ಹಸಿವಾಯ್ತು ಎಂದು ಮುಳ್ಳುಹಂದಿಯನ್ನೇ ತಿಂದ ಹಾವು! – ಆಮೇಲೆ ಏನಾಯ್ತು ಗೊತ್ತಾ?

ಹಸಿವಾಯ್ತು ಎಂದು ಮುಳ್ಳುಹಂದಿಯನ್ನೇ ತಿಂದ ಹಾವು! – ಆಮೇಲೆ ಏನಾಯ್ತು ಗೊತ್ತಾ?

ಭೂಮಿ ಮೇಲೆ ಇರುವ ಸಕಲ ಜೀವರಾಶಿಗೂ ಅಹಾರ ಅತ್ಯಗತ್ಯ. ಪ್ರತಿಯೊಂದು ಜೀವಿಯೂ ತಾನು ಬದುಕಲು ನಿತ್ಯ ಹೋರಾಟ ಮಾಡುತ್ತಲೇ ಇವೆ. ಒಂದು ಜೀವಿ ಮತ್ತೊಂದು ಜೀವಿಯನ್ನು ಬೇಟೆಯಾಡಿ ತಿಂದು ಬದುಕುತ್ತವೆ. ಹಾವುಗಳು ಪರಭಕ್ಷಕವಾಗಿದ್ದು, ಕಪ್ಪೆ, ಕೀಟ, ಹಲ್ಲಿ, ಇಲಿ ಮುಂತಾದವುಗಳನ್ನು ತಿಂದು ತನ್ನ ಹಸಿವು ನೀಗಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಹಾವು ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದೆ. ಇದರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಭೂಮಿ ಮೇಲಿರುವ ಪ್ರತಿಯೊಂದು ಜೀವಿಯ ರಕ್ಷಣೆಗಾಗಿ ಪ್ರತಿಯೊಂದು ಸೃಷ್ಟಿಕರ್ತ ರಕ್ಷಣಾ ಕವಚಗಳನ್ನೂ ನೀಡಿರುತ್ತಾರೆ. ಕೆಲವೊಂದು ಪ್ರಾಣಿಗಳು ಅದರ ಬಲಿಷ್ಠವಾದ ಹಲ್ಲುಗಳನ್ನು ಹೊಂದಿದ್ದರೆ, ಇನ್ನೂ ಕೆಲವು ಪ್ರಾಣಿಗಳು ಬಲಿಷ್ಠವಾದ ಸ್ನಾಯುಗಳನ್ನು ಹೊಂದಿರುತ್ತವೆ. ಹಾವಿಗೆ ವಿಷ ಹೇಗೆ ರಕ್ಷಣಾ ಕವಚವೋ, ಮುಳ್ಳುಹಂದಿಗೆ ಅದರ ಮುಳ್ಳುಗಳೇ ರಕ್ಷಣಾ ಕವಚ. ಮುಳ್ಳುಹಂದಿಗಳ ಈ ಮುಳ್ಳುಗಳ ಕಾರಣಕ್ಕಾಗಿಯೇ ಮನುಷ್ಯ ಸೇರಿದಂತೆ ಯಾವ ಪ್ರಾಣಿಗಳೂ ಕೂಡ ಅದರ ಬೇಟೆಗೆ ಹೆದರುತ್ತಾರೆ. ಯಾಕೆಂದರೆ, ಅದರ ಮುಳ್ಳುಗಳು ಅಷ್ಟು ಹರಿತ. ಬಹುಶಃ ಸಕಲ ಜೀವಜಂತುಗಳಿಗೂ ಇದರ ಬಗ್ಗೆ ಗೊತ್ತು. ಆದರೆ ಇಲ್ಲೊಂದು ಕಡೆ ಹಾವೊಂದು ಮುಳ್ಳುಹಂದಿಯನ್ನು ಬೇಟೆಯಾಡಿ ತಿಂದಿದೆ!

ಇದನ್ನೂ ಓದಿ: ಮಗು ಅಳುವುದನ್ನು ನಿಲ್ಲಿಸಲು ಹಾಲಿನ ಬದಲು ಆಲ್ಕೋಹಾಲ್‌ ಕುಡಿಸಿದ ಮಹಿಳೆ – ಆಮೇಲೆ ಏನಾಯ್ತು ಗೊತ್ತಾ?

ಇಸ್ರೇಲ್‌ನ ಶೋಹಾಮ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ತೀರಾ ಅಪರೂಪವಾದ ಸಂಗತಿಯನ್ನು ಸರೀಸೃಪಗಳ  ಪರಿಸರ ವಿಜ್ಞಾನಿ ಅವಿಯಾದ್‌ ಬಾರ್ ಸೆರೆಹಿಡಿದಿದ್ದು, ಈ ದೃಶ್ಯ ಭಾರಿ ವೈರಲ್‌ ಆಗುತ್ತಿದೆ. ಹಾವೊಂದು ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನಿಸಿದೆ. ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು ಹಾಗೂ ಮುಳ್ಳುಹಂದಿ ಎರಡೂ ಸಾವು ಕಂಡಿದೆ.

ಶೋಹಾಮ್‌ನ ಡಾಗ್‌ಪಾರ್ಕ್‌ನಲ್ಲಿ ಇತ್ತೀಚೆಗೆ ಈ ಹಾವು ಕಾಣಿಸಿಕೊಂಡಿತ್ತು. ಆದರೆ, ಜನರು ನೋಡುವ ವೇಳೆಗಾಗಲೇ ಈ ಹಾವು ಜೀವ ಕಳೆದುಕೊಂಡಿತ್ತು. ಮುಳ್ಳುಹಂದಿಯ ಮುಳ್ಳುಗಳು ಅದರ ಬಾಯಿಗೆ ಚುಚ್ಚಿಕೊಂಡಿತ್ತು. ಇನ್ನೊಂದೆಡೆ, ಮುಳ್ಳು ಹಂದಿಯ ತಲೆ, ಹಾವಿನ ಬಾಯಿಯ ಒಳಗೆ ಇದ್ದಿದ್ದರಿಂದ ಅದೂ ಕೂಡ ಉಸಿರುಕಟ್ಟಿ ಸಾವು ಕಂಡಿದೆ. ನೇಚರ್ ಅಂಡ್ ಪಾರ್ಕ್ಸ್ ಅಥಾರಿಟಿಯ ಸರೀಸೃಪ ಪರಿಸರಶಾಸ್ತ್ರಜ್ಞ ಅವಿಯಾದ್‌ ಬಾರ್ ಸ್ಥಳಕ್ಕೆ ಭೇಟಿ ನೀಡಿದ ವೇಳೆ ದೈತ್ಯ ಕಪ್ಪು ಚಾವಟಿ ಹಾವು ಹಾಗೂ ಮುಳ್ಳು ಹಂದಿ ಎರಡೂ ಕೂಡ ಸಾವು ಕಂಡಿದೆ ಎಂದು ತಿಳಿಸಿದ್ದಾರೆ.

ಪರಿಸ್ಥಿತಿಯ ವಿಶ್ಲೇಷಣೆ ಮಾಡಿದ ಅವರು, ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನಿಸಿದ ಕ್ಷಣವೇ ತನ್ನ ನಿರ್ಧಾರ ತಪ್ಪು ಎನ್ನುವುದು ಹಾವಿಗೆ ಅರಿವಾಗಿತ್ತು. ಹಿಂದೆಂದೂ ತಿನ್ನದ ವಿಶೇಷ ಪ್ರಾಣಿಯನ್ನು ತಿನ್ನಬೇಕು ಎಂದು ನಿರ್ಧಾರ ಮಾಡಿ ಅದರ ಪ್ರಯತ್ನಕ್ಕೆ ಮುಂದಾದ ವೇಳೆಯೇ ತಾನು ತಪ್ಪು ಮಾಡಿದ್ದೇನೆ ಎಂದು ಅದಕ್ಕೆ ಅರಿವಾಗಿದೆ. ತಕ್ಷಣವೇ ಮುಳ್ಳು ಹಂದಿಯನ್ನು ಹೊರಹಾಕಲು ಪ್ರಯತ್ನಿಸಿದರೂ ಅದು ಕೂಡ ಸಾಧ್ಯವಾಗಲಿಲ್ಲ ಎಂದಿದ್ದಾರೆ.

suddiyaana