ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬಿದ್ದೇ ಬಿಡ್ತಾ ಚಂದ್ರಯಾನ-3 ತುಣುಕು..?

ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬಿದ್ದೇ ಬಿಡ್ತಾ ಚಂದ್ರಯಾನ-3 ತುಣುಕು..?

ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಮುಂಜಾನೆಯಿಂದಲೇ ಜನ ಸುತ್ತುವರೆದಿದ್ದರು. ಇಷ್ಟು ದೊಡ್ಡ ವಸ್ತು, ಅದು ಕೂಡಾ ಭಾರೀ ಗಾತ್ರದ ಲೋಹದ ಸಿಲಿಂಡರ್ ರೀತಿ ಇರುವ ವಸ್ತು ಎಲ್ಲಿಂದ ಬಂತು?. ಇದು ರಾಕೆಟ್ ತುಣುಕು ಇಲ್ಲವೇ ಇತ್ತೀಚಿಗೆ ಚಂದ್ರನತ್ತ ಹೊರಟ ಚಂದ್ರಯಾನ-3 ತುಣುಕು ಇರಬಹುದಾ ಹೀಗೆ ಜನ ಗೊಂದಲದಲ್ಲಿದ್ದಾರೆ. ಇದೀಗ ಆ ವಸ್ತುವಿನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ದೇವರಿಗೆ ಹರಕೆ ಸಲ್ಲಿಕೆ – ಚಿನ್ನಲೇಪಿತ ಬೆಳ್ಳಿ ನಾಗಾಭರಣ ಸಲ್ಲಿಸಿದ ಅಭಿಮಾನಿ

ಭಾರೀ ಗಾತ್ರದ ಲೋಹದ ಸಿಲಿಂಡರ್ ಒಂದು ಪಶ್ಚಿಮ ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈ ಸಿಲಿಂಡರ್ ಆಕಾರದ ವಸ್ತು ರಾಕೆಟ್, ವಿಮಾನ ಅಥವಾ ಹಡಗಿನ ಬಿಡಿ ಭಾಗ ಆಗಿರಬಹುದೇ ಎಂಬ ಅನುಮಾನ ಕೆಲವರದ್ದು. ಇನ್ನು ಕೆಲವರು ಇದನ್ನು ಚಂದ್ರಯಾನ-3 ತುಣುಕು ಅಂತಿದ್ದಾರೆ. ಆಸ್ಟ್ರೇಲಿಯಾ ಪಶ್ಚಿಮ ಕರಾವಳಿಯ ಗ್ರೀನ್ ಹೆಡ್ ಟೌನ್‌ನಲ್ಲಿರುವ ಬೀಚ್‌ನಲ್ಲಿ ಈ ವಿಚಿತ್ರ ವಸ್ತು ಕಂಡುಬಂದಿದೆ. ಈ ನಿಗೂಢ ಹಾಗೂ ವಿಚಿತ್ರ ವಸ್ತುವಿನಿಂದ ದೂರ ಉಳಿಯುವಂತೆ ಪೊಲೀಸರು ಬೀಚ್‌ಗೆ ಬರುವ ಜನರಿಗೆ ಸೂಚನೆ ನೀಡುತ್ತಿದ್ದಾರೆ. ಈ ವಸ್ತುವಿನ ಸಮೀಪ ಸಾಗಿದ ವೇಳೆ ಅಪಾಯಕಾರಿ ಅನಿಲ ಅಥವಾ ಇನ್ಯಾವುದೇ ಆಪತ್ತು ಎದುರಾಗ ಬಹುದು ಎಂಬ ಭೀತಿಯಿರುವುದರಿಂದ  ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ವಸ್ತು ಯಾವುದೇ ವಿಮಾನದ ಬಿಡಿ ಭಾಗದಂತೆ ಕಂಡು ಬರ್ತಿಲ್ಲ. ಹೀಗಾಗಿ, ಜನರೂ ಕೂಡಾ ಚಿತ್ರ ವಿಚಿತ್ರ ರೀತಿಯ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಕೆಲವರು ಈ ವಸ್ತುವನ್ನು ಅನ್ಯ ಗ್ರಹ ಜೀವಿಗಳ ವಾಹನ ಯುಎಫ್ಒ ಇರಬಹುದೇ ಎಂದೂ ಊಹಿಸುತ್ತಿದ್ದಾರೆ. ಇನ್ನೂ ಕೆಲವರು ಕೆಲ ವರ್ಷಗಳ ಹಿಂದೆ ಸಮುದ್ರದ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿದ್ದ ಮಲೇಷ್ಯಾದ ವಿಮಾನದ ಬಿಡಿ ಭಾಗ ಇರಬಹುದೇ ಎಂದೂ ಲಿಂಕ್ ಕೊಡುತ್ತಿದ್ಧಾರೆ. ಈ ಬೃಹತ್ ಗಾತ್ರದ ಲೋಹದ ವಸ್ತುವಿನ ಮೂಲವೇನು ಎಂಬ ಕುರಿತಾಗಿ ತನಿಖೆ ನಡೆಯುತ್ತಿದೆ. ಹೀಗಾಗಿ, ಯಾವುದೇ ನಿರ್ಧಾರಕ್ಕೆ ಈಗಲೇ ಬರಲಾಗದು ಎಂದು ಪಶ್ಚಿಮ ಆಸ್ಟ್ರೇಲಿಯಾ ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಬಾಹ್ಯಾಕಾಶ ತಜ್ಞರೂ ಕೂಡಾ ಈ ಕುರಿತಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ. ಈ ವಸ್ತು ಏನಿರಬಹುದು? ಯಾವುದಾದ್ರೂ ದೇಶದ ರಾಕೆಟ್‌ನ ಬಿಡಿ ಭಾಗ ಇರಬಹುದೇ? ಸಮುದ್ರಕ್ಕೆ ಬಿದ್ದ ವಸ್ತು ತೇಲಿಕೊಂಡು ಇಲ್ಲಿಯವರೆಗೂ ಬಂದಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕಾಗಿ ವಿಶ್ವಾದ್ಯಂತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವರು ಈ ವಸ್ತುವು ಭಾರತದ ಚಂದ್ರಯಾನ 3ರ ಗಗನ ನೌಕೆ ಉಡಾಯಿಸಿದ ರಾಕೆಟ್‌ನ ಬಿಡಿ ಭಾಗ ಇರಬಹುದು ಎಂದೂ ವಿಶ್ಲೇಷಿಸುತ್ತಿದ್ದಾರೆ.

suddiyaana