪ್ರಾ ಅವರು ನಿರ್ದೇಶಕ ರವಿಕುಮಾರ್ ಜೊತೆಗೆ ಬಂದಿದ್ದರು. ಈ ವೇಳೆ ಕ್ಯಾಮೆರಾಗಳ ಎದುರು ನಟಿ ಮನ್ನಾರ ಚೋಪ್ರಾ ಅವರ ಭುಜದ ಸುತ್ತ ರವಿಕುಮಾರ್ ಕೈ ಹಾಕಿದ್ದಾರೆ. ನಂತರ ಸುಮ್ಮನಿರಲಾದೇ, ಎಲ್ಲರ ಎದುರೇ ನಟಿಯನ್ನು ಚುಂಬಿಸಿದ್ದಾರೆ.

ನಿರ್ದೇಶಕರು ಸಡನ್ ಆಗಿ ಕಿಸ್ ಮಾಡಿದ್ದು ನೋಡಿ ನಟಿ ಮನ್ನಾರ ಚೋಪ್ರಾ ಕ್ಷಣಕಾಲ ಗಾಬರಿಯಾದರು. ನಿರ್ದೇಶಕನ ಮುತ್ತಿನಿಂದ ಆಘಾತಗೊಂಡ ಮನ್ನಾರ ಚೋಪ್ರಾ ತೀವ್ರ ಮುಜುಗರಕ್ಕೊಳಗಾದಂತೆ ಕಂಡುಬಂದರು. ಈ ದೃಶ್ಯ ಈಗ ವೈರಲ್ ಆಗಿದೆ. ನಟಿಯೊಬ್ಬರಿಗೆ ನಿರ್ದೇಶಕ ಈ ರೀತಿ ಕಿಸ್ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಟಿಗೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ ಅಭಿಮಾನಿಗಳು.

suddiyaana