ಸ್ನೇಹಿತೆಯ ಬಾಯ್‌ಫ್ರೆಂಡ್‌ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ, ಹೆಂಡತಿ ಮಧ್ಯೆ ಜಗಳ! – ಆಮೇಲೆ ಆಗಿದ್ದು ಘೋರ ದುರಂತ!

ಸ್ನೇಹಿತೆಯ ಬಾಯ್‌ಫ್ರೆಂಡ್‌ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ, ಹೆಂಡತಿ ಮಧ್ಯೆ ಜಗಳ! – ಆಮೇಲೆ ಆಗಿದ್ದು ಘೋರ ದುರಂತ!

ಸ್ನೇಹಿತೆಯ ಪ್ರಿಯಕರನ ಕಾಲ್‌ ರಿಸೀವ್‌ ಮಾಡಿದ್ದಕ್ಕೆ ಗಂಡ – ಹೆಂಡತಿ ಮಧ್ಯೆ ಜಗಳ ನಡೆದಿದ್ದು, ಪತ್ನಿ ದುರಂತ ಅಂತ್ಯ ಕಂಡಿದ್ದಾಳೆ.

ಇದನ್ನೂ ಓದಿ: ಆವತ್ತು ಸೋಲದಿದ್ರೆ ಇವತ್ತು ಗೆಲ್ಲುತ್ತಿರಲಿಲ್ಲ – ಚಿನ್ನದ ಹುಂಡಿ ಚಿಲ್ರೆ ಕಾಸಿಗೆ ಇಟ್ಟಿದ್ರಾ?

ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಮೃತಳನ್ನು ವರಲಕ್ಷ್ಮಿ(25) ಎಂದು ಗುರುತಿಸಲಾಗಿದ್ದು, ಗಂಡ ಗಂಗರಾಜು ಪತ್ನಿಯನ್ನು ಕೊಂದು ನೇಣು ಹಾಕಿರುವ ಆರೋಪ ಕೇಳಿಬಂದಿದೆ.

ಏನಿದು ಘಟನೆ?

ಘಟನೆ ನಡೆದ ದಿನ ಮೃತ ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ಕರೆ ಮಾಡಿದ್ದ. ಆತನ ಕರೆಯನ್ನು ವರಲಕ್ಷ್ಮಿ ರಿಸೀವ್ ಮಾಡಿದ್ದಳು. ಇದೇ ವಿಚಾರಕ್ಕೆ ಗಂಡ, ಹೆಂಡತಿ ಮಧ್ಯೆ ಗಲಾಟೆಯಾಗಿತ್ತು. ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆ ವಹಿಸಿಬೇಡಿ ಎಂದು ಗಂಡ ಬುದ್ಧಿವಾದ ಹೇಳಿದ್ದ. ಆದರೆ ಗಲಾಟೆ ತಾರಕಕ್ಕೇರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿಯ ಶವ ಪತ್ತೆಯಾಗಿದೆ.

ಸದ್ಯ ಮೃತಳ ಕುಟುಂಬಸ್ಥರು ಗಂಡ, ಅತ್ತೆ ಹಾಗೂ ಮಾವನ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.

Shwetha M