ನೋಡಲು ಕೋಲಿನಂತಿದ್ರೂ ಇದು ಕೋಲಲ್ಲ – ವೈರಲ್ ಆದ ವಿಡಿಯೋದಲ್ಲೇನಿದೆ?

ನೋಡಲು ಕೋಲಿನಂತಿದ್ರೂ ಇದು ಕೋಲಲ್ಲ – ವೈರಲ್ ಆದ ವಿಡಿಯೋದಲ್ಲೇನಿದೆ?

ಪ್ರಕೃತಿ ವಿಸ್ಮಯಗಳ ತಾಣ. ಇಲ್ಲಿ ಎಲ್ಲಾ ಜೀವಿಗಳು ಒಂದಲ್ಲ ಒಂದು ವಿಶೇಷತೆಯನ್ನು ಹೊಂದಿರುತ್ತವೆ. ಕೆಲವೊಂದು ಜೀವಿಗಳು ತಮಗೆ ಅಪಾಯವಿದೆ ಎಂದು ಗೊತ್ತಾದಾಗ ತಮ್ಮನ್ನು ತಾವು ಮರೆ ಮಾಚುವ ಅದ್ಭುತ ಶಕ್ತಿಯೂ ಇರುತ್ತವೆ. ಅಲ್ಲೊಂದು ಜೀವಿ ಇದೆ ಎಂಬುದೇ ಗೊತ್ತಾಗದ ಮಟ್ಟಿಗೆ ಇವುಗಳು ತಮ್ಮನ್ನು ತಾವು ಮರೆ ಮಾಚಿಕೊಳ್ಳುತ್ತವೆ. ಇದು ಪ್ರಕೃತಿ ಈ ಜೀವಿಗಳಿಗೆ ನೀಡಿರುವ ರಕ್ಷಣಾ ಕವಚ. ಇಂತಹ ಸಾಕಷ್ಟು ದೃಶ್ಯಗಳನ್ನು ನೋಡಿರಬಹುದು. ಊಸರವಳ್ಳಿ, ಗಿಡದಂತಹ ಕೀಟ, ಒಣ ಎಲೆಯಂತಹ ಚಿಟ್ಟೆ, ಮರದ ತುಂಡಿನಂತಹ ಜೀವಿ… ಇವೆಲ್ಲವನ್ನೂ ನಾವು ನೋಡಿರುತ್ತೇವೆ. ಇಂತಹದ್ದೇ ಕೀಟದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 3,000 ಮೀಟರ್ ಸಮುದ್ರದ ಆಳದಲ್ಲಿ “ಹಳದಿ ಇಟ್ಟಿಗೆ ರಸ್ತೆ”!

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಒಣಗಿದ ಕೋಲನ್ನು ತೋರಿಸಲಾಗುತ್ತದೆ.  ಆಗ ಅಲ್ಲಿ ಒಬ್ಬರು ನಿಧಾನಕ್ಕೆ ಕೈ ಮುಂದಕ್ಕೆ ಚಾಚುತ್ತಾರೆ. ಆಗಲೂ ಆ `ಕೋಲಿ’ನಲ್ಲಿ ಅಂತಹ ವ್ಯತ್ಯಾಸವೇನು ಕಾಣುವುದಿಲ್ಲ. ಆದರೆ, ಸ್ವಲ್ಪ ಹೊತ್ತಲ್ಲೇ ಆ ಕೋಲಿನ ಬಣ್ಣದ್ದೇ ಜೀವಿಯೊಂದು ನಿಧಾನಕ್ಕೆ ಚಲಿಸುವುದು ಕಾಣಿಸುತ್ತದೆ. ಈ ದೃಶ್ಯ ಎಲ್ಲರನ್ನೂ ಕಣ್ಣರಳಿಸಿ ನೋಡುವಂತೆ ಮಾಡುತ್ತಿದೆ. `ನಂಬಲಾಗದ ಮರೆಮಾಚುವಿಕೆ. ಇದು ಅವರದೇ ಆದ ರಕ್ಷಣಾ ಕಾರ್ಯವಿಧಾನ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಕಸ್ವಾನ್ ಅವರು ಹಂಚಿಕೊಂಡಿದ್ದಾರೆ.

ಪ್ರಕೃತಿಯಲ್ಲಿ ಅಡಗಿರುವ ವಿಶೇಷತೆ ಮತ್ತು ಪ್ರಕೃತಿಯ ರಹಸ್ಯ ಎಲ್ಲರನ್ನೂ ಬೆರಗುಗೊಳಿಸಿದೆ. ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದ್ದು, ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.

suddiyaana