ರೈಲು ಹಳಿ ಮೇಲೆ ಬಿದ್ದ ಬೃಹದಾಕಾರದ ಬಂಡೆ – 2 ಗಂಟೆ ನಿಂತಲ್ಲೇ ನಿಂತ ಪ್ಯಾಸೆಂಜರ್‌ ಟ್ರೈನ್‌

ರೈಲು ಹಳಿ ಮೇಲೆ ಬಿದ್ದ ಬೃಹದಾಕಾರದ ಬಂಡೆ – 2 ಗಂಟೆ ನಿಂತಲ್ಲೇ ನಿಂತ ಪ್ಯಾಸೆಂಜರ್‌ ಟ್ರೈನ್‌

ಟನಲ್‌ ಮೇಲಿನ ಗುಡ್ಡದಿಂದ ರೈಲ್ವೇ ಹಳಿ ಮೇಲೆ ಬೃಹದಾಕಾರದ ಕಲ್ಲು ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್‌ ಬಳಿ ನಡೆದಿದೆ.

ಇದನ್ನೂ ಓದಿ: ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ – ಒಟ್ಟಿಗೆ ಸ್ನಾನಮಾಡುತ್ತಿದ್ದ ಯುವಜೋಡಿಯ ದುರಂತ ಸಾವು..!

ರೈಲು ಹಳಿಗೆ ಬೃಹದಾಕಾರದ ಕಲ್ಲು ಬಿದ್ದಿದ್ದರಿಂದ ರೈಲುಗಳು ಮುಂದೆ ಹೋಗಲು ಸಾಧ್ಯವಾಗದೇ ಮಾರ್ಗ ಮಧ್ಯೆ ನಿಲ್ಲುವಂತಾಗಿತ್ತು. ಇದರಿಂದಾಗಿ ಬೀದರ್‌ – ಕಲಬುರಗಿ ಪ್ಯಾಸೆಂಜರ್‌ ರೈಲು 2 ಗಂಟೆ ನಿಂತಲ್ಲೇ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ, ಕಲ್ಲನ್ನು ಹಳಿಯಿಂದ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಎರಡು ಗಂಟೆ ಬಳಿಕ ಪ್ಯಾಸೆಂಜರ್‌ ರೈಲು ಬೀದರ್‌ ನಿಂದ ಕಲಬುರಗಿಗೆ ತಲುಪಿದೆ.

suddiyaana